ಕರಾವಳಿ

ಎಲ್ಲೆಡೆ ಅಕ್ರಮ ಸರಾಯಿ ಮಾರಾಟ; ಹಳ್ಳಿಹೊಳೆ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ

Pinterest LinkedIn Tumblr

Hallihole_akrama Sarayi Protest

ಕುಂದಾಪುರ: ನಕ್ಸಲ್ ಪೀಡಿತ ಹಳ್ಳಿಹೊಳೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಪ್ರತೀ ಅಂಗಡಿ, ಗೂಡಂಗಡಿ ಹಾಗೂ ಹೋಟಲ್‌ಗಳಲ್ಲಿ ಆಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಹಳ್ಳಿಹೊಳೆ ಗ್ರಾ. ಪಂ. ವ್ಯಾಪ್ತಿಯ ಮಹಿಳಾ ಸಂಘಟನೆಗಳು ಹಾಗೂ ನಮ್ಮ ಭೂಮಿ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು.

ಮಹಿಳಾ ಸಂಘಟಕರು ಚಕ್ರಾಮೈದಾನದಿಂದ 2ಕಿ. ಮೀ.ದೂರದ ಹಳ್ಳಿಹೊಳೆಯ ಗ್ರಾ. ಪಂ. ಕಚೇರಿಯ ತನಕ ಕಾಲು ನಡಿಗೆಯಲ್ಲಿ ಪ್ರತಿಭಟನೆಯ ಜಾಥ ನಡೆಸಿ, ಗ್ರಾ. ಪಂ. ಅಭಿವೃದ್ಧಿ ಅಕಾರಿ ಸುದರ್ಶನ್ ಅವರಿಗೆ ಮನವಿ ನೀಡಿದರು.

Hallihole_akrama Sarayi Protest (1)

Hallihole_akrama Sarayi Protest (2)

ಮಹಿಳಾ ಸಂಘಟಕರು ಪ್ರತಿಭಟನೆಯಲ್ಲಿ ಅಬಕಾರಿ ಹಾಗೂ ಪೊಲೀಸ್ ವ್ಯವಸ್ಥೆಯ ಬಗ್ಗೆ ವಿರೂಧ ಘೋಷಣೆ ಕೂಗಿದರು. ಆಕ್ರಮ ಮದ್ಯ ಮಾರಾಟಗಾರರ ರಕ್ಷಣೆ ಮಾಡುತ್ತಿರುವ ಜನಪ್ರತಿನಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹಳ್ಳಿಹೊಳೆ ಪ್ರದೇಶವು ನಕ್ಸಲ್ ಪೀಡಿತ ಪ್ರದೇಶವಾಗಿದೆ. ಇಂದಿನ ಪ್ರತಿಭಟನೆ ಕೇವಲ ಅಕಾರಿಗಳನ್ನು ಹಾಗೂ ಜನಪ್ರತಿನಿಗಳನ್ನು ಎಚ್ಚರಿಸುವುದಕ್ಕಾಗಿ ನಡೆದ ಪ್ರತಿಭಟನೆಯಾಗಿದೆ. ಹಳ್ಳಿಹೊಳೆ ಪರಿಸರದಲ್ಲಿ ಆಕ್ರಮ ಮದ್ಯ ಮಾರಟ ನಿಲ್ಲಿಸದ್ದಿದ್ದಲಿ, ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಯ ಬಿಸಿಯನ್ನು ಸಂಬಂಧ ಪಟ್ಟವರು ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಮಕ್ಕಳ ಮಿತ್ರ ಸಂಘಟನೆಯ ಸದಸ್ಯರು ಹಾಗೂ ಗ್ರಾ. ಪಂ. ಸದಸ್ಯರುಗಳಾದ ಶಂಕರನಾರಾಯಣ ಕನ್ನಂತ, ಕೆ. ರಾಮ ನಾಯ್ಕ, ಮಹಿಳಾ ಮಿತ್ರ ಸಂಘಟನೆಯ ಮುಖಂಡರಾದ ಯಶೋಧ, ಶಾಂತ, ಸರಸ್ವತಿ, ಸರೋಜ, ಪ್ರೇಮಾ, ಪಲ್ಲವಿ, ಸರೋಜ, ಲಕ್ಷ್ಮೀದೇವಿ, ನಮ್ಮ ಭೂಮಿ ಸಂಸ್ಥೆಯ ಪ್ರಮುಖರಾದ ಅರುಣಾಚಲ ನಾಯಕ್, ಕೃಪಾ, ಮಹಾಬಲೇಶ್ವರ, ತೀಲಕ್‌ರಾಜ್, ವನಜ, ಅನಿರುದ್ದ್, ಗ್ರಾ. ಪಂ. ಸದಸ್ಯರಾದ ನಾಗಪ್ಪ ಪೂಜಾರಿ ಹಾಗೂ ಗಿರಿಜಾ ಮತ್ತು ಸ್ತ್ರಿ ಶಕ್ತಿ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Write A Comment