ಕರಾವಳಿ

ಶ್ರೀ ವಿಶ್ವಕರ್ಮ ಸೇವಾ ಸಮಿತಿ, ಯು.ಎ.ಇ. ಯ ನೂತನ ಪದಗ್ರಹಣ ಸಮಾರಂಭ

Pinterest LinkedIn Tumblr

Vishwakarma dubai-July 8_2015-002

ಶ್ರೀ ವಿಶ್ವಕರ್ಮ ಸೇವಾ ಸಮಿತಿ, ಯು.ಎ.ಇ. ಇದರ 2015 -2017ರ ಅವಧಿಗೆ ನೂತನ ಕಾರ್ಯಕಾರೀ ಸಮಿತಿಯ ಆಯ್ಕೆ ಪ್ರಕ್ರಿಯೆಯು ಇದೇ ದಿನಾಂಕ 03.07.2015 ನೆ ಶುಕ್ರವಾರ ಸಂಜೆ ಬರ್‌ದುಬೈನ ಫಾರ್ಚ್ಯೂನ್ ಗ್ರಾಂಡ್ ಹೋಟೆಲಿನ ಸಭಾಂಗಣದಲ್ಲಿ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ನೆರವೇರಿತು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಕಾರ್ಯಕಾರೀ ಸಮಿತಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ ಮತ್ತವರ ಸಹಯೋಗಿಗಳು ನೂತನ ಕಾರ್ಯಕಾರೀ ಸಮಿತಿಯ ಆಡಳಿತ ಮಂಡಳಿಯನ್ನು ಪ್ರಮಾಣ ವಚನ ಸ್ವೀಕಾರದ ಬಳಿಕ ವೇದಿಕೆಗೆ ಬರಮಾಡಿಕೊಂಡರು. ಪ್ರಮಾಣ ವಚನ ಬೋಧನಾ ಪ್ರಕ್ರಿಯೆಯನ್ನು ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಶಾಂತಾರಾಮ ಆಚಾರ್ಯರು ನೆರವೇರಿಸಿದರು. ನೂತನ ಸಮಿತಿಯ ಎಲ್ಲಾ ಸದಸ್ಯರನ್ನು ಹೂಗುಛ್ಛದ ಮೂಲಕ ಸ್ವಾಗತಿಸಿಲಾಯಿತು.

Vishwakarma dubai-July 8_2015-001

Vishwakarma dubai-July 8_2015-003

Vishwakarma dubai-July 8_2015-004

ಆರಂಭದಲ್ಲಿ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ಸ್ಥಾಪಕಾಧ್ಯಕ್ಷರು ನೂತನ ಕಾರ್ಯಕಾರೀ ಮಂಡಳಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ, ನಿಕಟಪೂರ್ವ ಸಮಿತಿಯ ಅಧ್ಯಕ್ಷರಾದಿಯಾಗಿ ಎಲ್ಲರನ್ನು ಕಳೆದರಡು ವರ್ಷಗಳ ಆಡಳಿತ ಮಂಡಳಿಯ ಯಶಸ್ವೀ ಕಾರ್ಯಕ್ರಮಗಳಿಗಾಗಿ ಪ್ರಶಂಸಿಸುತ್ತಾ, ಆಯ್ಕೆಯಾದ ನೂತನ ಮಂಡಳಿ ಕೂಡ ಇದೇ ರೀತಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡುವ ಆಶಯವನ್ನು ವ್ಯಕ್ತಪಡಿಸಿದರು. ವಾರ್ಷಿಕ ಪೂಜಾ ಕಾರ್ಯಕ್ರಮದೊಂದಿಗೆ ಊರಲ್ಲಿರುವ ಆರ್ಥಿಕವಾಗಿ ಹಿಂದುಳಿದಿರತಕ್ಕ ಸ್ವಜಾತಿ ಬಾಂಧವರ ಪ್ರತಿಭಾಶಾಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನ್ನೂ ನೀಡುತ್ತಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲವೊಂದು ಸರಳ ವಿಧಾನಗಳ ವಿವರಣೆಯನ್ನು ನೀಡುವ ಮೂಲಕ ತಮ್ಮದೇ ಆದ ಮೂಲಧನವನ್ನು ಸಂಗ್ರಹಿಸುವ ಸೂಚನೆಯನ್ನು ನೀಡಿದರು. ಸೇರಿದ ಸಭಾಸದರು ಇದಕ್ಕೆ ಪೂರಕವಾಗಿ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದರು.

