ಕರಾವಳಿ

ಡಿ.ಕೆ ಎಸ್ ಸಿ ಯು.ಎ .ಇ ಇದರ ವತಿಯಿಂದ ಸಂಬ್ರಮದಿಂದ ಮೀಲಾದ್ ಆಚರಣೆ

Pinterest LinkedIn Tumblr

DKSC Dubai_Jan 20- 2015_001

ದುಬೈ. ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಯು.ಎ.ಇ ಇದರ ವತಿಯಿಂದ ನಡೆದ ಬ್ರಹತ್ ಮಿಲಾದ್ ಸಮಾವೇಶ ಹಾಗು ಡಿ.ಕೆ ಎಸ್ ಸಿ ಯು.ಎ .ಇ. ಇದರ 15 ನೇ ವಾರ್ಷಿಕ ಮಹಾ ಸಮ್ಮೇಳನ ವು ದುಬೈ ಅಲ್ ಕ್ವಿಸಸ್ ನಲ್ಲಿರುವ ಇಂಡಿಯನ್ ಅಕಾಡಮಿ ಸ್ಕೂಲ್ ನ ಸಭಾಂಗಣದಲ್ಲಿ ನಡೆಯಿತು.

ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ಮಕ್ಕಳಿಂದ ಇಸ್ಲಾಮಿಕ್ ದೀನೀ ಹಾಡುಗಳು,(ಕನ್ನಡ,ಇಂಗ್ಲೀಷ್, ಉರ್ದು,ಅರಬಿಕ್, ಬ್ಯಾರಿ) ಪ್ರವಾದಿ (ಸ.ಅ ) ರ ಬಗ್ಗೆ ಭಾಷಣ ಮುಂತಾದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಅಧ್ಯಕ್ಷರಾದ ಬಹು. ಎಂ.ಕೆ.ಬ್ಯಾರಿ. ಕಕ್ಕಿಂಜೆ ಯವರ ಅಧ್ಯಕ್ಷತೆಯಲ್ಲಿ ಮಾಸ್ಟರ್ ಮುಹಮ್ಮದ್ ಹಾದಿ ಪೆರುವಾಯಿ ಯವರ ಕಿರಾಹತ್ ಹಾಗೂ ಬಹು. ಸಯ್ಯದ್ ಅಸ್ಗರಲಿ ತಂಗಲ್ ಕೊಳ್ಫೆ ಯವರ ದುವಾ ದೊಂದಿಗೆ ಬಹು. ಕೆ.ಎಚ್.ಅಹಮದ್ ಫೈಝಿ ಕಕ್ಕಿಂಜೆ ಯವರು ಉದ್ಘಾಟಿಸಿದರು. ಜ.ಎಸ್.ಯೂಸುಫ್ ಅರ್ಲಪದವು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

DKSC Dubai_Jan 20- 2015_002

DKSC Dubai_Jan 20- 2015_003

DKSC Dubai_Jan 20- 2015_004

DKSC Dubai_Jan 20- 2015_005

DKSC Dubai_Jan 20- 2015_006

DKSC Dubai_Jan 20- 2015_007

DKSC Dubai_Jan 20- 2015_008

DKSC Dubai_Jan 20- 2015_009

DKSC Dubai_Jan 20- 2015_010

ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಜ.ಕಮರುದ್ದೀನ್ ಗುರುಪುರ ಹಾಗೂ ನವಾಜ್ ಕೊಟೆಕ್ಕಾರ್ ರವರು ನಡೆಸಿಕೊಟ್ಟರು. ಇದೇ ಸಮಯದಲ್ಲಿ ಮಹಿಳೆಯರಿಗೆ ಪಾಕ ಸ್ಪರ್ಧೆ (ಮನೆಯಲ್ಲಿ ತಯಾರಿಸಿ ತಂದ ಸಿಹಿ ಪದಾರ್ಥಗಳು) ನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಜ. ಅಬ್ದುಲ್ ರಹಿಮಾನ್ ಸಜಿಪ ಹಾಗೂ ಜ. ಅಶ್ರಫ್ ಸತ್ತಿಕಲ್ ರವರು ನಡೆಸಿಕೊಟ್ಟರು. ಸ್ಪರ್ಧೆ ಯ ತಿರ್ಫುಗರರಾಗಿ ಜ.ಅಬ್ದುಲ್ ರಜಾಕ್ (ದೀವಾ), ಜ.ತಜ್ಮಲ್ ಹಾಗೂ ಬಹು. ಸಯ್ಯದ್ ಅಸ್ಗರಲಿ ತಂಗಲ್ ಕೊಳ್ಫೆ ರವರು ಸಹಕರಿಸಿದರು.

