ಕರಾವಳಿ

ತೆಂಗು ಬೆಳೆಯಲ್ಲಿ ಒಂದು ದಾಪುಗಾಲು : ತೆಂಗು ಅಭಿವೃದ್ದಿ ಮಂಡಳಿ ಸ್ಥಾಪನೆಗೆ ಸಿದ್ದತೆ

Pinterest LinkedIn Tumblr

Neera_Gatak_kali_1

ಮಂಗಳೂರು / ಬಂಟ್ವಾಳ, . 27: ರಾಷ್ಟ್ರದ ತೆಂಗು ಬೆಳೆಯಲ್ಲಿ ಎರಡನೇ ಸ್ಥಾನದಲ್ಲಿ ಇರುವ ಕರ್ನಾಟಕದಲ್ಲಿ ಇದುವರೆಗೆ ಅನುಷ್ಠಾನಕ್ಕೆ ಬಾರದ ತೆಂಗು ಅಭಿವೃದ್ದಿ ಮಂಡಳಿ ಸ್ಥಾಪನೆಗೆ ಪ್ರಯತ್ನಗಳು ನಡೆದಿದೆ.

ತೆಂಗು ಬೆಳೆ ಉತ್ಪಾದನೆಯಲ್ಲಿ ಮತ್ತು ಉಪ ವಸ್ತುಗಳ ಉತ್ಪಾದನೆಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ತೆಂಗು  ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನವಾದರೂ ಉಪವಸ್ತುಗಳ ಉತ್ಪಾದನೆಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಅಥವಾ ತಾಂತ್ರಿಕವಾಗಿ ಸಾಧನೆ ಶೂನ್ಯ ಎಂದರೂ ತಪ್ಪಲ್ಲ. ಇದೇ ಕಾರಣಕ್ಕಾಗಿ  ಅನೇಕ ವರ್ಷಗಳಿಂದ ತೆಂಗಿನ ಕಾಯಿ ನಿರೀಕ್ಷೆಯ ಮಟ್ಟದ ಲಾಭವನ್ನು, ಆದಾಯವನ್ನು ತಂದಿಲ್ಲ ಎಂದರೆ ತಪ್ಪಾಗದು.

Neera_Gatak_kali_2

ಸಂಘಟನೆ ಇಲ್ಲದಿರುವುದು :

ಉತ್ಪಾದನೆಯಲ್ಲಿ ಅಗ್ರಗಣ್ಯನಾದ ಕರ್ನಾಟಕ ಅದನ್ನು ಸದುಪಯೋಗ ಮಾಡಿಕೊಳ್ಳುವ ತಂತ್ರಜ್ಞಾನದಲ್ಲಿ ಹಿಂದೆ ಬೀಳಲು ಮುಖ್ಯ ಕಾರಣ ರೈತಾಪಿ ವರ್ಗದಿಂದ ಸಾಕಷ್ಟು ಬೇಡಿಕೆ ಮತ್ತು ಸಂಘಟನಾತ್ಮಕ ಪ್ರಯತ್ನ ಇಲ್ಲದಿರುವುದು ಕಾರಣ ಎನ್ನಲಾಗಿದೆ.

ಇದೀಗ ಅಂತಹ ಒಂದು ಪ್ರಯತ್ನಕ್ಕೆ ಚಾಲನೆ ದೊರೆತಿದೆ. ರಾಜ್ಯ ತೆಂಗು ಉತ್ಪಾದನೆ ಮಂಡಳಿ ತಾಂತ್ರಿಕ ನಿರ್ದೇಶಕಿ ಸಿಮಿ ಅವರು ಬಂಟ್ವಾಳದ ತುಂಬೆ ತೋಟಗಾರಿಕಾ ಕೇಂದ್ರಕ್ಕೆ ಬಂದು ಒಂದು ವಾರದ ವಾಸ್ತವ್ಯದ ಮೂಲಕ ತೆಂಗು ಬೆಳೆಗಾರರಲ್ಲಿ ಆತ್ಮ ವಿಶ್ವಾಸ ತುಂಬಿಸುವ ಕೆಲಸ ಆಗಬೇಕು  ಎಂದಿದ್ದಾರೆ.

