ಕರಾವಳಿ

ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಉದುರುವ ನಿಮ್ಮ ಕೂದಲನ್ನು ರಕ್ಷಿಸಬಹುದು…ಇಲ್ಲಿದೆ ಕೆಲವೊಂದು ಟಿಪ್ಸ್ …

Pinterest LinkedIn Tumblr

hair pro

ಈಗಾಗಲೇ ಮಳೆಗಾಲ ಆರಂಭವಾಗಿದೆ. ಜೊತೆಗೆ ಕೇಶ ಸಂಬಂಧಿ ಸಮಸ್ಯೆಗಳು ಶುರುವಾಗುತ್ತೆ. ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಸ್ವಲ್ಪ ಹೆಚ್ಚಾಗುತ್ತದೆ. ಹೀಗಾಗಿ ಕೂದಲ ಆರೈಕೆಗೆ ಕೊಂಚ ಹೆಚ್ಚಾಗೆ ಗಮನ ನೀಡಬೇಕಾಗುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಅದಕ್ಕಾಗೆ ಸಮಯ ಮೀಸಲಿಡುವುದು ಕಷ್ಟ. ಜೊತೆಗೆ ಹಿಂದಿನ ಕಾಲದ ಹಾಗೆ ಪ್ರತಿ ದಿನ ಎಣ್ಣೆ ಹಚ್ಚಿ ಮಸಾಜ್ ಮಾಡಿ ಕೂದಲ ತೊಳೆಯುವಷ್ಟು ಸಮಯ ಈಗ ಇಲ್ಲ. ಹಾಗಂತ ಕೂದಲ ಬಗ್ಗೆ ಕಾಳಜಿ ತೆಗೆದುಕೊಳ್ಳದೇ ಇರುವುದಕ್ಕೂ ಆಗುವುದಿಲ್ಲ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಸುಂದರ ಹಾಗೂ ಆರೋಗ್ಯಯುತ ಕೂದಲನ್ನು ಬೆಳೆಸಿಕೊಳ್ಳಲು ಕೊಲವೊಂದು ಟಿಪ್ಸ್ ಇಲ್ಲಿದೆ.

ಈರುಳ್ಳಿ: ಈರುಳ್ಳಿಯಲ್ಲಿ ಸಲ್ಫರ್ ಹೆಚ್ಚಾಗಿ ಇರುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಿ ಕೂದಲಿಗೆ ಜೀವ ತುಂಬತ್ತೆ. ಇರುಳ್ಳಿಯನ್ನು ಜಜ್ಜಿ ರಸ ತೆಗೆದುಕೊಂಡು, ಇಲ್ಲವೇ ಕತ್ತರಿಸಿ ಹೋಳುಗಳನ್ನಾಗಿ ಮಾಡಿ ಬುರುಡೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ತಲೆಯಲ್ಲಿರುವ ಸತ್ತ ಚರ್ಮ( Dead Skin) ತೆಗೆದು ಕೂದಲಿಗೆ ಅಗತ್ಯವಾದ ಪೋಷಕಾಂಶ ಪೂರೈಸಲು ಸಹಾಯ ಮಾಡುತ್ತದೆ. ವಾರಕ್ಕೆ 2 ಭಾರಿ ಹೀಗೆ ಮಾಡಿ ನಂತರ ಮ್ಯಾಜಿಕ್ ನೋಡಿ.

ತೆಂಗಿನಕಾಯಿ ಹಾಲು: ಮನೆಯಲ್ಲಿ ತೆಂಗಿನ ಕಾಯಿ ರುಬ್ಬುವಾಗ ಸ್ಲಲ್ಪ ಪ್ರಮಾಣದ ಹಾಲು ತೆಗೆದುಕೊಂಡು ಅದಕ್ಕೆ 4 ರಿಂದ 5 ಹನಿ ಲ್ಯಾವೆಂಡರ್ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಮಸಾಜ್ ಮಾಡಿ. ತೆಂಗಿನ ಹಾಲಿನಲ್ಲಿರುವ ಪೊಟ್ಯಾಶಿಯಂ ಮತ್ತು ಅಗತ್ಯವಾದ ಫ್ಯಾಟ್ ಕೂದಲಿನ ಆರೈಕೆ ಮಾಡಿ ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ

ಕೋಳಿ ಮೊಟ್ಟೆ: ಕೋಳಿ ಮೊಟ್ಟೆ ಕೂದಲ ಆರೈಕೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ವಾರಕ್ಕೆ ಒಮ್ಮೆ ಹಸಿ ಕೋಳಿ ಮೊಟ್ಟೆಯ ಲೋಳೆಯನ್ನು ತೆಗೆದುಕೊಂಡು ಪ್ಯಾಕ್ ರೀತಿ ಕೂದಲಿಗೆ ಹಚ್ಚಿಕೊಂಡು 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಇದರಲ್ಲಿರುವ ,ಪೋಷಕಾಂಶಗಳು ಕೂದಲನ್ನು ಆರೋಗ್ಯಯುತವಾಗಿಸುತ್ತವೆ. ಅಗತ್ಯ ವೆನಿಸಿದರೇ ಆಲಿವ್ ಆಯಿಲ್ ಕೂಡ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.

ಬೆಟ್ಟದ ನೆಲ್ಲಿಕಾಯಿ: ಕೂದಲ ಆರೈಕೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಪಾತ್ರ ತುಂಬಾ ಮಹತ್ವದ್ದು. ವಿಟಮಿನ್ ಸಿ ಯನ್ನು ಅಧಿಕವಾಗಿ ಹೊಂದಿರುವ ನೆಲ್ಲಿಕಾಯಿ ಪುಡಿಯನ್ನುನಿಂಬೆ ರಸದ ಜೊತೆಗೆ ಮಿಕ್ಸ್ ಮಾಡಿ ಒಣಗಲು ಬಿಡಿ ನಂತರ ಬಿಸಿನೀರಿನಲ್ಲಿ ಶಾಂಪು ಹಾಕದೇ ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲೂ ಸೊಂಪಾಗಿ ಬೆಳೆಯುತ್ತದೆ.

Write A Comment