ಪ್ರಕಾಶ್ ರಾವ್ ಪಯ್ಯಾರ್ ಅವರ ತುಳು ಕವನ ಸಂಕಲನ “ಉರೆತ್ತ ಕಣ್ಣ್ ದ ಸಿರಿ” ಲೋಕಾರ್ಪಣೆಯನ್ನು ಡಾ. ಮೋಹನ ಆಳ್ವ (ಅಧ್ಯಕ್ಷ, ಅಳ್ವಾಸ್ ಶಿಕ್ಷಣ ಸಂಸ್ಥೆಗಳು)ಅವರು 23-05-2015 ಶನಿವಾರ ಸಂಜೆ3.30ಕ್ಕೆ, ಮಂಗಳೂರಿನ, ಲಾಲ್ ಭಾಗ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಭಾಂಗಣದಲ್ಲಿ ನೆರವೇರಿಸಲಿರುವರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಕೆ. ಚಿನ್ನಪ್ಪ ಗೌಡ (ಮುಖ್ಯಸ್ಥರು, ಕನ್ನಡ ವಿಭಾಗ, ಮಂಗಳೂರು, ವಿಶ್ವವಿದ್ಯಾಲಯ) ಹಾಗೂ ಶ್ರೀ ಸುರೇಶ್ ಶೆಟ್ಟಿ, ಗುರ್ಮೆ (ಉದ್ಯಮಿ ಹಾಗೂ ಸಮಾಜ ಸೇವಕ) ಆಗಮಿಸಲಿರುವರು. ಡಾ. ಗಣನಾಥ ಎಕ್ಕಾರ್ (ರಾಷ್ಟ್ರೀಯ ಸೇವಾ ದಳದ ರಾಜ್ಯ ಘಟಕದ ವಿಶೇಷ ಅಧಿಕಾರಿ) ಮತ್ತು ಡಾ. ವರದರಾಜ ಚಂದ್ರಗಿರಿ(ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್, ಪುತ್ತೂರು ಘಟಕ) ಇವರು ಪುಸ್ತಕ ವಿಶ್ಲೇಷಣೆ ಮಾಡಲಿರುವರು.
ಶ್ರೀಮತಿ ಎಮ್.ಜಾನಕಿ ಬ್ರಹ್ಮಾವರ(ಅಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಆಕಾಡೆಮಿಯ ರಿಜಿಸ್ತರ್ ಶ್ರೀ ಚಂದ್ರಹಾಸ ರೈ ಬಿ.ಮತ್ತು ಕವಿ ಪ್ರಕಾಶ್ ರಾವ್ ಪಯ್ಯಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತುಳು ಅಭಿಮಾನಿಗಳು ಆಗಮಿಸ ಬೇಕೆಂದು ಆಯೋಜಕರು ವಿನಂತಿಸಿ ಕೊಂಡಿರುವರು.