ಮಹಿಳೆಯರಿಗೆ ನಡೆಸಿದ ರಸ ಪ್ರಶ್ನೆ ಹಾಗೂ ಪ್ರಬಂಧ ಸ್ಫರ್ಧೆಯನ್ನು ಮಿಸಸ್.ರಹೀಮ್ ಕೋಡಿ ಹಾಗೂ ಮಿಸಸ್ ಮುಕ್ತಾರ್ ಅರಂತೋಡು ರವರು ನಡೆಸಿಕೊಟ್ಟರು. ಮೌಲೋದ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಸಾದತುಗಳು ಹಾಗೂ ಉಲಮಾಗಳ ನೇತ್ರತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬಹು. ಮಹಮ್ಮದಾಲಿ ಸಖಾಫಿ ಸುರಿಬೈಲು ರವರು ಪ್ರವಾದಿ ಪ್ರೇಮ ಸಂದೇಶವನ್ನು ಸಾರಿದರು. ಈ ಕಾರ್ಯಕ್ರಮವನ್ನು ಜ.ಅಬ್ದುಲ್ಲ ಉಸ್ತಾದ್ ಕುಡ್ತಮುಗೆರು ಹಾಗೂ ಜ.ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್ ನಿರ್ವಹಿಸಿದರು. ಮಾ| ಮಿಹ್ ರಾಜುದ್ದೀನ್ ಶಿವಮೊಗ್ಗ ರವರ ನಅತೇ ಶರೀಪ್ ಎಲ್ಲರನ್ನು ಮನರಂಜಿಸಿತು. ಇವರೊಂದಿಗೆ ಕೆ.ಸಿ.ಎಫ್.ದುಬೈ ವತಿಯಿಂದ ಜ. ರಹೀಂ ಕೋಡಿ ಯವರ ನೇತ್ರತ್ವದಲ್ಲಿ ದಫ್ ಕಾರ್ಯಕ್ರಮ ನಡೆಯಿತು.

DKSC Dubai_Jan 20- 2015_011

DKSC Dubai_Jan 20- 2015_012

DKSC Dubai_Jan 20- 2015_013

DKSC Dubai_Jan 20- 2015_014

DKSC Dubai_Jan 20- 2015_015

DKSC Dubai_Jan 20- 2015_016

DKSC Dubai_Jan 20- 2015_017

DKSC Dubai_Jan 20- 2015_019

DKSC Dubai_Jan 20- 2015_020

DKSC Dubai_Jan 20- 2015_021

DKSC Dubai_Jan 20- 2015_022

DKSC Dubai_Jan 20- 2015_023

DKSC Dubai_Jan 20- 2015_024

DKSC Dubai_Jan 20- 2015_025

ಈ ಕಾರ್ಯಕ್ರಮವನ್ನು ಜ.ಶುಕೂರ್ ಮಣಿಲಾ ಹಾಗೂ ಜ.ಇಬ್ರಾಹಿಂ ಕಳತ್ತುರ್ ನಡೆಸಿಕೊಟ್ಟರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಯ್ಯದ್ ತ್ವಾಹ ಬಾಫಕಿ ತಂಙಲ್ ರವರ ಅಧ್ಯಕ್ಷತೆಯಲ್ಲಿ ಸಯ್ಯದ್ ತ್ವಾಹ ಬಾಫಕಿ ತಂಙಲ್ ಹಾಗೂ ಶೈಖುನಾ ಅಲಿಕುಂಞಿ ಉಸ್ತಾದ್ ರವರ ದುವಾದೊಂದಿಗೆ ಪ್ರಾರಂಭ ಗೊಂಡು ಉದ್ಘಾಟನೆಯನ್ನು ಅಲ್ ಇಹ್ಸಾನ್ ಶರೀಹತ್ ಕಾಲೇಜು ಇದರ ಪ್ರಾಂಶುಪಾಲರು ಉಡುಪಿ, ಜಿಲ್ಲಾ ಖಾಝಿ ಯು ಆದ ಅಲ್ ಹಾಜ್.ಪಿ.ಎಂ .ಇಬ್ರಾಹಿಂ ಮುಸ್ಲಿಯಾರ್ (ಶೈಖುನಾ ಬೇಕಲ ಉಸ್ತಾದ್ ) ರವರು ನಡೆ ಸಿದರು..

