ಕರಾವಳಿ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಆಡಳಿತ ಮಂಡಲಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾದ ಎಸ್, ಪ್ರಕಾಶ್ಚಂದ್ರ ಶೆಟ್ಟಿಯವರ ರೈತ ಶಕ್ತಿ ಸಹಕಾರಿ ಒಕ್ಕೂಟಕ್ಕೆ ಭಾರೀ ಜಯಭೇರಿ

Pinterest LinkedIn Tumblr

krsss ltd president Prakashchandra Shetty

ಉಪ್ಪುಂದ: ಭಾರೀ ಕುತೂಹಲ ಕೆರಳಿಸಿದ್ದ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾದ ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ಯಶಸ್ವಿಯಾಗಿ ನಡೆದು ಪಲಿತಾಂಶ ಪ್ರಕಟಗೊಂಡಿತು. ಹಾಲಿ ಆಡಳಿತ ಮಂಡಳಿಯನ್ನು ಶತಾಯಗತಾಯ ಸೋಲಿಸಿ ತಾವು ಪಟ್ಟಕ್ಕೇರುವ ಕನಸು ಕಂಡ ವಿರೋಧಿ ಬಣಗಳು ಫಲಿತಾಂಶ ಬಂದ ಬಳಿಕ ಕೈಕೈ ಹಿಸುಕಿಕೊಳ್ಳುವಂತೆ ಮಾಡಿದ ಸಂಘದ ಸದಸ್ಯರು ಅಳೆದು ತೂಗಿ ಮತನೀಡಿ ಹಾಲಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ರೈತಶಕ್ತಿ ಸಹಕಾರಿ ಒಕ್ಕೂಟವನ್ನು ಮುಂದಿನ ಐದು ವರ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು.
ರೈತಶಕ್ತಿ ಸಹಕಾರಿ ಒಕ್ಕೂಟದ ಗುರುರಾಜ ಹೆಬ್ಬಾರ್, ಬಿ.ಎಸ್.ಸುರೇಶ ಶೆಟ್ಟಿ, ಬಿ.ರಘುರಾಮ ಶೆಟ್ಟಿ, ಅಣ್ಣಪ್ಪ ಖಾರ್ವಿ, ಸುರೇಶ ಶ್ಯಾನುಭಾಗ್, ಸಿದ್ದು ದೇವಾಡಿಗ, ದಿನಿತಾ ಶಟ್ಟಿ, ಮೋಹನ್ ಪೂಜಾರಿ, ಕೊರಗ ದೇವಾಡಿಗ, ಹಾಗೂ ಈಶ್ವರ ಹೆಚ್ಚಿನ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದರೆ, ಎದುರಾಳಿಗಳಾದ ನವೀನಚಂದ್ರ ಉಪ್ಪುಂದ ಮತ್ತು ಭಾಸ್ಕರ ಶೆಟ್ಟಿ ಬಣಗಳು ಈ ಚುನವಣೆಯಲ್ಲಿ ಹೀನಾಯವಾಗಿ ಸೋತು ತೀವೃ ಮುಖಭಂಗ ಅನುಭವಿಸಿದರು. ಚುನಾವಣಾಧಿಕಾರಿ ಅರುಣ್ ಕುಮಾರ್ ಫಲಿತಾಂಶವನ್ನು ಘೋಷಿಸಿದರು.

ಕಳೆದ ಶುಕ್ರವಾರ ಸಂಘದ ಕಛೇರಿಯಲ್ಲಿ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ನಡೆದ ಅಹಿತಕರ ಘಟನೆಯಿಂದ ಚುನಾವಣಾ ಪ್ರಕ್ರೀಯೆಗೆ ಕಂಟಕವಾಗಬಹುದೆನ್ನುವ ನೆಲೆಯಲ್ಲಿ ಭಾನುವಾರ ಮತದಾನ ಕೇಂದ್ರದಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತು ಮಾಡಲಾಗಿತ್ತು. ಆದರೆ ಯಾವುದೇ ಅಹಿತಕರ ಘಟನೆ ನಡೆಯದೇ 7051 ಸದಸ್ಯರಿರುವ ಈ ಸಂಘದಲ್ಲಿ 2931 ಸದಸ್ಯರ ಮತ ಚಲಾವಣೆಯಾಗಿದ್ದು ಶಾಂತಿಯುತವಾಗಿ ಶೇ.41%ರಷ್ಟು ಮತದಾನವಾಗಿದೆ.

ಹೇಳಿಕೆ: ಭಾನುವಾರ ಹೆಚ್ಚಿನ ಕಡೆಗಳಲ್ಲಿ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭ ಇರುವುದರಿಂದ ಹೆಚ್ಚಿನ ಸದಸ್ಯರು ಮತನೀಡಲು ಆಗಮಿಸದಿರುವುದರಿಂದ ನಮ್ಮ ನೀರೀಕ್ಷೆ ಪ್ರಮಾಣದಲ್ಲಿ ಮತದಾನವಾಗಿಲ್ಲ. –ಮಮತಾ ಮಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ, ಖಂ.ರೈ.ಸೇ.ಸ.ಸಂಘ.

ಹೇಳಿಕೆ: ರೈತರ ಸಹಕಾರಿ ಸಂಘವನ್ನು ರೈತರೇ ಆಡಳಿತ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ರೈತಶಕ್ತಿ ಸಹಕಾರಿ ಒಕ್ಕೂಟವು ಕಳೆದ 17 ವರ್ಷಗಳಿಂದ ಈ ಸಂಘವನ್ನು ಜನಪರ ಹಾಗೂ ರೈತಪರವಾದ ಆಡಳಿತ ನಡೆಸುತ್ತಿದೆ. ದುರದೃಷ್ಟವಶಾತ್ ಇದನ್ನು ಸಹಿಸದ ಕೆಲವು ಉದ್ಯಮಿಗಳು ರೈತರನ್ನು ತಪ್ಪು ದಾರಿಗೆಳೆದು ಈ ಸಂಸ್ಥೆಯನ್ನು ತಮ್ಮ ವಶಕ್ಕೆ ಪಡೆಯಲು ಇಲ್ಲಸಲ್ಲದ ಆರೋಪ ಮಾಡಿ, ತೆರೆಯ ಮರೆಯಲ್ಲಿದ್ದುಕೊಂಡು ಇನ್ನಿಲ್ಲದ ಕಸರತ್ತು ಮಾಡಿದರು. ಆದರೂ ಕೊನೆಗೆ ಸತ್ಯಕ್ಕೆ ಜಯವಾಯಿತು.- ಎಸ್. ಪ್ರಕಾಶ್ಚಂದ್ರ ಶೆಟ್ಟಿ, ರೈತಶಕ್ತಿ ಸಹಕಾರಿ ಒಕ್ಕೂಟದ ಮುಖ್ಯಸ್ಥ.

Write A Comment