ಕರಾವಳಿ

ನಿಟ್ಟೆ ಫ್ರೆಂಡ್ಸ, ನಿಟ್ಟೆ ಇವರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ

Pinterest LinkedIn Tumblr

Nitte blood_sept 23_2015-002

ನಿಟ್ಟೆ ಫ್ರೆಂಡ್ಸ, ನಿಟ್ಟೆ ಇವರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಭಿರವು ದ. 13/09/2015 ರ ರವಿವಾರ ನೆರೆವೇರಿತು. ಶಿಬಿರವನ್ನು ಕಾರ್ಕಳದ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಎಂ ಚೆನ್ನಪ್ಪ ಮೊಯಿಲಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಿಟ್ಟೆ ಸಮುದಾಯ ಆರೋಗ್ಯಕೇಂದ್ರದ ಆಡಳಿತ ವೈದ್ಯಾಧಿಕಾರಿಯವರಾದ ಡಾ. ಅನಂತ ಕಾಮತ್ ಯು ಮಾತನಾಡಿ ರಕ್ತದಾನದ ಪ್ರಾಮುಖ್ಯತೆ ಮತ್ತು ಪ್ರಯೋಜನದ ಬಗ್ಗೆ ಮಾತನಾಡಿದರು. ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ. ಸುಚೀತರವರು ಮಾತನಾಡಿ ರಕ್ತದಿಂದ ಮನುಷ್ಯನ ಆರೋಗಯ ವೃದ್ದಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ರೆಸಿಡೆನ್ಸಿಯಲ್ ಆಂಗ್ಲ ಮಾದ್ಯಮ ಸಂಸ್ಥೆಯ ಪ್ರಾಂಶುಪಾಲ ಶ್ರೀ ವಸಂತ ಕುಮಾರ ನಿಟ್ಟೆ, ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ಪದ್ಮಾವತಿ ಅಮೀನ್, ನಿಟ್ಟೆ ಮದನಾಡು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಗೀತಾರವರು ಭಾಗವಹಿಸಿ ಶುಭ ಹಾರೈಸಿದರು.

Nitte blood_sept 23_2015-001

Nitte blood_sept 23_2015-003

Nitte blood_sept 23_2015-004

Nitte blood_sept 23_2015-005

Nitte blood_sept 23_2015-006

Nitte blood_sept 23_2015-007

Nitte blood_sept 23_2015-008

Nitte blood_sept 23_2015-009

Nitte blood_sept 23_2015-010

ಈ ಸಂಧರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ದೂಪದಕಟ್ಟೆ ಶ್ರೀ ಮಹಾಗಣಾಪತಿ ದೇವಸ್ತಾನದ ಅರ್ಚಕರಾದ ಶ್ರೀ ಲಕ್ಷ್ಮಣ ಕುಡ್ವ ಇವರು ಒಂದು ಮಿಕ್ಸಿಯನ್ನು ಹಾಗೂ ನಿಟ್ಟೆ ಫ್ರೆಂಡ್ಸ್ ವತಿಯಿಂದ ಒಂದು ಕಬಾಟನ್ನು ನೀಡಿಲಾಯಿತು.

Nitte blood_sept 23_2015-011

Nitte blood_sept 23_2015-012

Nitte blood_sept 23_2015-013

Nitte blood_sept 23_2015-014

Nitte blood_sept 23_2015-015

Nitte blood_sept 23_2015-016

Nitte blood_sept 23_2015-017

ಶ್ರೀ ರಮೇಶ್ ಬೊರ್ಗಲ್ ಗುಡ್ಡೆ ಸ್ವಾಗತಿಸಿ, ಶ್ರೀ ಪ್ರಶಾಂತ್ ಶೆಣೈ ಧನ್ಯವಾದ ಸಮರ್ಪಿಸಿದರು. ಸುಮಾರು 50 ಮಂದಿ ದಾನಿಗಳು ಸ್ವಯಂಪ್ರೇರಿತ ದಾನಿಗಳು ರಕ್ತದಾನ ಮಾಡಿದರು ಹಾಗು ಸಂಗ್ರಹಿತ ರಕ್ತವನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

Write A Comment