ಅಂತರಾಷ್ಟ್ರೀಯ

ಹೊಟ್ಟೆಯ ಬೊಜ್ಜು ಸಮಸ್ಯೆ …ನಿಯಂತ್ರಣಕ್ಕೆ ಇಲ್ಲಿದೆ ಸರಳ ಸೂತ್ರ….

Pinterest LinkedIn Tumblr

bojju

ಝಿರೋ ಫಿಗರ್.. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಗೆ ಹಾಗೂ ಬಹಳಷ್ಟು ಜನರ ಹೊಟ್ಟೆಉರಿಗೆ ಕಾರಣವಾಗಿರುವ ಅಂಶ ಎಂದರೆ ತಪ್ಪಾಗುವುದಿಲ್ಲ. ಎಲ್ಲೆಡೆ ಚರ್ಚೆಯಾಗುತ್ತಿರುವ ಅಂಶ ಎಂದರೆ ಬೊಜ್ಜನ್ನು ಕಡಿಮೆ ಮಾಡುವುದು ಹೇಗೆ ಎಂಬುದು.

ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ 1980ರಿಂದೀಚೆಗೆ ವಿಶ್ವದಾದ್ಯಂತ ಬೊಜ್ಜಿನಿಂದ ಬಳಲುವವರ ಸಂಖ್ಯೆ ದುಪ್ಪಟ್ಟಾಗಿದೆ. 2008ರಲ್ಲಿ 20 ವರ್ಷ ವಯಸ್ಸಿಗಿಂತ ಮೇಲ್ಪಟ್ಟ 1.5 ಶತಕೋಟಿಯಷ್ಟು ಜನರು ಹೆಚ್ಚಿನ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರು.

ಅಲ್ಲದೆ, 5 ವರ್ಷ ವಯಸ್ಸಿಗಿಂತ ಕೆಳಗಿನ ಸುಮಾರು 4 .3 ಕೋಟಿ ಮಕ್ಕಳು ಹೆಚ್ಚಿನ ತೂಕದ ಸಮಸ್ಯೆಯಿಂದ ಬಳಲತ್ತಿದ್ದಾರೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ.

bojju11

* ದಿನದಲ್ಲಿ 24 ಬಾದಾಮಿ ಬೀಜವನ್ನು ತಿನ್ನುವ ಮೂಲಕ ಹೊಟ್ಟೆ ತುಂಬುವುದರ ಜೊತೆಗೆ ಹಸಿವು ನಿಯಂತ್ರಿಸಿ ಹೊಟ್ಟೆಯನ್ನು ಸಣ್ಣ ಮಾಡಲು ಅನುಕೂಲಕರವಾಗಿರುತ್ತದೆ.

* ಎರಡು ಟಿ ಚಮಚ ಪ್ರೋಟಿನ್ ಪೌಡರ್ ಸೇವಿಸಿದರೆ- ಅಮೈನೋ ಆಸಿಡ್ ಉತ್ಪತ್ತಿ ಮಾಡುವುದರ ಜೊತೆಗೆ ಕೊಬ್ಬನ್ನು ಕರಗಿಸುತ್ತದೆ.
* ಹಣ್ಣಿನ ಜ್ಯೂಸ್ ಒಂದು ಕಪ್ ಕುಡಿದರೆ ಹೊಟ್ಟೆ ತುಂಬಿದಂತೆ ಭಾಸವಾಗುವುದರ ಜೊತೆಗೆ ದೇಹವನ್ನು ತಂಪಾಗಿಸುತ್ತದೆ.

* ಬೆಳಗಿನ ತಿಂಡಿಯಾಗಿ ನಿತ್ಯ ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಳ್ಳುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಬಿ 12 ದೊರೆಯುತ್ತದೆ.

* ಹಾಲನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ದೊರೆಯುತ್ತದೆ. ಇದು ಕೊಬ್ಬನ್ನು ಕರಗಿಸುವುದರ ಜೊತೆಗೆ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ.

* ಒಟ್ಸ್ ತಿನ್ನವುದರಿಂದ ಶಕ್ತಿ ಹೆಚ್ಚಾಗಿ ಕೊಲೆಸ್ಟ್ರಾಲ್ ನಿಯಂತ್ರಣಗೊಳ್ಳುತ್ತದೆ. ಬ್ಲಡ್ ಶುಗರ್ ಲೆವೆಲ್ ಸಮತೋಲನೆ ಮಾಡುವ ಮೂಲಕ ತೂಕವನ್ನು ಇಳಿಸಲು ಸಹಕರಿಸುತ್ತದೆ.

* ದಿನವು ಒಂದು ದೊಡ್ಡ ಗಾತ್ರದ ಟೊಮ್ಯಾಟೋ ಸೇವನೆಯಿಂದ ಹೊಟ್ಟೆ ತುಂಬುತ್ತದೆ ಮತ್ತು ಇಡೀ ದಿನ ನೀವು ಉಲ್ಲಾಸವಾಗಿರುತ್ತೀರಿ.

* ಸೇಬಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಲಭ್ಯವಿದೆ. ಇದರಲ್ಲಿನ ಫೈಬರ್ ಅಂಶ ಡೈಜೆಷನ್ ಚನ್ನಾಗಿ ಆಗುತ್ತದೆ.

* 3 ಟೀ ಸ್ಪೂನ್ ಆಲಿವ್ ಆಯಿಲ್ ಸೇವಿಸಿದರೆ ದೇಹದಲ್ಲಿ ಉತ್ಪಾದನೆಯಾಗುವ ಕೊಬ್ಬಿನಾಂಶ ತಡೆಯುತ್ತದೆ.

Write A Comment