ಅತಿಥಿಗಳಾಗಿ ಡಾ .ಮುಹಮ್ಮದ್ ಫಾಜಿಲ್ ರಿಝ್ವಿ (ಕಾವಲ್ ಕಟ್ಟೆ ಹಝರತ್ ),ಮೌಲಾನ ಅಲ್.ಹಾಜ್.ಮುಸ್ತಫ ಸಅದಿ(ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮರ್ಕಝ್ ತಹಲಿಮುಲ್ ಇಹ್ಸಾನ್ ಮೂಳೂರ್), ಜ.ಅನ್ವರ್ ಗೂಡಿನಬಳಿ. (ಪ್ರದಾನ ಕಾರ್ಯದರ್ಶಿ ದಿ.ಕೆ.ಎಸ್.ಸಿ .ಸೆಂಟ್ರಲ್ ಕಮಿಟಿ), ಬಹು. ಸಯ್ಯದ್ ಅಸ್ಗರಲಿ ತಂಗಲ್ ಕೊಳ್ಫೆ, ಮೌಲಾನ ಶಾಫಿ ಸಅದಿ ಬೆಂಗಳೂರು, ಜ.ಅಕ್ರಂ ಶೇಖ್. ಕಮಿಷನರ್ ಮೇರಿಟೈಮ್ ಎಫಾಯಾರ್ಸ್ ಒಫ್ ಯುನಿಯನ್ ಒಫ್ ಕೊಮರೋಸ್, ಜ. ಇಕ್ಬಾಲ್ ಅಬ್ದುಲ್ ಹಮೀದ್ ಬೇಕಲ್, ಬಹು. ಕೆ.ಎಚ್.ಅಹಮದ್ ಫೈಝಿ ಕಕ್ಕಿಂಜೆ, ಡಾ.ಯೂಸುಫ್, ಡಾ.ಕಾಪು ಮುಹಮ್ಮದ್, ಜ. ಅಬ್ದುಲ್ ರಜಾಕ್ (ದೀವಾ),ಜ.ಲಬ್ದುಲ್ ಲತೀಫ್ ಮುಲ್ಕಿ, ಜ.ಯೂಸುಫ್ ಮುಳೂರು,ಜ..ವೈ.ಅಹಮದ್ ಹಾಜಿ ಉಚ್ಚಿಲ, ಜ.ಹಾತಿಂ ಕಂಚಿ, ಜ.ಹಾತಿಂ ಕೂಳೂರು, ಜ.ಅಬುಬಕ್ಕರ್ ಬರ್ವ, ಜ.ಉಸ್ಮಾನ್ ಹೊಸಂಗಡಿ, ಜ.ಹನೀಫ್ ಕಾಪು, ಜ.ತಜ್ಮಲ್, ಜ.ಬಿ.ಎಂ.ಜಾಫರ್. ಎಂ.ಡಿ ತೋನ್ಸೆ ಗ್ರೂಫ್ , ಜ.ಅಶ್ರಫ್ ಸಖಾಫಿ ಮಾಡವು, ಜ.ಹುಸೈನ್ ಹಾಜಿ ಕಿನ್ಯ, ಜ.ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ, ಜ.ಅಬ್ದುಲ್ ಜಲೀಲ್ ನಿಜಾಮಿ, ಜ. ಅಬ್ದುಲ್ಲ ಮದುಮೂಲೆ, ಜ.ಎಂ.ಎಸ್.ಅಕ್ಬರ್ ಮೂಳೂರು, ಹಾಜಿ.ಎಂ.ಇ. ಮುಳೂರು, ಜ.ಇಕ್ಬಾಲ್ ಕಣ್ಣಂಗಾರ್, ಬಹು.ಅಬುಬಕ್ಕರ್ ಉಸ್ತಾದ್ ಕೊಡುಂಗೈ, ಜ.ಪಿ.ಎಂ.ಯಚ್.ಈಶ್ವರಮಂಗಿಲ, ಜ.ಇಬ್ರಾಹಿಂ ಹಾಜಿ ಕಿನ್ಯ, ಜ.ಅಶ್ರಫ್ ಅಡ್ಯಾರ್ , ವಿವಿಧ ಸಂಘಟನೆಗಳ ಪಧಾಧಿಕಾರಿಗಳು ಹಾಗೂ ಹಲವು ಉಲಮಾ ಉಮರಾ ಗಳು ಉಪಸ್ತಿತರಿದ್ದರು.