ರೈತಾಪಿ ವರ್ಗಕ್ಕೆ ಮಂಡಳಿಯಿಂದ ಸಿಗುವ ಅನೇಕ ವಿಚಾರಗಳನ್ನು ಅವರು ಪಟ್ಟಿ ಮಾಡಿದ್ದು ಅದನ್ನು ಬಳಸಿಕೊಳ್ಳುವಲ್ಲಿ ಜನ ಸಾಮಾನ್ಯರು, ಚಿಕ್ಕ ರೈತರು ಮುಂದೆ ಬರಬೇಕು ಎನ್ನುವ ಒಟ್ಟಾಭಿಪ್ರಾಯ ನೀಡುತ್ತಾರೆ.

Neera_Gatak_kali_3

ಸವಲತ್ತುಗಳು:

ಕನಿಷ್ಟ ಹತ್ತು ಫಲ ನೀಡುವ ತೆಂಗಿನ ಮರಗಳು ಇರುವಂತಹ ರೈತರು ಕೂಡಾ ಇದರ ಸದುಪಯೋಗ ಪಡೆಯಬಹುದು.

ಮರಕ್ಕೆ ಏರುವ ಯಂತ್ರಕ್ಕೆ ಸಹಾಯಧನ / ಮರಕ್ಕೆ ನೀಡಬೇಕಾದ ಗೊಬ್ಬರಕ್ಕೆ ಸಹಾಯಧನ / ತೆಂಗಿನ ಗೆರೆಟೆ, ಸಿಪ್ಪೆ, ನೀರು, ತಿರುಳು ಇದರ ವಿವಿಧ ಪುನರಪಿ ಪರಿವರ್ತನೆ ಮೂಲಕ ಹೆಚ್ಚಿನ ಲಾಭ ಮಾಡಿಕೊಳ್ಳುವ ತಂತ್ರಜ್ಞಾನದ ಒದಗಣೆ. / ತೆಂಗಿನ ತಿರುಳಿನಿಂದ ಎಣ್ಣೆ ತೆಗೆಯುವ ಕಿರು ಉದ್ಯಮ, ಅದರ ಉಳಿಕೆಯನ್ನು ಮರು ವಿಂಗಡಿಸಿ ಬಳಕೆ./ ತೆಂಗಿನ ತಿರುಳಿನ ಪೌಡರ್, ಚಿಪ್ಸ್ ಉಪ ಉತ್ಪನ್ನಗಳು.

ತೆಂಗಿನ ಹೊಂಬಾಳೆಯಿಂದ ನೀರಾ ಇಳಿಸುವುದುನೀರಾದಿಂದ ಸಾಪ್ಟ್ಡ್ರಿಂಕ್ಸ್, ಬೆಲ್ಲ, ಸಕ್ಕರೆ, ಜೇನು ಇತ್ಯಾದಿ ಆಹಾರ ವಸ್ತುಗಳು ಈಗಾಗಲೇ ಉತ್ಪಾದನೆಯಲ್ಲಿ ಬಂದಿದೆಆದರೆ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಬೇಡಿಕೆಯನ್ನು ಕುದುರಿಸುವ, ಪೂರೈಸುವ ಮಟ್ಟದಲ್ಲಿ ಬೆಳೆದಿಲ್ಲ.

ಕಲ್ಪರಸ(ನೀರಾ)

ಕಲ್ಪರಸ ಅಭಿದಾನದ ತೆಂಗಿನ ಮರದ ದ್ರವೋತ್ಪನ್ನ. ನೀರಾ ತಂಪು ಪಾನೀಯವು ಎಳನೀರಿನಷ್ಟೆ ಶುದ್ದ. ರಾಷ್ಟ್ರಮಟ್ಟದಲ್ಲಿಯೇ ಅತ್ಯಂತ ಆಧುನಿಕ ಪ್ರಥಮ ಘಟಕ. ಬಂಟ್ವಾಳ ತಾಲೂಕು ತುಂಬೆ ತೋಟಗಾರಿಕಾ ಕ್ಷೇತ್ರದಲ್ಲಿ  2011-12ಸಾಲಿನಲ್ಲಿ  ಅಳವಡಿಕೆಯಾಗಿದೆ.