Vishwakarma dubai-July 8_2015-005

Vishwakarma dubai-July 8_2015-006

Vishwakarma dubai-July 8_2015-007

Vishwakarma dubai-July 8_2015-008

ನಿಕಟ ಪೂರ್ವ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯರು ತಮ್ಮ ಆಡಲಿತಾವಧಿಯ ಎರಡು ವರ್ಷಗಳ ಅವಧಿಯಲ್ಲಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ್ದು ಜತೆಗೆ ಎಲ್ಲರ ಸಹಕಾರದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ವೇತನಗಳನ್ನು ನೀಡಲಾಗಿದೆ ಎಂದು ವಿವರಿಸಿದರು. ಈ ಯಶಸ್ಸಿಗೆ ತಮ್ಮ ಮುಖ್ಯಕಾರ್ಯದರ್ಶಿಗಳಾಗಿದ್ದ ಉಪೇಂದ್ರ ಕುಂಡೋವು ಮತ್ತು ಕೋಶಾಧಿಕಾರಿಗಳಾಗಿ
ತಮ್ಮ ಪಾರದರ್ಶಿಕಾ ಕಾರ್ಯನಿರ್ವಹಣೆಗಾಗಿ ಹರೀಶ ಆಚಾರ್ಯ(ಸಾಹಿತ್ಯ) ಹಾಗೂ ಉಪಾಧ್ಯಕ್ಷರಾಗಿ ತೆರೆಯ ಮರೆಯಲ್ಲಿ ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದ ಪ್ರತಿಭಾ ಶೋಧನ್ ಆಚಾರ್ಯರನ್ನು ಪ್ರಶಂಸಿಸುತ್ತಾ, ಸಹಕರಿಸಿದ ಎಲ್ಲ ಸದಸ್ಯರನ್ನು ಅಭಿನಂದಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೋಧನ್ ಆಚಾರ್ಯರು ಮಾತನಾಡುತ್ತಾ, ತಮ್ಮ ಆಯ್ಕೆಗಾಗಿ ಕೃತಜ್ನತೆಯನ್ನು ಅರ್ಪಿಸುತ್ತಾ ಎಲ್ಲರ ತುಂಬು ಹೃದಯದ ಸಹಕಾರವನ್ನು ಕೋರಿ, ಸಮಿತಿಯ ಮುಂದಿನ ಕಾರ್ಯಕ್ರಮಗಳ ಯಶಸ್ಸಿಗೆ ತಮ್ಮೊಂದಿಗೆ ಸಹಾಯ ಹಸ್ತವನ್ನು ಯಾಚಿಸಿದರು ಮತ್ತು ಹಣ ಸಂಗ್ರಹಿಸುವ ಸರಳ ವಿಧಾನದ ವಿಷಯವನ್ನು ಒತ್ತಿ ಹೇಳುತ್ತಾ ಈ ನಿಟ್ಟಿನಲ್ಲಿ ತಾನು ಕೂಡಲೇ ಕಾರ್ಯಪ್ರವರ್ತನಾಗುವ ಸೂಚನೆ ನೀಡಿದರು.

