ಕರಾವಳಿ

ಕನ್ನಡಕ್ಕೆ ಎಂಟ್ರಿ ನೀಡಿದ ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಕಾಪಿಕಾಡ್; ಸದ್ದು ಗದ್ದಲ ಇಲ್ಲದೆ ‘ಮಧುರ ಸ್ವಪ್ನ’ ಚಿತ್ರೀಕರಣ

Pinterest LinkedIn Tumblr

devdaas

ತುಳುನಾಡಿನ ರಂಗಭೂಮಿಯಲ್ಲಿ ಮತ್ತು ಈಗಷ್ಟೇ ತನ್ನ ಇರುವಿಕೆಯ ಸದ್ದು ಮಾಡುತ್ತಿರುವ ತುಳು ಸಿನಿಮಾ ವಲಯದಲ್ಲಿ ನಟ ದೇವದಾಸ್ ಕಾಪಿಕಾಡ್ ಹೆಸರು ಭಾರೀ ಫೇಮಸ್ಸು! ದೇವದಾಸ್ ಕಾಪಿಕಾಡ್ ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರಗಳ ಕಾಮಿಡಿ ಪಾತ್ರಗಳಲ್ಲೂ ನಟಿಸಿಹೋಗುತ್ತಿರುತ್ತಾರೆ.

ವಿಚಾರ ಅದಲ್ಲ, ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಕಾಪಿಕಾಡ್ ಈಗ ಕನ್ನಡ ಸಿನಿಮಾವೊಂದರಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಅದು ‘ಮಧುರ ಸ್ವಪ್ನ’ದಲ್ಲಿ! ಇದು ಕರಾವಳಿ ಮಾತ್ರವಲ್ಲ, ಕಾಪಿಕಾಡ್ ಬಗ್ಗೆ ತಿಳಿದಿರುವ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಹೆಮ್ಮಿಗೆ ಪುರದ ಸಂಜೀವ್ ಕುಮಾರ್ ಅವರ ಹೆಮ್ಮೆಯ ಕಾಣಿಕೆ ‘ಮಧುರ ಸ್ವಪ್ನ’ ಸದ್ದು ಗದ್ದಲ ಇಲ್ಲದೆ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಇದೀಗ ಹಾಡುಗಳ ಚಿತ್ರೀಕರಣಕ್ಕೆ ಸಜ್ಜಾಗಿದೆ. ‘ಮಧುರ ಸ್ವಪ್ನ-ಎ ಗ್ಲೋರಿ ಆಫ್ ಡ್ರೀಮ್ ಲವ್’ ಎಂದು ಚಿತ್ರಕ್ಕೆ ಅಡಿ ಬರಹ ನೀಡಲಾಗಿದೆ. ಮೊದಲ ಪ್ರಯತ್ನದಲ್ಲಿ ನಿರ್ಮಾಪಕ ಸಂಜೀವ್ ಕುಮಾರ್ ಅವರು ಹೆಸರಾಂತ ತುಳು ನಾಟಕಕಾರ ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ್ ಕಾಪಿಕಡ್ ಅವರನ್ನು ಕನ್ನಡ ಸಿನಿಮಾಕ್ಕೆ ಪರಿಚಯಿಸುವುದರೊಂದಿಗೆ, ಕೀರ್ತನ ಪೊಡ್ವಾಲ್ ಎಂಬ ನಾಯಕಿಯನ್ನು ಪರಿಚಯಿಸಿದ್ದಾರೆ.

ತೆಲುಗು ಭಾಷೆಯಲ್ಲಿ “ಅನಿತಾ ಓ ಅನಿತಾ….” ಹಾಡಿನಿಂದ ಖ್ಯಾತಿ ಪಡೆದ ರವಿ ಕಲ್ಯಾಣ್ ಅವರನ್ನು ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಬರಮಾಡಿಕೊಂಡಿದ್ದಾರೆ. ಚಿತ್ರಕ್ಕಾಗಿ ಏಳು ಹಾಡುಗಳು ಸಿದ್ದವಾಗಿದ್ದು ಇನ್ನಷ್ಟೇ ಚಿತ್ರೀಕರಣವಾಗಬೇಕಿದೆ. ‘ಮಧುರ ಸ್ವಪ್ನ’ ಒಂದು ಮುದ್ದಾದ ಪ್ರೇಮಕಥೆ, ಮುದ್ದಾದ ನಿರೂಪಣೆಯಿಂದ ಕೂಡಿದೆ. ನಿರ್ದೇಶಕ ರವಿ ರತ್ನ, ಪ್ರೀತಿಸುವ ಹೃದಯಗಳ ಕುರಿತು ಮಾತ್ರವಲ್ಲದೆ, ಹೆತ್ತವರಿಗೂ ಸಂಬಂಧಪಟ್ಟ ಅನೇಕ ವಿಚಾರಗಳನ್ನು ತಮ್ಮ ಗಟ್ಟಿಯಾದ ನಿರೂಪಣೆಯಿಂದ ಹೇಳಹೊರಟಿದ್ದಾರೆ.

ಬೆಂಗಳೂರು, ಕೋಲಾರ, ಕೆ ಜಿ ಎಫ್, ಸಕಲೇಶಪುರ, ಮಂಗಳೂರು ಮುಂತಾದೆಡೆ ‘ಮಧುರ ಸ್ವಪ್ನ’ವನ್ನು ಚಿತ್ರೀಕರಿಸಿದ್ದಾರೆ. ಅವಿನಾಶ್, ವಿನಯಾ ಪ್ರಕಾಶ್, ಅಶೋಕ್, ಮುಖ್ಯಮಂತ್ರಿ ಚಂದ್ರು, ರಾಮಕೃಷ್ಣ, ಯಶವಂತಪುರದ ಶಾಸಕ ಸೋಮಶೇಖರ್ ಹಾಗೂ ಇತರರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಈಶ್ವರ್ ಅವರ ಸಂಕಲನ, ಹರಿಕೃಷ್ಣ ಅವರ ನೃತ್ಯ ನಿರ್ದೇಶನ, ವಿನೋದ್ ಅವರ ಸಾಹಸ ಈ ಚಿತ್ರಕ್ಕಿದೆ.

Write A Comment