ಸುದೀರ್ಘ ಎರಡು ವರ್ಷಗಳ ಅವಽಯಲ್ಲಿ ನಿರ್ವಾಹಣೆ ವಿಚಾರದ ತಾಂತ್ರಿಕ ಅಡಚಣೆ ಬಳಿಕ ಪಾಲಕ್ಕಾಡ್ ತೆಂಗು ಅಭಿವೃದ್ದಿ ಮಂಡಲಿ ಮೂಲಕ ಚಾಲನೆ ದೊರಕಿದೆ. ನೀರಾ ತಂಪು ಪಾನೀಯ ಪ್ಯಾಕೆಟ್ ಮಾದರಿಯಲ್ಲಿ ಮಂಗಳೂರು ಹಾಪಕಾಮ್ ಘಟಕ್ಕೆ ರವಾನಿಸಲಾಗಿದೆ

Neera_Gatak_kali_4

ಅಪಾರ ಅವಶಕಾಶ

ನೀರಾಕ್ಕೆ ಅಂತರಾಷ್ಟ್ರೀಯ ಬೇಡಿಕೆ ಈಗಾಗಲೇ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನೀರಾ ಪಾನೀಯವನ್ನು ಜನಪ್ರಿಯಗೊಳಿಸಿದ ಕೀರ್ತಿ ಶ್ರೀಲಂಕಾಗೆ ಸಲ್ಲುತ್ತದೆ. ಕೇರಳದ ಪಾಲಕ್ಕಾಡ್ ತೆಂಗು ಅಭಿವೃದ್ದಿ ಮಂಡಳಿ ಕೇರಳ ರಾಜ್ಯದಲ್ಲಿ ಇದನ್ನು ಜನಪ್ರಿಯಗೊಳಿಸುತ್ತಿದೆ.

ಜಂಟಿ ನಿರ್ವಹಣೆ

ತೋಟಗಾರಿಕಾ ಇಲಾಖೆ, ತೆಂಗು ಅಭಿವೃದ್ದಿ ಮಂಡಳಿ, ಪಾಲಕ್ಕಾಡ್ ತೆಂಗು ಉತ್ಪಾದಕರ ಕಂಪೆನಿ ಜಂಟಿಯಾಗಿ ಘಟಕ ನಿರ್ವಹಣೆಗೆ ಒಪ್ಪಂದ ಏರ್ಪಟ್ಟಿದ್ದರೂ. ಮೂರ್ತೆದಾರರ ಮಹಾಮಂಡಲದ ಮಾರುಕಟ್ಟೆ  ಒಪ್ಪಿಗೆಪತ್ರ ಪಡೆಯುವ ಮೂಲಕ ಸಾರ್ವಜನಿಕ ವಿತರಣೆಗೆ ಇದೀಗ ಸಜ್ಜುಗೊಂಡಿದೆ.

ಸಾವಿರ ಲೀ. ಸಾಮಾರ್ಥ್ಯ

ಘಟಕವು ದಿನಕ್ಕೆ ಗರಿಷ್ಟ ಎರಡು ಸಾವಿರ ಲೀಟರ್ ಸಂಗ್ರಹ ಮತ್ತು ಸಂಸ್ಕರಣೆ  ಸಾಮರ್ಥ್ಯ ಹೊಂದಿದೆ. ಕನಿಷ್ಟ ನೂರು ಮಂದಿ ನೀರಾ ಮೂರ್ತೆದಾರರು, ಅಷ್ಟೆ ಸಂಖ್ಯೆಯ ಸಹಾಯಕರು, ಸಂಸ್ಕರಣೆ, ಮಾರಾಟ ಮತ್ತು ವಿತರಣೆಗೆ ಸುಮಾರು ಐವತ್ತು ಮಂದಿ ಸಿಬಂದಿಗಳ ಅವಶ್ಯಕತೆ ಇದೆ.