Vishwakarma dubai-July 8_2015-009

Vishwakarma dubai-July 8_2015-010

Vishwakarma dubai-July 8_2015-011

2015 2017 ರ ಸಾಲಿಗೆ ಆಯ್ಕೆಯಾದ ನೂತನ ಕಾರ್ಯಕಾರೀ ಸಮಿತಿಯ ವಿವರ ಈ ರೀತಿಯಾಗಿದೆ :-
ಅಧ್ಯಕ್ಷರಾಗಿ -ಶೋಧನ್ ಆಚಾರ್ಯ; ಉಪಾಧ್ಯಕ್ಷರಾಗಿ ವಂದನಾ ಅರುಣ್ ಆಚಾರ್ಯ; ಕಾರ್ಯದರ್ಶಿಯಾಗಿ ಗುರುರಾಜ್ ಶ್ರೀನಿವಾಸ ಆಚಾರ್ಯ; ಜತೆ ಕಾರ್ಯದರ್ಶಿಗಳಾಗಿ – ಸುದರ್ಶನ ಪಾಂಡೇಶ್ವರ ಮತ್ತು ಸೂರಜ್ ಸದಾಶಿವ ಆಚಾರ್ಯ; ಕೋಶಾಧಿಕಾರಿಯಾಗಿ ರಮೇಶ ಆಚಾರ್ಯ; ಜತೆ ಕೋಶಾಧಿಕಾರಿಗಳಾಗಿ ರವೀಂದ್ರ ಆಚಾರ್ಯ ಮತ್ತು ಸಹನಾ ವಿನಯ ಆಚಾರ್ಯ; ಮನರಂಜನಾ ಕಾರ್ಯದರ್ಶಿಯಾಗಿ – ಸ್ವಾತಿ ರವಿ ಶಂಕರ ಆಚಾರ್ಯ; ಸಹ ಮನರಂಜನಾ ಕಾರ್ಯದರ್ಶಿಗಳಾಗಿ – ಶಿವ ಪ್ರಸಾದ್ ಆಚಾರ್ಯ, ಸಂತೋಷ್ ಆಚಾರ್ಯ ಮುದರಂಗಡಿ, ಜಯಂತಿ ಉದಯ ಆಚಾರ್ಯ ಹಾಗೂ ಧೀರಜ್ ಗೋಪಾಲ ಆಚಾರ್ಯ, ಅಬುಧಾಬಿ; ಕ್ರೀಡಾ ಕಾರ್ಯದರ್ಶಿಯಾಗಿ – ಸೂರಜ್ ಆಚಾರ್ಯ; ಜತೆ ಕ್ರೀಡಾ ಕಾರ್ಯದರ್ಶಿಗಳಾಗಿ ದೇವಿ ಪ್ರಸಾದ್ ಆಚಾರ್ಯ, ವಸಂತ ಆಚಾರ್ಯ, ಪವಿತ್ರಾ ಗುರುರಾಜ ಆಚಾರ್ಯ ಮತ್ತು ಸುಚಿತ್ರಾ ದೇವಿಪ್ರಸಾದ್ ಆಚಾರ್ಯ

ಮಾಧ್ಯಮ ಮತ್ತು ಪ್ರಸಾರ – ಶಾಂತಾರಾಮ ಆಚಾರ್ಯ ಹಾಗೂ ಸಹಾಯಕರಾಗಿ ಸ್ವಾತೀ ವಿವೇಕ್ ಆಚಾರ್ಯ; ಭಜನಾ ಕಾರ್ಯದರ್ಶಿಯಾಗಿ – ಬಿ.ಎಮ್. ದಿನೇಶ್ ಆಚಾರ್ಯ, ಜತೆ ಕಾರ್ಯದರ್ಶಿಗಳಾಗಿ ಪ್ರಭಾಕರ ಆಚಾರ್ಯ ಮತ್ತು ಸ್ನೇಹಾ ಶಿವ ಪ್ರಸಾದ್ ಆಚಾರ್ಯ; ಮಾಹಿತಿ ತಂತ್ರಜ್ನಾನ(.ಖಿ.) ವೃಷಿಕೇಶ್ ಆಚಾರ್ಯ ಹಾಗೂ ನಿಕಿಲ್ ರಾವ್; ಪೂಜಾ ಮಂಟಪ ಶೃಂಗಾರ ವ್ಯವಸ್ಥೆ – ಸದಾಶಿವ ಆಚಾರ್ಯ ಮತ್ತು ರಮೇಶ ಆಚಾರ್ಯ; ಅಬುಧಾಬಿ ವಿಭಾಗದ ಸಹಯೋಗ – ಸುನಂದ ಆಚಾರ್ಯ ಮತ್ತು ಜ್ಯೋತಿ ಗಂಗಾಧರ ಆಚಾರ್ಯ; ಪೂಜಾ ಸ್ವಯಂ ಸೇವಕರಾಗಿ ವಿನಯರಾಜ್ ಆಚಾರ್ಯ, ಪ್ರಶಾಂತ್ ಆಚಾರ್ಯ ಹಾಗೂ ಅರುಣ್ ಆಚಾರ್ಯ ಇವರುಗಳನ್ನು ಆರಿಸಲಾಯಿತು.

ಪ್ರಸಕ್ತ ಸಾಲಿಗೆ ಆಯ್ಕೆಯಾದ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತಿತರ ಪದಾಧಿಕಾರಿಗಳು ಸಂದರ್ಭೋಚಿತವಾಗಿ ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು. ಕಾರ್ಯಕ್ರಮದ ನಿರೂಪಣೆಯನ್ನು ಶುಭ ಪ್ರಶಾಂತ್ ಆಚಾರ್ಯರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು. ನೂತನ ಕಾರ್ಯದರ್ಶಿ ಗುರುರಾಜ್ ಆಚಾರ್ಯರಿಂದ ಧನ್ಯವಾದ ಸಮರ್ಪಣೆಯ ಬಳಿಕ ಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

ವರದಿ : ಶಾಂತಾರಾಮ ಆಚಾರ್ಯ

Write A Comment