ಕರಾವಳಿ

ಸ್ತ್ರೀ ಶಕ್ತಿಯಿಂದ ಸಮಾಜ ಪರಿವರ್ತನೆ ಸಾಧ್ಯ – ಜೆ. ಆರ್. ಲೋಬೊ.

Pinterest LinkedIn Tumblr

Shri_ Shakth_i1

ಮಂಗಳೂರು, ಎಪ್ರಿಲ್ ೧೧ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು, ಶಕ್ತಿನಗರ ೨ನೇ ವಲಯ, ಅಂಗನವಾಡಿ ಕೇಂದ್ರಗಳ ಸ್ತ್ರೀಶಕ್ತಿ ಗುಂಪುಗಳ ದಶಮಾನೋತ್ಸವ ಸಂಭ್ರಮ ಸುಮ ಸದನ, ಕದ್ರಿಯಲ್ಲಿ ಎಪ್ರಿಲ್ ೧೧ರಂದು ನಡೆಯಿತು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊರವರು ಉದ್ಫಾಟಿಸಿದರು.

Shri_ Shakth_i2

ಸಭಿಕರನ್ನು ಉದ್ದೇಶಿಶಿ ಮಾತಾಡುತ್ತಾ ಅವರು, ಇತಿಹಾಸದಲ್ಲಿ ಮಹಿಳೆಯರ ಪಾತ್ರ ಮಹತ್ವದಲ್ಲಿದೆ. ದೇಶದ ಅಭಿವೃದ್ಧಿಗೆ ಮತ್ತು ಸಮಾಜ ನಿರ್ವಹಣೆಗೆ ಅವರ ಕೊಡುಗೆ ಅತೀ ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅವಕಾಶ ಇದೆ.

ಕುಟುಂಬದ ಜೊತೆಗೆ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.  ಸ್ತ್ರೀ ಶಕ್ತಿಯಿಂದ ಸಮಾಜ ಪರಿವರ್ತನೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಶಕ್ತಿನಗರ ಅಂಗವನಾಡಿ ಕೇಂದ್ರಕ್ಕೆ ಉತ್ತಮ ಅಂಗನವಾಡಿ ಕೇಂದ್ರ ಎಂದು ಗುರುತಿಸಲಾಯಿತು.

ಮನಪಾ ಸದಸ್ಯೆ ಶ್ರೀಮತಿ ರೂಪಾ ಡಿ. ಬಂಗೇರ ಹಾಗೂ ನಾಟಕ ರಚನೆಕಾರರಾದ ಶ್ರೀ ಜಿ.ಕೆ. ಶ್ರೀನಿವಾಸ ಸಾಲ್ಯಾನ್ ಕೃಷ್ಣನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Write A Comment