ಕರಾವಳಿ

ಕುಂಭಾಸಿ: ಬೈಕ್ ಮತ್ತು ಹೊಂಡಾ ದ್ವಿಚಕ್ರ ವಾಹನ ಡಿಕ್ಕಿ; ಸವಾರನಿಗೆ ಗಾಯ

Pinterest LinkedIn Tumblr

Kumbashi accident_Feb 22_2015-006

ಕುಂದಾಪುರ: ಹಾರ್ಲೇ ಡೆವಿಡ್‌ಸನ್ ಬೈಕ್ ಮತ್ತು ಆಕ್ಟಿವಾ ಹೊಂಡಾ ಕಂಪೆನಿಯ ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಗಾಯಗೊಂಡ ಘಟನೆ ಕುಂಭಾಸಿ ಬಸ್ಸು ನಿಲ್ದಾಣದ ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ.

Kumbashi accident_Feb 22_2015-001

Kumbashi accident_Feb 22_2015-002

Kumbashi accident_Feb 22_2015-003

Kumbashi accident_Feb 22_2015-004

Kumbashi accident_Feb 22_2015-005

ದ್ವಿಚಕ್ರ ವಾಹನ ಸವಾರ ಬೀಜಾಡಿ ನಿವಾಸಿ ಶಂಕರ ಗಾಣಿಗ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಘಟನೆ ವಿವರ: ಮಣಿಪಾಲದಲ್ಲಿ ಉದ್ಯೋಗಿಯಾಗಿರುವ ರಾಜೇಶ್ ಎನ್ನುವವರು ಗುರುವಾರ ಸ್ನೇಹಿತರೊಡಗೂಡಿ ತಮ್ಮ ಹಾರ್ಲೇ ಡೆವಿಡ್-ಸನ್ ಬೈಕಿನಲ್ಲಿ ಗೋವಾಕ್ಕೆ ತೆರಳಿದ್ದರೆನ್ನಲಾಗಿದ್ದು, ತಮ್ಮ ಪ್ರಯಾಣ ಮುಗಿಸಿ ಭಾನುವಾರ ಮಧ್ಯಾಹ್ನದ ಸುಮಾರಿಗೆ ಮಣಿಪಾಲದತ್ತ ವಾಪಾಸ್ಸಾಗುವಾಗ ಕುಂಭಾಸಿ ಬಳಿ ಈ ಘಟನೆ ಸಂಘವಿಸಿದೆ. ಕುಂಭಾಸಿಯಲ್ಲಿ ಡಿವೈಡರ್ ಸಮೀಪ ರಸ್ತೆ ದಾಟುತ್ತಿದ್ದ ಶಂಕರ್ ಅವರಿಗೆ ಬೈಕು ಡಿಕ್ಕಿಯಾಗಿದ್ದು ಇಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಅಪಘಾತದ ಪರಿಣಾಮ ಎರಡು ಬೈಕುಗಳು ಕೆಲವು ಮೀಟರುಗಳ ದೂರ ತರಚಿಕೊಂಡು ಹೋಗಿದ್ದು ಎರಡು ಬೈಕುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Write A Comment