ಕರಾವಳಿ

ಭಾರತ ಸೇವಾದಳ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ನೆಹರೂ ಜನ್ಮದಿನಾಚರಣೆ.

Pinterest LinkedIn Tumblr

childrens_day_photo_1a

ಮಂಗಳೂರು,ನ.14: ದ.ಕ. ಜಿಲ್ಲಾ ಭಾರತ ಸೇವಾದಳ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ನೆಹರೂ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಇಂದು ನಗರದ ಪಾಂಡೇಶ್ವರ ರಸ್ತೆಯಲ್ಲಿರುವ ಜವಾಹರಲಾಲ್ ನೆಹರೂ ರವರ ಪ್ರತಿಮೆಗೆ ಪುಷ್ಪಾರ್ಚನೆಗೈಯುವೂದರ ಮೂಲಕ ಅಚರಿಸಯಿತು.

childrens_day_photo_2a childrens_day_photo_3a

ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಶ್ರೀ ಮಹಾಬಲ ಮಾರ್ಲರವರು, ಪ್ರಪಂಚದಲ್ಲಿ ದೊಡ್ಡ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುವುದು ಭಾರತದಲ್ಲಿ ಮಾತ್ರ. ಇದು ಭಾರತದ ಪ್ರಥಮ ಪ್ರಧಾನಿ ದಿ|| ಪಂಡಿತ ಜವಾಹರಲಾಲ್ ನೆಹರೂರವರ 125 ನೇ ಜನ್ಮದಿನಾಚರಣೆಯ ದಿವಸದಂದು ನಾವೆಲ್ಲರೂ ಕೊಡುವಂತಹ ಗೌರವ. ಮಕ್ಕಳೆಂದರೆ ಅವರಿಗೆ ಬಹಳಷ್ಟು ಪ್ರೀತಿ. ಆದ್ದರಿಂದ ಅವರನ್ನು ಚಾಚಾ ನೆಹರೂ ಎಂದೇ ಕರೆಯುತ್ತಿದ್ದರು. ಈ ದೇಶ ಕಟ್ಟಲು ಅವರು ನೀಡಿದಂತಹ ಕೊಡುಗೆ ಅಪಾರ. ಅವರು ಜೀವನದಲ್ಲಿ ಅಳವಡಿಸಿದ ನೀತಿ, ಸಿದ್ಧಾಂತಗಳ ಕೆಲವೊಂದು ಅಂಶಗಳನ್ನು ನಾವೆಲ್ಲರೂ ಪಾಲಿಸಿದರೆ, ನಮ್ಮ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯ ಬಹುದು. ಅದಲ್ಲದೇ ಮಂಗಳೂರನ್ನು ಆರೋಗ್ಯವಂತ ನಗರವನ್ನಾಗಿ ಪರಿವರ್ತಿಸಲು ನಾವೆಲ್ಲರೂ ಕಂಕಣಬದ್ಧರಾಗಿರಬೇಕು. ಸ್ವಚ್ಚಭಾರತ ಅಂದೋಲನದ ಮೂಲಕ ಶುಚಿತ್ವವನ್ನು ಕಾಪಾಡಿ ದೇಶದಲ್ಲಿಯೇ ಮಂಗಳೂರನ್ನು ಉತ್ತಮ ಆರೋಗ್ಯವಂತ ನಗರವನ್ನಾಗಿ ಮಾಡಬೇಕೆಂದು ಕರೆಯಿತ್ತರು.

childrens_day_photo_8a childrens_day_photo_4a childrens_day_photo_5 childrens_day_photo_6 childrens_day_photo_7

ಕಾರ್ಯಕ್ರಮದಲ್ಲಿ ಉಪಮೇಯರ್ ಶ್ರೀಮತಿ ಕವಿತಾವಾಸು, ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಕಾರ್ಯದರ್ಶಿ ಟಿ.ಕೆ. ಸುಧೀರ್ ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್ ಕಾರ್ಯದರ್ಶಿ ಉದಯಕುಂದರ್, ಸಂಘಟಕ ಮಂಜೇಗೌಡ, ಪದಾಧಿಕಾರಿಗಳಾದ ಮಾಧವಮಯ್ಯ, ಪ್ರೇಮಚಂದ್, ದುರ್ಗಾಪ್ರಸಾದ್, ಕೃತಿನ್ ಕುಮಾರ್, ಸುರೇಶ್ ಶೆಟ್ಟಿ, ಸೇವಾದಳದ ಶಿಕ್ಷಕಿಯಾರಾದ ರೆಹನಾ ಬಾನು, ಜೂಲಿಯಟ್ ಪಿಂಟೋ, ಸುಮಾ ಬೆಂಗರೆ, ಗ್ರೇಸಿ ನೊರೋನ್ಹಾ ಕುಮಲಾ, ರೇವತಿ ನಾಲ್ಯಪದವು, ಮೇಬಲ್ ತ್ರಾವೋ, ಪುಷ್ಪಾವತಿ ಮೊದಲಾದವರು ಉಪಸ್ಥಿತರಿದ್ದರು, ವಿವಿಧ ಶಾಲೆಗಳಿಂದ ಸುಮಾರು 150ವಿದ್ಯಾರ್ಥಿಗಳು ಭಾಗವಹಿಸಿದ್ದರು.

