ಕರಾವಳಿ

ಲಿಂಕ್ ಸಂಸ್ಥೆಯ ವತಿಯಿಂದ ಡಾ.ಥಾಮಸ್‌ಗೆ ಅಭಿನಂದನೆ.

Pinterest LinkedIn Tumblr

thomas_link_award_a

ಮಂಗಳೂರು, ನ.13: ಲಿಂಕ್ ಸಂಸ್ಥೆಯ ಹಳೆ ಸದಸ್ಯರಿಂದ ವ್ಯಸನ ನಿರ್ವಹಣೆಯಲ್ಲಿ ಡಾಕ್ಟರೇಟ್ ಗೌರವ ಪಡೆದಿರುವ ಸಾಮಾಜಿಕ ಕಾರ್ಯಕರ್ತ ಮತ್ತು ವ್ಯಸನ ಮುಕ್ತಗೊಳಿಸುವ ತಜ್ಞ ಡಾ.ಟಿ.ಎಸ್.ಥಾಮಸ್‌ರನ್ನು ಅಭಿನಂದಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಲಿಂಕ್‌ನ ಹಳೆ ಸದಸ್ಯರಾದ ವಿವೇಕ್ ವಿನ್ಸೆಂಟ್ ಪಾಯಸ್, ಯೋಗೀಶ್ ಕಲಸಡ್ಕ ಮತ್ತು ಇತರರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಾ.ಟಿ.ಎಸ್.ಥಾಮಸ್‌ರ ಜೊತೆಗಿನ ತಮ್ಮ ಸೇವಾ ಕಾರ್ಯವನ್ನು ಮೆಲುಕು ಹಾಕಿದರು. ದಕ್ಷಿಣ ಕನ್ನಡದಲ್ಲಿ ‘ದಿನಕೂಲಿ ನೌಕರರ ಮದ್ಯಪಾನ ಮತ್ತು ಬಡತನ: ಮೊದಲು ಮತ್ತು ಚಿಕಿತ್ಸೆ ನಂತರ’ ಎಂಬ ವಿಷಯದಲ್ಲಿ ತುಲನಾತ್ಮಕ ಅಧ್ಯಯನ ನಡೆಸಿರುವ ಥಾಮಸ್ ಮದ್ಯಪಾನ ಮತ್ತು ಬಡತನ ಹಾಗೂ ವ್ಯಸನಮುಕ್ತ ಮತ್ತು ಅಭಿವೃದ್ಧಿಯ ನಡುವಿನ ‘ಲಿಂಕ್’ ಬಗ್ಗೆ ಸಾಬೀತುಪಡಿಸಿದ್ದಾರೆ.

ಮಂಗಳೂರಿನ ಸ್ವಯಂ ಸೇವಾ ಸಂಸ್ಥೆ ಜೀವನದಿ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಅಧ್ಯ ಯನ ನಡೆಸಲಾಗಿದ್ದು, ಮೇಘಾಲಯ ಶಿಲ್ಲಾಂಗ್‌ನ ಮಾರ್ಟಿನ್ ಲೂಥರ್ ಕ್ರಿಸ್ಟಿಯನ್ ಯುನಿವರ್ಸಿಟಿ (ಎಂಎಲ್‌ಸಿಯು)ಯಿಂದ ಇತ್ತೀಚೆಗೆ ಥಾಮಸ್‌ರ ಅಧ್ಯಯನ ಪ್ರಬಂಧಕ್ಕಾಗಿ ಪಿ‌ಎಚ್‌ಡಿ ಪದವಿ ನೀಡಿ ಗೌರವಿಸಲಾಯಿತು.

1992ರಲ್ಲಿ ವ್ಯಸನಮುಕ್ತ ತಜ್ಞರಾಗಿ ತಮ್ಮ ವೃತ್ತಿಯನ್ನು ಆರಂಭಿಸಿರುವ ಟಿ.ಎಸ್. ಥಾಮಸ್, ನೂರಾರು ಸಂಖ್ಯೆಯಲ್ಲಿ ಮದ್ಯಪಾನ ಹಾಗೂ ಮಾದಕದ್ರವ್ಯ ವ್ಯಸನಿಗಳನ್ನು ಆ ಚಟದಿಂದ ಮುಕ್ತಗೊಳಿಸಿ, ಚಿಕಿತ್ಸೆ ಒದಗಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1991ರಲ್ಲಿ ಮಾದಕ ವ್ಯಸನಮುಕ್ತ ಚಳವಳಿಯನ್ನು ಮಂಗಳೂರಿನಲ್ಲಿ ಥಾಮಸ್ ಆರಂಭಿಸಿದ್ದು, 1992ರಲ್ಲಿ ಅದು ಚಾರಿಟೇಬಲ್ ಸೊಸೈಟಿಯಾಗಿ ನೋಂದಣಿ ಗೊಂಡಿತು.

Write A Comment