ಕರಾವಳಿ

ಯೆನೆಪೊಯ ಫೌಂಡೇಶನ್‌ನಿಂದ 14 ಶಿಕ್ಷಣ ಸಂಸ್ಥೆ, 305 ವಿದ್ಯಾರ್ಥಿಗಳಿಗೆ ಪುರಸ್ಕಾರ

Pinterest LinkedIn Tumblr

Yenopoya_colg_sanman

ಮಂಗಳೂರು, ನ.12: ಅಲ್ಪ ಸಂಖ್ಯಾ ತರು ಸರಕಾರದ ಮೀಸಲಾತಿ ಸೌಲಭ್ಯ ಸಮರ್ಥವಾಗಿ ಬಳಸಿಕೊಂಡು ಸಮಾ ಜದ ಮುಖ್ಯವಾಹಿನಿಗೆ ಬರಬೇಕು ಎಂದು ರಾಜ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರ ಕರೆ ನೀಡಿದ್ದಾರೆ.

ಅವರು ಮಂಗಳವಾರ ಯೆನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಘಟಕವಾದ ಯೆನೆಪೊಯ ಫೌಂಡೇಶನ್ ಹಾಗೂ ಯೆನೆಪೊಯ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೆನೆಪೊಯ ವಿವಿಯ ಒಳಾಂಗಣ ಕ್ರೀಡಾಂಗಣ ‘ಯೆನ್‌ಡ್ಯೂರೆನ್ಸ್’ನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದ್ದೇಶಿಸಿ ಮಾತನಾಡುತ್ತಿದ್ದರು.

ಸರಕಾರ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಸೌಲಭ್ಯ ನೀಡಿದರೂ ಈ ಕೋಟಾ ಭರ್ತಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ಅಲ್ಪ ಸಂಖ್ಯಾತರು ಶಿಕ್ಷಣದ ಬಗ್ಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಶಿಕ್ಷಣದ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಬೇಕು ಎಂದು ಜಯಚಂದ್ರ ತಿಳಿಸಿದರು.
ಯೆನೆಪೊಯ ವಿಶ್ವವಿದ್ಯಾನಿಲಯ ಬಡ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸೀಟ್ ನೀಡುವುದರ ಜತೆಗೆ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಹೊಣೆಗಾರಿಕೆ ಯನ್ನು ಸಮರ್ಥವಾಗಿ ನಿಭಾಯಿ ಸುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಪಂ ಸಿಇಒ ತುಳಸಿ ಮದ್ದಿನೇನಿ, ವೌಲಾನಾ ಅಬುಲ್ ಕಲಾಂ ಆಝಾದ್ ಶಿಕ್ಷಣದ ಬಗ್ಗೆ ವಹಿಸಿರುವ ಕಾಳಜಿಯು ಮಾದರಿ ಯಾಗಿದೆ. ಆ ದಾರಿಯಲ್ಲಿ ನಾವು ಸಾಗ ಬೇಕಾಗಿದೆ ಎಂದರು. ಸಮಾರಂಭದಲ್ಲಿ ಎಸೆಸೆಲ್ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 305 ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ 100 ಶೇ. ಫಲಿತಾಂಶ ದಾಖಲಿಸಿದ 14 ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.

2014-15ನೆ ಸಾಲಿನಲ್ಲಿ ಯೆನೆಪೊಯ ವಿವಿ 5 ವೈದ್ಯಕೀಯ, 5 ದಂತ ವೈದ್ಯಕೀಯ, 5 ನರ್ಸಿಂಗ್ ಮತ್ತು 5 ಫಿಸಿಯೋಥೆರಪಿ ಕೋರ್ಸ್ ಗಳಿಗೆ ಮೆರಿಟ್ ಆಧಾರದಲ್ಲಿ ಆಯ್ಕೆ ಯಾದ ವಿದ್ಯಾರ್ಥಿಗಳ ಅಂದಾಜು 2.50 ಕೋ.ರೂ. ವೆಚ್ಚವನ್ನು ಯೆನೆಪೊಯ ವಿಶ್ವವಿದ್ಯಾನಿಲಯ ಭರಿಸಿದೆ. ಉಚಿತ ಸೀಟುಗಳಿಗೆ ಆಯ್ಕೆ ಯಾದ ವಿದ್ಯಾರ್ಥಿ ಗಳನ್ನು ವಿವಿಯ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಹಾಗೂ ಉಪ ಕುಲಪತಿ ಡಾ.ಪಿ.ಚಂದ್ರಮೋಹನ್ ಗೌರವಿಸಿದರು.

ಯೆನೆಪೊಯ ಫೌಂಡೇಶನ್‌ನ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪ್ರೊ.ಪಿ.ಸಿ.ಎಂ.ಕುಂಞಿ, ಫರ್ಹಾದ್ ಯೆನೆಪೊಯ, ವೈ.ಮುಹಮ್ಮದ್ ಖುರ್ಷಿದ್, ಕೆ.ಖಾಲಿದ್ ಬಾವ, ವೈ.ಅಬ್ದುಲ್ ಜಾವೇದ್, ವೈ.ಮೊಯ್ದಿನ್, ವೈ.ಮೊಯ್ದಿನ್ ರಿಝ್ವಿನ್ ಮೊದಲಾ ದವರು ಉಪಸ್ಥಿತರಿದ್ದರು.

ಟ್ರಸ್ಟಿ ಡಾ.ಸಿ.ಪಿ.ಹಬೀಬ್ ರಹ್ಮಾನ್ ಸ್ವಾಗತಿಸಿದರು. ಕುಲಸಚಿವ ಡಾ.ಸಿ.ವಿ.ರಘುವೀರ್ ವಂದಿಸಿದರು. ಡಾ.ಮಲ್ಲಿಕಾ ಶೆಟ್ಟಿ, ಡಾ.ರೌಚೆಲ್ಲಿ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.

Write A Comment