ಕರಾವಳಿ

ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿಗೆ 2 ವರ್ಷ ಸಜೆ, 5 ಸಾವಿರ ದಂಡ

Pinterest LinkedIn Tumblr

Abdul_ajij_jail

ಉಡುಪಿ: ಮಾಹಿತಿ ನೀಡದೆಗ್ಯಾರೇಜ್ ಉಪಕರಣ ಕದ್ದೊಯ್ದನೆಂಬ ಕಾರಣದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ 2 ವರ್ಷ ಸಜೆ ಹಾಗೂ 5 ಸಾವಿರ ದಂಡ ವಿಧಿಸಿದೆ.

ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಗಾಂಧಿ ಮೈದಾನದ ನ್ಯಾಷನಲ್ ಡಿಸೆಲ್ ಸರ್ವಿಸ್ ಗ್ಯಾರೇಜಿನ ಬಳಿ ರೋಯಲ್ ಮಸ್ಕರೇನಸ್ ಅವರಿಗೆ ಶಿಕ್ಷೆಗೆ ಒಳಗಾದ ಅಶೋಕ ಅವರು ಗ್ಯಾರೇಜ್ ಉಪಕರಣವನ್ನು ಹೇಳದೆ ಕದ್ದು ಕೊಂಡು ಹೋಗಿದ್ದಾನೆಂಬ ಕಾರಣದಿಂದ ಕೆನ್ನೆಗೆ ಕೈಯಿಂದ ಹೊಡೆದು ತೀವ್ರ ತರದ ಗಾಯವನ್ನುಂಟು ಉಂಟುಮಾಡಿದ್ದರು. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತರು ಹಲ್ಲೆ ಮಾಡಿದ್ದು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶೆ ವಿ.ಎನ್. ಮಿಲನ ರವರು ಆರೋಪಿಗೆ 2 ವರ್ಷಗಳ ಕಠಿಣ ಸಜೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿ, ದಂಡದ ಮೊತ್ತವನ್ನು ಗಾಯಾಳು ರೋಯಲ್ ಮಸ್ಕರೇನಸ್ ರವರಿಗೆ ನೀಡುವಂತೆ ನವೆಂಬರ್ 7  ರಂದು ತೀರ್ಪು ಹೊರಡಿಸಲಾಗಿದೆ.

ಸರ್ಕಾರದ ಪರವಾಗಿ ಹಿಂದಿನ ಸಹಾಯಕ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರು ಮಮ್ತಾಜ್ ರವರು ವಾದ ಮಂಡಿಸಿದ್ದರು.

Write A Comment