ಕರಾವಳಿ

ಕವಯಿತ್ರಿ ಸುಮಾಡ್ಕರ್ ಅವರ ಚೊಚ್ಚಲ ಭಾವ ಪಕ್ಷಿಗೆ ನೇವರಿಕೆ ಕವನ ಬಿಡುಗಡೆ.

Pinterest LinkedIn Tumblr
kavana_bidugade_photo_1
ಮಂಗಳೂರು,ನ.24: ಸ್ವರೂಪ ಅಧ್ಯಯನ ಕೇಂದ್ರದ ಪ್ರಾಂಶುಪಾಲೆ, ಕವಯಿತ್ರಿ ಸುಮಾಡ್ಕರ್ ಅವರ ಭಾವ ಪಕ್ಷಿಗೆ ನೇವರಿಕೆ ಎಂಬ ಚೊಚ್ಚಲ ಕವನ ಸಂಕಲನವನ್ನು ಡಾ| ಮೀನಾಕ್ಷಿ ರಾಮಚಂದ್ರ ಅವರು 22-11-2014ರ ಸಂಜೆ ನಗರದ ಡಾನ್‌ಬಾಸ್ಕೊ ಹಾಲ್‌ನಲ್ಲಿ ಬಿಡುಗಡೆ ಮಾಡಿದರು. ಅವರು ಕವನ ಸಂಕಲನದ ಬಗ್ಗೆ ಮಾತನಾಡುತ್ತಾ ಕನಸುಗಳು, ನೆನಪುಗಳ ಬಗ್ಗೆ ಹೆಚ್ಚು ಬರೆದಿರುವ ಕವಯಿತ್ರಿಯಿಂದ ದಾಂಪತ್ಯದ ಸುಂದರ ಚಿತ್ರಣಗಳು, ಸಾಮಾಜಿಕ ಸ್ಪಂದನೆಯ ಪರಿಸರ ಪ್ರೀತಿಯ ಕವನಗಳೂ ಚೆನ್ನಾಗಿ ಮೂಡಿ ಬಂದಿವೆ. ತನ್ನ ಪ್ರತಿಯೊಂದು ಕವನಕ್ಕೆ ನವ್ಯ ಚಿತ್ರಗಳನ್ನು ಬಿಡಿಸುವುದರ ಮೂಲಕ ತಾನು ಚಿತ್ರಕಲಾವಿದೆಯೂ ಹೌದು ಎಂದು ಕವಯಿತ್ರಿ ತೋರಿಸಿಕೊಟ್ಟಿದ್ದಾರೆ. ನಮ್ಮ ಕವನಗಳು ಮೊದಲು ನಮಗೆ ತೃಪ್ತಿ ಕೊಟ್ಟರೆ ಸಾಕು,  ಓದುವ ಸಹೃದಯರು ಬಂದೇ ಬರುತ್ತಾರೆ ಎಂದರು.
kavana_bidugade_photo_2
ಕವಯಿತ್ರಿ ಸುಮಾಡ್ಕರ್ ಮಾತನಾಡಿ ಸುತ್ತಲಿನ ಪರಿಸರದ ಆಗು ಹೋಗುಗಳು ನನ್ನನ್ನು ಕಾಡಿದಾಗ ಆ ಭಾವತುಮುಲಗಳನ್ನು ಪ್ರಾಮಾಣಿಕವಾಗಿ ಕವನ ಮತ್ತು ಚಿತ್ರಗಳ ಮೂಲಕ ಅಭಿವ್ಯಕ್ತಿಸಿದ್ದೇನೆ. ಅಕಾಡೆಮಿಕ್ ಆಗಿ ಯಾವ ಬೇಲಿಯನ್ನೂ ಹಾಕಿಕೊಂಡಿಲ್ಲ ಎಂದರು. ಸಮಾರಂಭದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ| ಬಿ.ಎ. ವಿವೇಕ್ ರೈ, ಡಾ| ಕವಿತಾ ಪಿ.ಎನ್ (ಇಂಟರ್‌ಫೇಸ್ ಎಜ್ಯುಕೇಷನ್ ಇಂಡಿಯಾ ಪ್ಲಾಟ್‌ಫಾರ್ಮ್), ಬೈಕಾಡಿ ಜನಾರ್ಧನ ಆಚಾರ್, ಪುತ್ತೂರಿನ ಬಿ.ಇ.ಒ. ಶಶಿಧರ್, ಗೋಪಾಡ್ಕರ್, ಈಶ್ವರ್ ಎನ್. ಹಾಗೂ ಜಗದೀಶ್ ಸ್ವರೂಪ ಭಾಗವಹಿಸಿದರು. ಗಣೇಶ್ ನಾಯಕ್ ಹಾಗೂ ಮನಸ್ವಿ ಸ್ವರೂಪ ಕಾರ್ಯಕ್ರಮವನ್ನು ನಿರ್ವಹಿಸಿದರು.

Write A Comment