ಕುಂದಾಪುರ: ಉಡುಪಿ ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಚಟುವಟಿಕೆಗಳಿಗೆ ಪೂರಕವಾಗಿ ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಸೇರಿಕೊಂಡು ಹುಟ್ಟುಹಾಕಿದ ಭಾವ ಬೆಳದಿಂಗಳು ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ.
ದಿವಂಗತ ಪಿ. ಕಾಳಿಂಗರಾವ್ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅವರ ತವರೂರು ಉಡುಪಿ ಜಿಲ್ಲೆಯಲ್ಲಿ ಕಾಳಿಂಗರಾವ್ ಅವರ ಸಾಧನೆಗಳ ಪರಿಚಯ ಮಾಡಿಕೊಡುವುದರ ಜೊತಗೆ ಇತರ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳಲಿದೆ.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭಾವ ಬೆಳದಿಂಗಳು ಇದರ ಅಧ್ಯಕ್ಷರಾಗಿ ಕಲಾವಿದ ಮತ್ತು ಶಿಕ್ಷಕ ಸತ್ಯನಾ ಕೊಡೇರಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ದಿ. ಪಿ. ಕಾಳಿಂಗರಾವ್ ಅವರ ಮೊಮ್ಮಗ ಎಂ.ಆರ್. ವಿಜಯಶಂಕರ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಛಾಯಾ ವೈ ಚಂದಾವರ ಆಯ್ಕೆಯಾಗಿದ್ದು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪತ್ರಕರ್ತ ಜಯಶೇಖರ್ ಮಡಪ್ಪಾಡಿ, ಗುರುರಾಜ್ ಬಾರ್ಕೂರು, ರಾಜೇಶ್ವರಿ ಎಂ.ವಿ. ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ದಿ. ಪಿ. ಕಾಳಿಂಗ ರಾವ್ ಅವರ ಪುತ್ರ ವಸಂತ ಪಿ. ಕಾಳಿಂಗ ರಾವ್ ಹಾಗೂ ಗೌರವ ಸಲಹೆಗಾರರಾಗಿ ಸಾಹಿತಿ, ವಕೀಲ ಕೆ.ಆರ್.ವಿದ್ಯಾಧರ ಬಡ್ಡಡ್ಕ ಆಯ್ಕೆಯಾಗಿದ್ದಾರೆ.