ಕರಾವಳಿ

ಕಂಡ್ಲೂರು: ಕಬಡ್ಡಿ ಪಂದ್ಯಾಟದ ವೇಳೆ ಹೊಡೆದಾಟ, ನಾಲ್ವರು ಆಸ್ಪತ್ರೆಗೆ, ಹತ್ತಕ್ಕೂ ಹೆಚ್ಚು ಜನರ ಮೇಲೆ ಕೇಸು ದಾಖಲು, ಬಿಗು ಪೊಲೀಸ್ ಬಂದೋಬಸ್ತ್

Pinterest LinkedIn Tumblr

ಕುಂದಾಪುರ :  ಕಬ್ಬಡಿ ಪಂದ್ಯಾಟದ ವೇಳೆ ಅಂಕದ ವಿಚಾರದಲ್ಲಿ ಎರಡು ತಂಡಗಳ ನಡುವೆ ಘರ್ಷಣೆ ನಡೆದಿದ್ದು ಈ ವೇಳೆ ಎಬಿವಿಪಿ ಕಾರ್ಯಕರ್ತನೋರ್ವನನ್ನು ಸೇರಿದಂತೆ ತಂಡದಲ್ಲಿದ್ದ ಇನಿಬ್ಬರನ್ನು ಇನ್ನೊಂದು ಕೋಮಿನ ಜನರು ಥಳಿಸಿದ ಘಟನೆ ಕುಂದಾಪುರದ ಕಂಡ್ಲೂರಿನಲ್ಲಿ ಭಾನುವಾರ ನಡೆದಿದೆ.

ಕಂಡ್ಲೂರಿನ ರಾಮಮಂದಿರದ ಸಮೀಪ ಕಬ್ಬಡಿ ಪಂದ್ಯಾಟಾವನ್ನು ಆಯೋಜಿಸಿದ್ದು 2 ನೇ ಪಂದ್ಯಾಟದ ವೇಳೆ ಕಂಡ್ಲೂರಿನ ಅನುಗ್ರಹ ತಂಡ ಹಾಗೂ ಕಂಡ್ಲೂರು ಫ್ರೆಂಡ್ಸ್ ನಡುವೆ ಪಂದ್ಯಾಟ ನಡೆಯುತ್ತಿತ್ತು. ಈ ವೇಳೆ ಅನುಗ್ರಹ ಫ್ರೆಂಡ್ಸ್ ತಂದವು 28 ಫಾಯಿಂಟ್ಸ್ ಹಾಗೂ ಕಂಡ್ಲೂರು ಫ್ರೆಂಡ್ಸ್ 9 ಪಾಯಿಂಟ್ಸ್ ಪಡೆದಿದ್ದು ಕಂಡ್ಲೂರು ಫ್ರೆಂಡ್ಸ್ ಆಟಗಾರರು ಎದುರಾಳಿ ತಂಡದ ಮೇಲೆ ಮುಗಿಬಿದಿದ್ದಾರೆ ಎನ್ನಲಾಗಿದೆ.

ABVP_Sachin_Assult

ಕೊನೆಯ ರೈಡ್ ಮಾಡಲು ಹೋದ ಅನುಗ್ರಹ ತಂಡದ ಆಟಗಾರ ಹಾಗೂ ಎಬಿವಿಪಿ ಕಾರ್ಯಕರ್ತರಾದ ಸಚಿನ್ (21) ಎನ್ನುವವರ ಮೇಲೆ ಹಿಗಾಮುಗ್ಗಾ ಥಳಿಸಿ ದಾಳಿ ಮಾಡಿದ್ದು ಈ ವೇಳೆ ತಪ್ಪಿಸಲು ಬಂದ ಅನುಗ್ರಹ ತಂಡದ ಕಿರಣ (31) ಹಾಗೂ ಲವ (27) ಎನ್ನುವವರಿಗೂ ಹಿಗಾಮುಗ್ಗಾ ಥಳಿಸಿದ್ದು ಮಾತ್ರವಲ್ಲದೇ ಈ ವೇಳೆ ಅಲ್ಲಿ ನೆರೆದಿದ್ದ ಇನ್ನೊಂದು ಕೋಮಿನ 50 ಕ್ಕೂ ಅಧಿಕ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ಆರೋಪಿಸಲಾಗಿದೆ.

ಆರೋಪಿಗಳನ್ನು ಶಾಹಿದ್ ಕರಣಿ, ಜಫ್ರಿದ್, ಸದಕರ್, ಮುಝರಕರನ್, ಬಿಲಾಲ್, ಸರ್ಫರಾಜ್, ಜಾವಿದ್, ನಿಸಾರ್ ಎನ್ನಲಾಗಿದ್ದು ಆರೋಪಿಗಳ ವಿರುದ್ದ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸದ್ಯ ಗಾಯಳುಗಳು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.,ಕಂಡ್ಲೂರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾವಹಿಸಿದ್ದಾರೆ.

Write A Comment