ಕನಿಷ್ಟ 800 ತೆಂಗಿನ ಗಿಡಗಳು ಲಭ್ಯವಿರಬೇಕು. ಒಂದು ಗಿಡದಿಂದ ಸರಾಸರಿಲೀಟರ್ ದ್ರವ ದೊರೆಯುವುದು. ವರ್ಷ ಪೂರ್ತಿ ಕೆಲಸ ಲಭ್ಯವಿದೆ. ಒಟ್ಟಾರೆ ಘಟಕವು ಪ್ರಸ್ತುತ ಸ್ಥಿತಿಯಲ್ಲಿ  ಕನಿಷ್ಟ ಮೂರುನೂರು ವ್ಯಕ್ತಿಗಳಿಗೆ ಉದ್ಯೋಗ ಪೂರಕವಾಗಲಿದೆ.

Neera_Gatak_kali_6

ಪ್ರಾಯೋಗಿಕ ಘಟಕ 

ಇದೊಂದು ಪ್ರಥಮ ಪ್ರಾಯೋಗಿಕ ಘಟಕ. ಇನ್ನಷ್ಟು ಸುಧಾರಣೆಯ ಬಳಿಕ ಗ್ರಾಮಾಂತರ ತೆಂಗು ಕೃಷಿಕರಿಗೆ ವರದಾನ ಆಗಲಿದೆ.ಕೃಷಿ ಉದ್ಯಮದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಪೂರಕವಾಗಿ ಬೆಳೆಯಲಿದೆ. ಖಾಸಗಿ ಕ್ಷೇತ್ರದಲ್ಲಿ ಹಲವು ಕಿರು ಪ್ರಯತ್ನಗಳು ನಡೆದಿದೆ.

ಸರಕಾರಿ ಯೋಜನೆ : 1 ಕೋಟಿ ಅನುದಾನ

ತೆಂಗಿನ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ ನಿಕಟಪೂರ್ವ ಸರಕಾರದ ಮಹತ್ವಕಾಂಕ್ಷಿ ಯೋಜನೆ. ನೂತನ ಘಟಕ ಯಂತ್ರೋಪಕರಣಗಳ ಅಳವಡಿಕೆ ಆಗಿದೆ.2011-12 ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಒಂದು ಕೋಟಿ ರೂ. ಅನುದಾನವು ಇದಕ್ಕೆ ಬಿಡುಗಡೆ ಆಗಿತ್ತು. ಇನ್ನೂ ಒಂದು ಕೋಟಿ ರೂ. ಹೆಚ್ಚುವರಿ ಅನುದಾನ ಒದಗಣೆ ಭರವಸೆ ಇಲಾಖೆಯಿಂದ ಬಂದಿದ್ದಾಗಿ ಸಹಾಯಕ ನಿರ್ದೇಶಕರು ಹೇಳುತ್ತಾರೆ.

ತುಂಬೆಯಲ್ಲಿ ನಾಲ್ಕು ಸಹಸ್ರ ಚದರ ಅಡಿಯಲ್ಲಿ  80 ಲಕ್ಷ ವೆಚ್ಚದಲ್ಲಿ ಘಟಕ ಯಂತ್ರೋಪಕರಣಗಳ ಅಳವಡಿಕೆ ಆಗಿದೆ.ದಿನವೊಂದಕ್ಕೆ ಎರಡು  ಸಾವಿರ ಲೀಟರ್ ನೀರಾ ತಯಾರಿಸುವ ಸಾಮರ್ಥ್ಯ ಹೊಂದಿದೆ.

Neera_Gatak_kali_5

ಸಂಚಲನ ಮೂಡಿಸಲಿದೆ 

ನೀರಾ ಉತ್ಪಾದನೆಯಾದಾಗ ಸಾಪ್ಟ್ ಡ್ರಿಂಕ್ಸ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂಬ ಅಭಿಪ್ರಾಯವಿದೆ.

ಕಲಬೆರಕೆ ಅಸಾಧ್ಯ

ತೆಂಗಿನ ಹೊಂಬಾಳೆಯಿಂದ ಒಸರುವ ದ್ರವವೇ ನೀರಾ, ಅಮಲು ರಹಿತ, ಕಲಬೆರಕೆ ಅಸಾಧ್ಯವಾದ, ಆಹ್ಲಾದಭರಿತ ಸ್ವಾದಿಷ್ಟ ರುಚಿ. ದಣಿದವರ ಬಾಯಾರಿಕೆ ನೀಗಿ, ಉಲ್ಲಾಸ ನೀಡುವ ನೀರಾ ಮುಂದೊಂದು ದಿನ ಸಾಪ್ಟ್ ಡ್ರಿಂಕ್ಸ್ ಕ್ಷೇತ್ರದ ಕಿಂಗ್ ಎಂಬ ಕೀರ್ತಿ ಪಡೆಯಲಿದೆ.

