ಕರಾವಳಿ

ಸಾಂಪ್ರದಾಯಿಕ ಲಾಟರಿ ಆರಂಭಕ್ಕೆ ಒತ್ತಾಯ: ಜಿಲ್ಲಾ ಸಮಿತಿ ರಚನೆ

Pinterest LinkedIn Tumblr

lottary_meeting_photo_1

ಮಂಗಳೂರು: ರಾಜ್ಯದಲ್ಲಿ ಸಾಂಪ್ರದಾಯಿಕ ಲಾಟರಿಯನ್ನು ಮರು ಆರಂಭಿಸಬೇಕೆಂದು ಒತ್ತಾಯಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಾಟಗಾರರ ಸಂಘ ಕಾರ್ಯಾರಂಭಗೊಂಡಿದ್ದು ಇದರ ಜಿಲ್ಲಾ ಸಮಿತಿಯ ರಚನೆಯೂ ಸೋಮವಾರ ನಡೆಯಿತು.

lottary_meeting_photo_2

1969 ರಲ್ಲಿಯೇ ಕರ್ನಾಟಕ ರಾಜ್ಯ ಲಾಟರಿ ಆರಂಭಗೊಂಡಿದ್ದು ಅದು ಭಿಕ್ಷೆ ಬೇಡುವವರಿಗೂ ಸ್ವಾವಲಂ ಬನೆಯನ್ನು ಕಲಿಸಿಕೊಟ್ಟಿತ್ತು. 1969ರ ಬಳಿಕದಿಂದ ಈ ಲಾಟರಿ ವ್ಯವಸ್ಥೆ ಆರ್ಥಿಕ ಸ್ಥಿತಿಗತಿಗಳನ್ನೇ ಬದಲಾಯಿ ಸಿತ್ತು. ಆದರೆ ಬಳಿಕದ ದಿನದಲ್ಲಿ ಇದನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ನಡೆಯಿತು. ಪರಿಣಾಮ ಇಂದು ರಾಜ್ಯದಲ್ಲಿರುವ 8 ಲಕ್ಷ ಮಂದಿ ಚಿಲ್ಲರೆ ಲಾಟರಿ ಮಾರಾಟಗಾರರು ಬೀದಿಗೆ ಬೀಳುವ ಪರಿಸ್ಥಿತಿ ಬಂದೊದಗಿದೆ. ಲಾಟರಿ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಅಡಕವಾಗಿದೆ.

lottary_meeting_photo_3

ಸರಕಾರವೂ ಈ ಬಗ್ಗೆ ಗಂಭೀರವಾದ ಚಿಂತನೆ ನಡೆಸಿಲ್ಲ. ಸಾಂಪ್ರದಾಯಿಕ ಲಾಟರಿಯನ್ನು ಆರಂಭಿಸುವುದರಿಂದ ಉತ್ತಮ ಸಾಮಾಜಿಕ ವ್ಯವಸ್ಥೆ ರೂಪು ಗೊಳ್ಳಲು ಸಾಧ್ಯ ಎನ್ನುವುದನ್ನು ಸರಕಾರಕ್ಕೆ ಮನವರಿಕೆ ಮಾಡಲು ಆಂದೋಲನ ಆರಂಭಿಸಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಮಿತಿ ರಚನೆ ಮಾಡಲಾಗುತ್ತಿದೆ ಎಂದು ರಾಜ್ಯಾ ಧ್ಯಕ್ಷರಾದ ಸಿ. ರಾಮಕೃಷ್ಣ ತಿಳಿಸಿದರು. ಇದೇ ನಿಟ್ಟಿನಲ್ಲಿ ನಿನ್ನೆ ಜಿಲ್ಲಾ ಸಮಿತಿ ರಚಿಸಲಾಗಿದ್ದು, ಮನೀಶ್ ಅವರು ಜಿಲ್ಲಾಧ್ಯಕ್ಷರಾಗಿಯೂ, ಶಶಿಕುಮಾರ್ ಅವರು ಕಾರ್ಯದರ್ಶಿಯಾಗಿಯೂ, ಗೋಕುಲ್ ಅವರು ಉಪಾಧ್ಯಕ್ಷರಾ ಗಿಯೂ ಮತ್ತು ಇತರ ಎಂಟು ಮಂದಿ ನಿರ್ದೇಶಕರಾಗಿಯೂ ಆಯ್ಕೆಯಾದರು.

Write A Comment