Congress_celebrts_chldrn_da

ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಜನ್ಮದಿನಾಚರಣೆ
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ದೇಶದ ಪ್ರಥಮ ಪ್ರಧಾನಿ ದಿ|| ಪಂಡಿತ ಜವಾಹರ್‌ಲಾಲ್ ನೆಹರೂರವರ ೧೨೫ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಶ್ರೀ. ಇಬ್ರಾಹಿಂ ಕೂಡಿಚಾಲ್‌ರವರು, ಈ ದೇಶದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ನೆಹರೂರವರು ಬಹಳಷ್ಟು ಕೊಡುಗೆಗಳನ್ನು ನೀಡಿದವರು. ಅವರ ಜನ್ಮದಿನೋತ್ಸವದ ದಿನದಂದು ಮಕ್ಕಳ ದಿನಾಚರಣೆಯನ್ನು ದೇಶದ ಪ್ರತೀ ಶಾಲೆಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಆಚರಿಸುವುದರ ಮೂಲಕ ನೆಹರೂರವರಿಗೆ ನಮನವನ್ನು ಸಲ್ಲಿಸುವಂತಾಗಿದೆ ಎಂದರು. ಮಂಗಳೂರು ದಕ್ಷಿಣ ಶಾಸಕ ಶ್ರೀ. ಜೆ. ಆರ್. ಲೋಬೋರವರು ಮಾತನಾಡುತಾ ಈ ದೇಶದ ಸ್ವಾತಂತ್ರೋತ್ಸವಕ್ಕೆ ಹೋರಾಟ ಮಾಡಿ ಆನಂತರ ಈ ದೇಶದ ಪ್ರಧಾನಿಯಾಗಿ ಪಂಚವಾರ್ಷಿಕ ಯೋಜನೆಯನ್ನು ರೂಪಿಸಿ ದೇಶದಲ್ಲಿ ಆನೇಕ ಕೈಗಾರಿಕೆಗಳನ್ನು ಸ್ಥಾಪಿಸಿ, ಅದೆಷ್ಟೋ, ಜನರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದ್ದರು.

ಮೇಯರ್ ಶ್ರೀ ಮಹಾಬಲ ಮಾರ್ಲರವರು ಮಾತನಾಡಿ, ನೆಹರೂರವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ನಿಜ ಜೀವನದ್ಲಲಿ ಅಳವಡಿಸಿ, ಸಮಾಜದ ಏಳಿಗೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜರವರು ಮಾತನಾಡುತ್ತಾ, ನೆಹರೂರವರು ದೇಶದ ಪ್ರಥಮ ಪ್ರಧಾನಿಯಾಗಿ ಅನೇಕ ಯೋಜನೆಗಳನ್ನು ರೂಪಿಸಿದ ಫಲಿತಾಂಶವೇ ಇಂದು ಜಗತ್ತಿನ ಶ್ರೇಷ್ಠ ರಾಷ್ಟ್ರಗಳ ಸಾಲಿಗೆ ಭಾರತ ನಿಲ್ಲುವಂತಾಯಿತು ಎಂದರು.

ಸಮಾರಂಭದಲ್ಲಿ ಪಕ್ಷದ ಪದಾಧಿಕಾರಿಗಳಾದ ಸದಾಶಿವ ಉಳ್ಳಾಲ, ಶಶಿಧರ ಹೆಗ್ಡೆ, ಎ.ಸಿ. ಭಂಡಾರಿ, ಸುರೇಶ್ ಬಲ್ಲಾಳ್, ಮೊಹಮ್ಮದ್ ಬದ್ರುದ್ದೀನ್, ವಿಶ್ವಾಸ್‌ದಾಸ್, ಟಿ.ಕೆ. ಸುಧೀರ್, ಧರೆಣೆಂದ್ರ ಕುಮಾರ್ ಸುಭೋದ್ ಆಳ್ವ, ನಜೀರ್ ಬಜಾಲ್, ಉಪ ಮೇಯರ್ ಕವಿತಾ ವಾಸು, ಜೆಸಿಂತಾ ಅಲ್ಫ್ರೇಡ್, ಮೊಹ್ಮಮದ್ ಕುಂಜತ್‌ಬೈಲ್,ರತಿಕಲಾ ಸಬಿತಾ ಮಿಸ್ಕಿತ, ಲಕ್ಷ್ಮೀನಾಯರ್, ಶೈಲಜಾ, ನಾಗವೇಣಿ, ಮಮತಾ ಶೆಣೈ, ಸ್ಟೀವನ್ ಮರೋಳಿ, ಜಯಕರ ಸಮರ್ಥ, ಪ್ರೇಮನಾಥ್, ಸಿ.ಎಂ. ಮುಸ್ತಾಫಾ, ರಮಾನಂದ ಪೂಜಾರಿ, ಚೇತನ್ ಕುಮಾರ್, ಗಿರೀಶ್ ಆಳ್ವ, ಮೊಹಮ್ಮದ್ ಅರೀಫ್ ಮೊದಲಾದವರು ಉಪಸ್ಥಿತರಿದ್ದರು.

Write A Comment