ಹಾಲು ಸಂಗ್ರಹ ಕೇಂದ್ರದಂತೆ ನೀರಾ ಘಟಕವನ್ನು ಆರಂಭಿಸುವುದು ಸುಲಭ. ಕರಾವಳಿ ಜಿಲ್ಲೆ ತೆಂಗಿನ ಮರಗಳ ತೊಟ್ಟಿಲಾಗಿದ್ದು ಅದನ್ನು ಬಳಸಿಕೊಂಡು ನೀರಾ ಉದ್ಯಮವನ್ನು ಇನ್ನಷ್ಟು ಬೆಳೆಸಬಹುದು. ನೀರಾ ಒಂದು ಲೀಟರ್ಗೆ 130 ರೂ. ನಿಗದಿಯಾಗಿದೆ

Neera_Gatak_kali_7

ಕಲ್ಪರಸ

ತೆಂಗಿನ ಮರದ ಹೊಂಬಾಳೆಯಿಂದ ಇಳಿಸುವ ನಿರಾಕ್ಕೆ ಕಲ್ಪರಸ ಎಂದೇ ಅನ್ವರ್ಥನಾಮವಿದೆ. ಘಟಕವು ತೆಂಗು ಅಭಿವೃದ್ದಿ ಮಂಡಳಿಯ ಯೋಜನೆ ಅಡಿಯಲ್ಲಿ ಸ್ಥಾಪಿತವಾಗಿದೆ. ತೆಂಗಿನ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶ ಮತ್ತು ಇದೇ ಮಾದರಿ ಖಾಸಗಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ಯೋಜನೆ ಮಂಡಳಿಯ ದ್ದಾಗಿದೆ.

Neera_Gatak_kali_8

ಪ್ರಾಯೋಗಿಕ ಉತ್ಪಾದನೆ 

ಮೈಸೂರಿನ ಡಿಎಫ್ಆರ್ಎಲ್ ತಾಂತ್ರಿಕ ಸಹಯೋಗದಲ್ಲಿ ನೀರಾ ಪ್ರಾಯೋಗಿಕ ಉತ್ಪಾದನೆ ೨೦೧೨ರಲ್ಲಿ ಯಶಸ್ವಿ ವರದಿಯಾಗಿತ್ತು. ಆದರೆ ಕಾನೂನಿನ ತೊಡಕಿನಿಂದ ಅಽಕೃತ ಕಾರ್ಯಾರಂಭ ವಿಳಂಭವಾಗಿದೆ.

ನೀರಾ ಒಂದು ಪರಿಪೂರ್ಣ ಆರೋಗ್ಯ ವರ್ಧಕ ಆಹಾರ. ಒಂದರ್ಥದಲ್ಲಿ ಔಷಧಯುಕ್ತ. ಅದರಲ್ಲಿ ಶೇ. ೮೫ ನೀರಿನ ಅಂಶ, ಉಳಿದಂತೆ ಸಕ್ಕರೆ, ಪಿಷ್ಟ ಪೌಷ್ಟಿಕ ಅಂಶಗಳಿಂದ ಕೂಡಿದೆ.ಇದೊಂದು ಆಹ್ಲಾದಕರ ಪೇಯ, ಹಿತವಾದ ಪರಿಮಳ, ಸ್ವಾದ ಭರಿತ ರುಚಿಯನ್ನು ಹೊಂದಿದ್ದು ಹೆಚ್ಚಿನ ಪ್ರೊಟೀನ್ ಅಂಶಗಳನ್ನು ಒಳಗೊಂಡಿದೆ.