DKSC Dubai_Jan 20- 2015_026

DKSC Dubai_Jan 20- 2015_027

DKSC Dubai_Jan 20- 2015_028

DKSC Dubai_Jan 20- 2015_029

DKSC Dubai_Jan 20- 2015_030

DKSC Dubai_Jan 20- 2015_031

DKSC Dubai_Jan 20- 2015_032

DKSC Dubai_Jan 20- 2015_033

DKSC Dubai_Jan 20- 2015_034

DKSC Dubai_Jan 20- 2015_035

DKSC Dubai_Jan 20- 2015_036

DKSC Dubai_Jan 20- 2015_037

DKSC Dubai_Jan 20- 2015_038

DKSC Dubai_Jan 20- 2015_039

DKSC Dubai_Jan 20- 2015_040

DKSC Dubai_Jan 20- 2015_041

DKSC Dubai_Jan 20- 2015_042

ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣವನ್ನು ಮೌಲಾನ ನೌಫಲ್ ಸಖಾಫಿ ಕಳಸ ರವರು ಗೈದರು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಡಿ.ಕೆ.ಎಸ್.ಸಿ ಇದರ ಹಿತೈಷಿ ಯು ಮೇರಿಟೈಮ್ ಎಫಾಯಾರ್ಸ್ ಒಫ್ ಯುನಿಯನ್ ಒಫ್ ಕೊಮರೋಸ್ ಇದರ ಕಮಿಷನರು ಅದ ಜ..ಅಕ್ರಂ ಶೇಖ್ ರವರನ್ನು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಗ್ವ್ ರವಾದ್ಯ್ಕ್ಷರಾದ ಸಯ್ಯದ್ ತ್ವಾಹ ಬಾಫಕಿ ತಂಙಲ್ ರವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಕಾರ್ಯಕ್ರಮವನ್ನು ಜ ಹಾಜಿ.ಎಂ.ಇ. ಮುಳೂರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಾಸ್ಟರ್ ಜ.ಮಾಸ್ಟರ್ ಮೊಯುದ್ದೀನ್ ಹಾಫಿಲ್ ರವರ ಕಿರಹಾತ್ ನೊಂದಿಗೆ ಮೀಲಾದ್ ಸ್ವಾಗತ ಸಮಿತಿ ಅದ್ಯಕ್ಷರಾದ ಜ.ಇ.ಕೆ.ಇಬ್ರಾಹಿಂ ಕಿನ್ಯ ಸ್ವಾಗತಿಸಿ ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಪ್ರದಾನ ಕಾರ್ಯದರ್ಶಿ ಜ.ಇಕ್ಬಾಲ್ ಹೆಜಮಾಡಿ ವಂದಿಸಿದರು. ಕಾರ್ಯಕ್ರಮವನ್ನು ಜ.ಕಮಲ್ ಅಜ್ಜಾವರ ನಿರ್ವಹಿಸಿ ಡಿ.ಕೆ.ಎಸ್.ಸಿ ವಿವಿದ ಘಟಕಗಳ ಪಧಾಧಿಕಾರಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು. ಛಾಯಾ ಗ್ರಹಕರಾಗಿ ಜ.ಸಮೀರ್ ಕಲ್ಲಾರೆ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ.ಯುತ್ ವಿಂಗ್ ಹಾಗೂ ಇಂಟರ್ ನ್ಯಾಷನಲ್ ಸಿಟಿ ಘಟಕ ದ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದ ನೇರ ಪ್ರಸಾರವನ್ನು ಕರ್ನಾಟಕ ಸುನ್ನಿ ಆನ್ ಲೈನ್ ಸದಸ್ಯರ ತಂಡವು ನಡೆಸಿತು.

ವರದಿ . ಎಸ್.ಯೂಸುಫ್ ಅರ್ಲಪದವು

Write A Comment