ಕುಂದಾಪುರ: ಬೀಜಾಡಿ ಮೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಂದಾಪುರ ಅಸಿಸ್ಟೆಂಟ್ ಕಮೀಷನರ್ ಚಾರುಲತಾ ಸೋಮಲ್ ಬೇಟಿ ನೀಡಿ ಶಾಲೆಯ ಭೂಸ್ವಾಧೀನದ ಬಗ್ಗೆ ಸ್ಥಳ ಮತ್ತು ಶಾಲಾ ಕಟ್ಟಡವನ್ನು ಪರಿಶೀಲಿಸಿದರು.
ಸ್ಥಳೀಯ ಶಾಲಾ ಮುಖಂಡರೊಂದಿಗೆ ಶಾಲೆಯ ಸರ್ವೋತೋಮುಖ ಅಭಿವೃದ್ಧಿಗೆ ತೆಗೆದುಕೊಂಡ ನಿರ್ಣಯಗಳನ್ನು ಪರಿಶೀಲಿಸಿ ಕೆಲವೂಂದು ಸೂಚನೆಗಳನ್ನು ನೀಡಿದರು. ಬಳಿಕ ಶಾಲಾ ವಿದ್ಯಾರ್ಥಿಗಳೊಂದಿಗೆ ಪಠ್ಯತೇರ ಚಟುವಟಿಕೆಗಳ ಸಮಲೋಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ವಾದಿರಾಜ ಹೆಬ್ಬಾರ್, ಶಾಲಾ ಮುಖ್ಯೋಪಾಧ್ಯಾಯ ಪಧ್ಮನಾಭ ಅಡಿಗ, ಎಸಿ ಕಚೇರಿ ಸಿಬ್ಬಂದ್ಧಿ ಸಿಕಂಧರ್, ಗ್ರಾಮ ಲೆಕ್ಕಿಗ ಜಗದೀಶ್, ಮಾಜಿ ಎಸ್‌ಡಿಎಮ್‌ಸಿ ಅಧ್ಯಕ್ಷ ರಾಮನಾಯ್ಕ್, ಎಸ್‌ಡಿಎಮ್‌ಸಿ ಸದಸ್ಯ ಲಕ್ಷ್ಮಣ ಭಟ್, ಸ್ಥಳೀಯರಾದ ಬಿ.ಜಿ.ನಾಗರಾಜ ಗಾಣಿಗ ಮೊದಲಾದವರೂ ಉಪಸ್ಥಿತರಿದ್ದರು.