ನಿರಾವನ್ನು ಯಾವುದೇ ಸಂಸ್ಕರಣೆ ಮಾಡದೆ ನೇರವಾಗಿ ಮಾರಾಟ ಮಾಡಲು ಸಾಧ್ಯವಿದೆ. ಇದಕ್ಕಾಗಿ ಕಾಸರಗೋಡು ಸಿಪಿಸಿಆರ್ ವಿಶೇಷ ಮಾದರಿ ನೀರಾ ಸಂಗ್ರಹ ಸಾಧನವನ್ನು ಅವಿಷ್ಕರಿಸಿದ್ದಾರೆಮಳೆಗಾಲದಲ್ಲಿ ನೀರಾ ಇಳಿಕೆ ಪ್ರಮಾಣ ಹೆಚ್ಚುವುದು. ಬೇಸಿಗೆಯಲ್ಲಿ ಕುಸಿಯುವುದು.

ಒಬ್ಬ  ಮೂರ್ತೆದಾರ ದಿನಕ್ಕೆ ಕನಿಷ್ಟ 30 ಲೀಟರ್ನಿಂದ 50 ಲೀಟರ್ ತನಕ ಇಳಿಸುವುದು ಸಾಧ್ಯ.(ಗುತ್ತಿಗೆ  ಮಜೂರಿ ದಿನಕ್ಕೆ  ೭೫೦೧೦೦೦ ರೂ.) ಒಬ್ಬ ವ್ಯಕ್ತಿ  ದಿನ ಪೂರ್ತಿ ಇಪ್ಪತ್ತು ತೆಂಗಿನ ಮರಗಳ  ನೀರಾ ಇಳಿಕೆ ಕೆಲಸ ಮಾಡಬಹುದು.ನೀರಾದಿಂದ ಬೆಲ್ಲ, ಸಕ್ಕರೆ, ಕ್ಯಾಂಡಿ ಎಂಬ ಉಪ ಉತ್ಪನ್ನಗಳನ್ನು ಮಾಡಬಹುದು.

Neera_Gatak_kali_9

ಮಾರುಕಟ್ಟೆ ಧಾರಣೆ 

ಹಾಲು  ಒಂದು ಲೀಟರ್ ಬೆಲೆ– 28 ರೂ.  / ವಿವಿಧ ಸಾಪ್ಟ್ ಡ್ರಿಂಕ್ಸ್ಗಳ ಒಂದು ಲೀಟರ್ ಬೆಲೆ– 30 ರೂ.ನಿಂದ ಆರಂಭ.ಕೆಲವೊಂದು ಸಾಪ್ಟ್ ಡ್ರಿಂಕ್ಸ್ಗಳು ಆರೋಗ್ಯಕ್ಕೆ ಮಾರಕ, ಒಂದರ್ಥದಲ್ಲಿ ವಿಷವೇ ಎಂಬಂತಿದ್ದರೂ ನಾವು ಅದನ್ನು ಕುಡಿಯುತ್ತೇವೆ.

ನೀರಾ ಶುದ್ಧ, ಆರೋಗ್ಯ ವರ್ಧಕ, ಉಲ್ಲಾಸದಾಯಕ, ಶಕ್ತಿ ನೀಡುವ ದ್ರವ ರೂಪದ ಆಹಾರವಾಗಿದ್ದು ಬೆಲೆ ವಿಷಯವೇ ಅಲ್ಲ ಎಂದೆನಿಸುತ್ತದೆ. ಸಾಪ್ಟ್ ಡ್ರಿಂಕ್ಸ್ಗಳಂತೆ ಇದನ್ನು ಎಲ್ಲಿಗೂ ಒಯ್ಯಬಹುದು, ಬೇಕಾದಾಗ ಕುಡಿಯುಬಹುದು. ಬಾಯಾರಿಕೆ ತಣಿಸಬಹುದು. ಅದಕ್ಕಾಗಿ ನೀರಾವನ್ನು ಸಾಪ್ಟ್ ಡ್ರಿಂಕ್ಸ್ಗಳ ಕಿಂಗ್ ಎಂಬ ನಾಮದಿಂದ ಉಲ್ಲೇಖಿಸಿದ್ದು.

ಘಟಕ ಎಲ್ಲೆಲ್ಲಿದೆ

ಒರಿಸ್ಸಾದಲ್ಲಿ ಖಾಸಗಿ ವ್ಯವಸ್ಥೆ ಅಡಿಯಲ್ಲಿ  2005ರಲ್ಲಿ ನೀರಾ ಘಟಕಕ್ಕೆ ಅನುಮತಿ ದೊರೆತಿದೆ.ತಮಿಳುನಾಡು, ಆಂಧ್ರದಲ್ಲೂ ಖಾಸಗಿ ವ್ಯವಸ್ಥೆ ನಡೆಸುತ್ತದೆ.ಮತ್ತು ಕೇರಳದಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ಘಟಕ ಸ್ಥಾಪಿಸಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸುತ್ತವೆ.

