ಕರಾವಳಿ

ಕುಂದಾಪುರ: ಬಿಜೆಪಿ ಸದಸ್ಯತಾ ರಥ ಉದ್ಘಾಟಿಸಿದ ಶಾಸಕ ಸುನೀಲ್ ಕುಮಾರ್

Pinterest LinkedIn Tumblr

BJP Kundapur-Dece 15- 2014_005

ಕುಂದಾಪುರ: ನರೇಂದ್ರ ಮೋದಿಯಯವರು ನವೆಂಬರ್ ೧ರಂದು ಚಾಲನೆ ನೀಡಿದ ಬಿಜೆಪಿ ಸದಸ್ಯತಾ ಅಭಿಯಾನವನ್ನು ಆಂದೋಲನವನ್ನಾಗಿ ಮಾಡುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಮುಂದಿನ ನಾಲ್ಕು ತಿಂಗಳುಗಳ ಒಳಗೆ ೭೫ ಲಕ್ಷ ಹೊಸ ಸದಸ್ಯರನ್ನು ನೋಂದಾಯಿಸುವ ಪಣ ತೊಡಲಾಗಿದೆ ಎಂದು ಕಾರ್ಕಳ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ ಸುನಿಲ್ ಕುಮಾರ್ ಹೇಳಿದರು.

ಕುಂದಾಪುರದ ಶಾಸ್ತ್ರೀ ವೃತ್ತದ ಸಮೀಪ ಕುಂದಾಪುರ ಕ್ಷೇತ್ರ ಬಿಜೆಪಿ ಹಮ್ಮಿಕೊಂಡ ಬಿಜೆಪಿ ಸದಸ್ಯತಾ ಅಭಿಯಾನ ಮತ್ತು ಬಿಜೆಪಿ ಮನೆ ರಥವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಯುಗದಲ್ಲಿರುವ ನಾವು ಮೊಬೈಲ್ ಸಂದೇಶ ಹಾಗೂ ಮಿಸ್ಡ್ ಕಾಲ್ ಮೂಲಕವೂ ಪಕ್ಷದ ಸದಸ್ಯತ್ವ ನೋಂದಾವಣೆ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ವಿಭಿನ್ನ ಶೈಲಿಯಲ್ಲಿ ಬಿಜೆಪಿ ಮನೆ ಎನ್ನುವ ರಥದ ಮೂಲಕ ಗ್ರಾಮ ಗ್ರಾಮಗಳಿಗೆ ಸಂಚರಿಸಿ ಅಭಿಯಾನ ಕೈಗೊಳ್ಳಲಾಗುತ್ತದೆ. ಮುಂದಿನ ನಾಲ್ಕು ತಿಂಗಳುಗಳ ಕಾಲ ಈ ಅಭಿಯಾನ ಮುಂದುವರೆಯಲಿದ್ದು, ಆಯಾ ಶಕ್ತಿಕೇಂದ್ರಗಳಲ್ಲಿ ಕೇಂದ್ರದ ಮುಖಂಡರುಗಳ ಸಾರಥ್ಯದಲ್ಲಿ ಈ ಅಭಿಯಾನ ನಡೆಯುತ್ತದೆ ಎಂದವರು ಹೇಳಿದರು.

BJP Kundapur-Dece 15- 2014_001

BJP Kundapur-Dece 15- 2014_002

BJP Kundapur-Dece 15- 2014_003

BJP Kundapur-Dece 15- 2014_004

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಳೆದ ಆರೂವರೆ ದಶಕಗಳಲ್ಲಿಯೇ ಕಾಣದಂತ ಸಮರ್ಥ ಜನನಾಯಕನೊಬ್ಬನನ್ನು ಬಿಜೆಪಿ ದೇಶಕ್ಕೆ ಕೊಟ್ಟಿದೆ. ಯಾವ ಅಮೇರಿಕಾ ನರೇಂದ್ರ ಮೋದಿಗೆ ವಿಸಾ ನೀಡಲು ನಿರಾಕರಿಸಿತ್ತೋ ಅದೇ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಮುಂದಿನ ತಿಂಗಳ ೨೬ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ. ದೇಶದಲ್ಲಿ ೧೦ ಕೋಟಿ ಸದಸ್ಯರನ್ನು ಹೊಂದುವ ಬಿಜೆಪಿಯ ಕನಸು ನನಸಾದರೆ ಅದೂ ಕೂಡಾ ಗಿನ್ನೆಸ್ ದಾಖಲೆಯಾಗಲಿದೆ ಎಂದವರು ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೆಳ್ವೆ ವಸಂತಕುಮಾರ್ ಶೆಟ್ಟಿ, ಕುಂದಾಪುರ ಶಕ್ತಿ ಕೇಂದ್ರದ ಅಧ್ಯಕ್ಷ ರವಿರಾಜ ಖಾರ್ವಿ, ಮೀನುಗಾರಿಕಾ ಪ್ರಕೋಷ್ಟದ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ಕುಂದಾಪುರ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಅನಿತಾ, ಪ್ರಧಾನ ಕಾರ್ಯದರ್ಶಿ ಗೌರಿ ಶಿವಾನಂದ ಉಪಸ್ಥಿತರಿದ್ದರು.

ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿವಿಧ ಶಕ್ತಿ ಕೇಂದ್ರಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Write A Comment