ಮಂಗಳೂರು, ನ.2: ದೌರ್ಜನ್ಯ ಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಚಿಕಿತ್ಸಾ ವ್ಯವಸ್ಥೆ, ಪೊಲೀಸ್ ಹಾಗೂ ಕಾನೂನು ನೆರವು, ಸಮಾಲೋಚನೆ ಯನ್ನೊಳಗೊಂಡ ಸೌಲಭ್ಯಗಳನ್ನು ಒದಗಿಸುವ ಮಹಿಳಾ ವಿಶೇಷ ಚಿಕಿತ್ಸಾ ಘಟಕವನ್ನು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮಾನವ ಸಂಬಂಧಿ ದೌರ್ಜನ್ಯಕ್ಕೊಳಗಾದ ಬಾಲಕಿಯರು ಅಥವಾ ಮಹಿಳೆಯರು ಈ ವಿಶೇಷ ಚಿಕಿತ್ಸಾ ಘಟಕದ ಪ್ರಯೋಜನ ಪಡೆಯಬಹುದು ಎಂದರು. ಮಹಿಳಾ ವಿಶೇಷ ಘಟಕಕ್ಕೆ ಓರ್ವ ಸಮಾಲೋಚಕರು, ಇಬ್ಬರು ಕಾನೂನು ಸಲಹೆಗಾರರು, ಮೂವರು ಸಮಾಜ ಸೇವಾ ಕಾರ್ಯಕರ್ತರು, ಇಬ್ಬರು ವೈದ್ಯಾ ಧಿಕಾರಿಗಳು, ನಾಲ್ವರು ದಾದಿಯರು ಹಾಗೂ ಸ್ಥಳೀಯ ಪೊಲೀಸ್ ಠಾಣೆಯಿಂದ ಓರ್ವ ಮಹಿಳಾ ಪೊಲೀಸ್ ಅಧಿಕಾರಿಯನ್ನು ನಿಯೋ ಜನೆ ಮಾಡಲಾಗುತ್ತಿದೆ ಎಂದು ಸಚಿವ ರೈ ತಿಳಿಸಿದರು.
ಮಹಿಳೆಯರ ಮೇಲಿನ ಯಾವುದೇ ರೀತಿಯ ದೌರ್ಜನ್ಯಕ್ಕೆ ಸಂಬಂಧಿಸಿ ಉಚಿತ ಸಹಾಯವಾಣಿ 181ಕ್ಕೆ ಕರೆ ಮಾಡುವ ಮೂಲಕ ಈ ವಿಶೇಷ ಚಿಕಿತ್ಸಾ ಘಟಕದ ಪ್ರಯೋಜನ ಪಡೆಯಬಹುದು. ನೊಂದ ಮಹಿಳೆಯರಿಗೆ ವೈದ್ಯ ಕೀಯ ಚಿಕಿತ್ಸೆ, ಪರೀಕ್ಷೆಯನ್ನು ನಡೆಸ ಲಾಗುವುದು. ಪ್ರಥಮ ಮಾಹಿತಿ ವರದಿ ದಾಖಲಿಸಿ ಕಾನೂನು ರಕ್ಷಣೆಯನ್ನು ಒದಗಿ ಸಲಾಗುವುದು. ಸರಕಾರೇತರ ಸಂಸ್ಥೆಯಿಂದ ನೇಮಿಸಲ್ಪಟ್ಟ ಸಮಾಲೋಚಕರಿಂದ ಮಾನಸಿಕ ಸಮಾಲೋಚನೆ ನಡೆಸಲಾಗುವುದು.
ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಸಮಾಲೋಚನೆ ಒದಗಿ ಸಲಾಗುವುದು. ವಸತಿ ಮತ್ತು ಸುರಕ್ಷಿತ ವಾಸ್ತವ್ಯವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ಞಾ ಅಲ್ಪಾವಧಿ ವಸತಿ ಗೃಹ ಮತ್ತು ಸ್ವಾಧಾರ ಕೇಂದ್ರದ ಮೂಲಕ ಒದಗಿಸಲಾಗುವುದು.
ಈ ಸಂದರ್ಭ ಶಾಸಕ ಬಿ.ಎ.ಮೊಯ್ದಿನ್ ಬಾವ, ಜಿಲ್ಲಾ ಧಿಕಾರಿ ಎ.ಬಿ.ಇಬ್ರಾಹೀಂ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಲಾಖೆಯ ಉಪ ನಿರ್ದೇಶಕಿ ಗರ್ಟ್ರೂಡ್ ವೇಗಸ್, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ. ಶಕುಂತಳಾ, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮೊದಲಾದರು ಉಪಸ್ಥಿತರಿದ್ದರು.