ಕರಾವಳಿ

ಹಳೆ ಮಾಲೀಕರನ್ನು ಬಿಟ್ಟು ಸಭೆ ನಡೆಸಿದ ಲಾರಿ ಕಂಪೆನಿ ಅಧಿಕಾರಿಗಳು; ಲಾರಿ ಮಾಲಕರ ಸಂಘದಿಂದ ಪ್ರತಿಭಟನೆ

Pinterest LinkedIn Tumblr

Yogish Kund-Dece 18- 2014_012

ಕುಂದಾಪುರ: ಈಚರ್ ಲಾರಿ ಕಂಪೆನಿಯ ಅಧಿಕಾರಿಗಳು ಹಳೆ ಲಾರಿ ಮಾಲಕರನ್ನು ಗಣನೆಗೆ ತೆಗೆದುಕೊಳ್ಳದೇ ಹೊಸ ಗಿರಾಕಿಗಳೊಂದಿಗೆ ಸಭೆ ನಡೆಸುವ ಮೂಲಕ ಲಾರಿ ಮಾಲಕರ ಸಂಘಕ್ಕೆ ಅವಮಾನಪಡಿಸಲಾಗಿದೆ ಎಂದು ಆಕ್ಷೇಪಿಸಿ ಲಾರಿ ಮಾಲಕರ ಸಂಘದಿಂದ ಪ್ರತಿಭಟನೆ ನಡೆದ ಘಟನೆ ಬುಧವಾರ ರಾತ್ರಿ ಹೆಮ್ಮಾಡಿಯ ಜ್ಯುವೆಲ್ ಪಾರ್ಕಿನ ಜಯಶ್ರೀ ಹಾಲ್‌ನಲ್ಲಿ ನಡೆದಿದೆ;

ಘಟನೆಯ ವಿವರ: ಈಚರ್ ಲಾರಿ ಕಂಪೆನಿ ಕಳೆದ ಕೆಲವು ವರ್ಷಗಳಿಂದ ಕರಾವಳಿಯಲ್ಲಿ ಲಾರಿ ಮಾರಾಟ ಮಾಡಿತ್ತು. ಆದರೆ ಲಾರಿ ಖರೀದಿಯ ಸಂದರ್ಭ ವಿಶೇಷ ರಿಯಾಯಿತಿ ಘೋಷಣೆ ಜೊತೆಗೆ ಲಾರಿ ಖರೀದಿಸಿದ ಲಾರಿ ಮಾಲಕರಿಗೆ ಸರಿಯಾದ ಸೇವೆ ನೀಡುತ್ತಿಲ್ಲ ಎನ್ನುವ ಆರೋಪ ಮಾಡಿದ ಲಾರೀ ಮಾಲೀಕ ಅರುಣ್ ಕುಮಾರ್ ಶೆಟ್ಟಿ ಹೇರಿಕುದ್ರು, ಈ ಹಿಂದೆ ಲಾರಿ ಖರೀದಿಸಿದವರನ್ನು ಬಿಟ್ಟು ಹೊಸದಾಗಿ ಬೇರೆಯವರಿಗೆ ವಿಶೇಷ ರಿಯಾತಿಯಲ್ಲಿ ಲಾರಿ ಮಾರಾಟ ಮಾಡಲು ಕಂಪೆನಿ ಅಧಿಕಾರಿಗಳು ನಿರ್ಧರಿಸಿದ್ದು ಸರಿಯಲ್ಲ ಎಂದು ದೂರಿದರು.

Yogish Kund-Dece 18- 2014_001

Yogish Kund-Dece 18- 2014_002

Yogish Kund-Dece 18- 2014_003

Yogish Kund-Dece 18- 2014_004

Yogish Kund-Dece 18- 2014_005

Yogish Kund-Dece 18- 2014_006

Yogish Kund-Dece 18- 2014_007

Yogish Kund-Dece 18- 2014_008

Yogish Kund-Dece 18- 2014_009

Yogish Kund-Dece 18- 2014_010

Yogish Kund-Dece 18- 2014_011

Yogish Kund-Dece 18- 2014_013

Yogish Kund-Dece 18- 2014_014

Yogish Kund-Dece 18- 2014_015

Yogish Kund-Dece 18- 2014_016

ಮಾತಿಗೆ ಮಾತು ಬೆಳೆದು ಘರ್ಷಣೆ ಹೆಚ್ಚಾಗುತ್ತಿದ್ದ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಎಸ್ಸೈ ನಾಸೀರ್ ಹುಸೇನ್ ಎರಡೂ ತಂಡವನ್ನು ಕರೆಸಿ ಮಾತುಕತೆ ಮೂಲಕ ಸಮಸ್ಯೆ ತಿಳಿಸಿಗೊಳಿಸಿದ್ದಾರೆ. ಪ್ರತಿಭಟನೆಯಲ್ಲಿ ಕುಂದಾಪುರ ಲಾರಿ ಮಾಲಕರ ಹಾಗೂ ಟ್ರಾನ್ಸ್‌ಪೋರ್ಟ್ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಎಸ್. ನಾಯಕ್, ಜೊತೆ ಕಾರ್ಯದರ್ಶಿ ಶೇಖರ ಬಿಲ್ಲವ, ಖಜಾಂಚಿ ಅನಿಲ್ ಡಿ.ಎಸ್. ಮೊದಲಾದವರಿದ್ದರು.

Write A Comment