ಉಪ್ಪಳ : ಕಾಸರಗೋಡು ಜಿಲ್ಲೆಯ ಉಪ್ಪಳದ ಕೊಂಡೆವೂರು ಶ್ರೀ ನಿತ್ಯಾನಂದ ಯೊಗಾಶ್ರಮದಲ್ಲಿ ಮಾರ್ಚ್ 21 ರಿಂದ 29ರ ತನಕ ನಡೆಯುತ್ತಿರುವ ಚತುರ್ವೇದ ಸಂಹಿತಾಯಾಗ ಮತ್ತು ಗಾಯತ್ರೀ ಘೃತ ಸಾಂಪ್ರಾಪ್ತಿ ಮಹಾಗದ ನಿಮಿತ್ತ ಮಾ. 25ರಂದು ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಡೆಯವರು ಅನುಗ್ರಹ ಭಾಷಣ ಮಾಡುತ್ತಾ ಐನೂರು ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾಯಾಗದ ಮಹತ್ವವನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ವಹಿಸಿದ್ದು ಇಂತಹ ಯಜ್ನ-ಯಾಗದಿಂದ ಪುಣ್ಯ ದೊರೆಯುವುದು ಎಂದರು.
ವೇದಿಕೆಯಲ್ಲಿ ಮಾಣಿಲ ಶ್ರೀ ಮೊಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕೆ. ಮೋನಪ್ಪ ಭಂಡಾರಿ, ಶ್ರಿ ನೃಸಿಂಹಾಶ್ರಮ ಸ್ವಾಮೀಜಿ, ಸುಧೀರ್ ಕುಮಾರ್, ಅಜಿತ್ ಕುಮಾರ್ ರೈ ಮಾಲಾಡಿ ದಂಪತಿ ಉಪಸ್ಥಿತರಿದ್ದರು. ರಾತ್ರಿ ಸಾಂಸ್ಕೃತಿಕ ವೈಭವ ನಡೆಯಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್