ಕರ್ನಾಟಕ ಸಂಘ ಶಾರ್ಜಾ ಆಯೋಜಿಸಿದ ರಕ್ತದಾನ ಶಿಬಿರ ದುಬಾಯಿ ಲತಿಫಾ ಆಸ್ಪತ್ರೆಯಲ್ಲಿ ಜುಲೈ 15ನೇ ತಾರೀಕು ಬುಧವಾರ ರಾತ್ರಿ 8.00 ಗಂಟೆಯಿಂದ 10.00 ಗಂಟೆಯವರೆಗೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನಿಗಳು ಆಗಮಿಸಿ ರಕ್ತದಾನ ಶಿಭಿರವನ್ನು ಯಶಸ್ವಿಗೊಳ್ಳಿಸಿದರು.
ಕರ್ನಾಟಕ ಸಂಘ ಶಾರ್ಜಾ ರಕ್ತ ದಾನ ಶಿಬಿರ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಮಾಜಿಕ ಕಾರ್ಯ ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸಿದ್ದು ಕಾರ್ಯಕಾರಿ ಸಮಿತಿಯ ವಿಶೇಷ ಕಾರ್ಯಕ್ರಮವಾಗಿತ್ತು.

ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಶ್ರೀ ಸತೀಶ್ ವೆಂಕಟರಮಣ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಪೂರ್ವಭಾವಿ ತಯಾರಿ ರಕ್ತದಾನ ಶಿಬಿರವು ಯಶಸ್ವಿಯಾಯಿತು. ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್, ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ, ಶ್ರೀ ನೋವೆಲ್ ಡಿ’ಅಲ್ಮೇಡಾ, ಶ್ರೀ ಸತೀಶ್ ಪೂಜಾರಿ, ಶ್ರೀ ಶಾಂತಾರಾಂ ಆಚಾರ್ ಹಾಗೂ ಪ್ರಭಾಕರ್ ಅಂಬಲತೆರೆ ಮತ್ತು ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಮಾಧ್ಯಮ ಮಿತ್ರರರಿಗೆ ಹಾಗೂ ರಕ್ತದಾನ ಅಯೋಜಿಸುವಲ್ಲಿ ಪೂರ್ಣ ಬೆಂಬಲ ಸಹಕಾರ ನೀಡುತ್ತಿರುವ ಮೊಗವೀರ್ಸ್ ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಸಾಲಿಯಾನ್ ರವರಿಗೆ ಮತ್ತು ಎಲ್ಲಾ ರಕ್ತ ದಾನಿಗಳಿಗೆ ಧನ್ಯವಾದ ಸಲ್ಲಿಸಲಾಯಿತು.
ಚಿಲ್ಲಿವಿಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತೀಶ್ ವೆಂಕಟರಮಣ ರವರು ತಮ್ಮ ಸಂಸ್ಥೆಯ ವತಿಯಿಂದ ಎಲ್ಲಾ ರಕ್ತದಾನಿಗಳಿಗೆ ಉಡುಗೊರೆಯನ್ನು ನೀಡಿದರು.
ರಂಜಾನ್ ಮಾಸದಲ್ಲಿ ಅತ್ಯಂತ ಹೆಚ್ಚು ರಕ್ತದ ಬೇಡಿಕೆ ಇರುವುದರಿಂದ ಕರ್ನಾಟಕ ಪರ ಹೆಚ್ಚಿನ ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ಕ ದಾನ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ.





































































