ಕರಾವಳಿ

ಪಿ‌ಎಫ್‌ಐ ಕಲ್ಲಡ್ಕ ವತಿಯಿಂದ ಮ್ಯಾರಥಾನ್ ಓಟ

Pinterest LinkedIn Tumblr

kaldka_marathonb_rally_1

ಕಲ್ಲಡ್ಕ,ಆ.29 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡಿರುವ “ಜನಾರೋಗ್ಯವೇ ರಾಷ್ಟ್ರಶಕ್ತಿ” ರಾಷ್ಟ್ರೀಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಲ್ಲಡ್ಕ ಡಿವಿಶನ್ ವತಿಯಿಂದ ಮ್ಯಾರಥಾನ್ ರ್‍ಯಾಲಿ ಹಾಗೂ ಯೋಗ ಪ್ರದರ್ಶನ ಮಾಣಿಯಲ್ಲಿ ನಡೆಯಿತು.

kaldka_marathonb_rally_2

ನೇರಳಕಟ್ಟೆಯಿಂದ ಮಾಣಿಯ ಗಾಂಧಿ ಮೈದಾನದವರೆಗೆ ನಡೆದ ಮ್ಯಾರಥಾನ್ ರ್‍ಯಾಲಿಗೆ ಪಿ ಎಫೈ ರಾಜ್ಯ ಸಮಿತಿ ಸದಸ್ಯರಾದ ಶರೀಫ್ ಒಡಾಜೆ ಚಾಲನೆ ನೀಡಿದರು. ರ್‍ಯಾಲಿಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಕ್ರಿಯೇಟಿವ್ ಫೌಂಡೇಶನ್‌ನ ಸಂಚಾಲಕರಾದ ಅನ್ವರ್ ಸಾದಾತ್ ಮಾತನಾಡುತ್ತಾ ನಮ್ಮ ದೇಶದ ಜನ ಸಾಮಾನ್ಯರಲ್ಲಿ ಅರೋಗ್ಯದ ಬಗ್ಗೆ ಕಾಳಜಿ ಇಲ್ಲವಾಗಿದೆ, ಇಂದು ಮಾರುಕಟ್ಟೆಯಲ್ಲಿ ದೊರಕುವ ದಿನ ಬಳಕೆಯ ಆಹಾರ ಸಾಮಾಗ್ರಿಗಳು ರಾಸಾಯನಿಕ ಮಿಶ್ರಿತಗೊಂಡಿರುತ್ತದೆ, ಈ ಬಗ್ಗೆ ನಾವು ಎಚ್ಚರಗೊಳ್ಳದಿದ್ದರೆ ನಾವೇ ದುಡ್ಡುಕೊಟ್ಟು ರೋಗಗಳನ್ನು ಖರೀದಿಸಿದಂತೆ ಎಂದರು. ಆಯುರ್ವೇದ, ನಾಟಿ ಔಷಧಿಗಳಲ್ಲಿ ಸಿಗುವ ಆರೋಗ್ಯ ಇಂದಿನ ಔಷಧಿಗಳಲ್ಲಿ ದೊರಕುತ್ತಿಲ್ಲ, ದೇಶದ ಜನರು ಇಂದು ಹೆಚ್ಚಾಗಿ ಅನಾರೋಗ್ಯಗಳಿಂದ ಬಳಲುತ್ತಿರುವಾಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅವರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

kaldka_marathonb_rally_3 kaldka_marathonb_rally_4

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪಿ ಎಫ್ ಐ ಕಲ್ಲಡ್ಕ ವಲಯಾಧ್ಯಕ್ಷ ಅಬೂಬಕ್ಕರ ಸಿದ್ದೀಕ್ ರವರು ನಾವು ಯೋಗ ಮತ್ತು ವ್ಯಾಯಾಮವನ್ನು ನಿತ್ಯರೂಢಿಸುವ ಮೂಲಕ ಆರೋಗ್ಯವನ್ನು ಕಾಪಾಡಲು ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನಡೆಯಿತು. ಬಂಟ್ವಾಳ ತಾಲೂಕು ಪಿ ಎಫ್ ಐ ಅಧ್ಯಕ್ಷ ಝಕರಿಯಾ ಗೊಳ್ತಮಜಲು, ಎ ಡಿಪಿ ಐ ರಾಜ್ಯ ಸಮಿತಿ ಉಪಾಧ್ಯಕ್ಷ ಹನೀಫ್ ಖಾನ್, ಪಿ ಎಫ್ ಐ ವಿಟ್ಲ ಡಿವಿಶನ್ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಮಾಣಿ ವಲಯ್ ಆಧ್ಯಕ್ಷ ಅಬ್ದುಲ್ ಲತೀಫ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸತ್ತಾ ಅನಂತಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಫಾರೂಕ್ ಡಿ.ಎನ್ ವಂದಿಸಿದರು.

Write A Comment