ಪ್ರಯೋಜನ

ನೀರಾ ಘಟಕ ಸರಿಯಾಗಿ ರಾಜ್ಯದಾದ್ಯಂತ ಆರಂಭವಾದರೆ ತೆಂಗಿನಕಾಯಿಗೆ ಇಂದಿನ ಬೆಲೆಯ ಹತ್ತು ಪಟ್ಟು ಉತ್ತಮ ಧಾರಣೆ ಸಿಗಬಹುದು. ಯಶಸ್ವಿ ಅನುಷ್ಠಾನದ ಬಳಿಕ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಲಿದೆ. ತೆಂಗಿನ ಕೃಷಿಗೆ ಬರುವ ನುಸಿ ಪೀಡೆ ಸಂಪೂರ್ಣ ನಿವಾರಣೆ ಆಗುವುದು.ತೆಂಗಿನ ಕಾಯಿಯ ಮಾರುಕಟ್ಟೆ ಧಾರಣೆ ಸ್ಥಿರತೆ ಪಡೆಯುವುದು.

ಅಪಾರ ಪ್ರಮಾಣದಲ್ಲಿ ಕೃಷಿಕರಿಗೆ ಕೆಲಸ, ನೀರಾ ಘಟಕವು ಪೂರಕ ವ್ಯವಸ್ಥೆಯಲ್ಲಿ ಸಹಸ್ರಾರು ಉದ್ಯೋಗ ಸೃಷ್ಟಿ ಆಗಲಿದೆ. ವಿದ್ಯಾವಂತ ಯುವಕರು ಇದರ ಕಡೆಗೆ ಆಕರ್ಷಿತರಾಗಬಹುದು.

ನೀರಾವನ್ನು ತೆಂಗಿನ ಮರದಿಂದ ಮಾತ್ರವಲ್ಲದೆ  ತಾಳೆ, ಭಗಿನಿ, ಈಚಲು ಮರದಿಂದಲೂ ತಯಾರಿಸಬಹುದು. ತಮಿಳ್ನಾಡು ಮತ್ತು ಆಂಧ್ರದಲ್ಲಿ ಭಗಿನಿ ಮತ್ತು ಈಚಲು ಮರದ ನೀರಾವನ್ನು ಇಳಿಸುವ ಕ್ರಮವಿದೆ ಎನ್ನುತ್ತಾರೆ. ಸರಕಾರದ ಕೆಲವೊಂದು ಕಾನೂನುಗಳಿಂದ ಅಲ್ಲಿಯೂ ನೀರಾ ಇಳಿಸುವುದು ತೀರಾ ಕಡಿಮೆಯಾಗಿದೆ ಎಂದಿದ್ದಾರೆ.

ನೀರಾದಲ್ಲಿ ಇರುವಂತಹ ಅಂಶಗಳು :

ಶರ್ಕರ ಪಿಷ್ಟ 98.76ಪ್ರೊಟೀನ್ 0.2,ತೇವಾಂಶ 0.7ಕೊಬ್ಬು      0.04 ಲವಣಾಂಶ  0.3, ಕ್ಯಾಲ್ಸಿಯಂ 58.07, ರಂಜಕ  5.04,  ಕಬ್ಬಿಣ 1.4, ಜೀವಸತ್ವಗಳು 396, ಜೀವಧಾತು ವರ್ಧಕಗಳು 8.2

 

ಉತ್ಪಾದಿಸುವ ದೇಶಗಳು

ಭಾರತ, ಶ್ರೀಲಂಕಾ, ಆಫ್ರಿಕ, ಮಲೇಶಿಯಾ, ತೈಲಾಂಡ್, ಮ್ಯಾನ್ಮರ್ ದೇಶಗಳಲ್ಲಿ ಇದರ ಉತ್ಪಾದನೆ ಮತ್ತು ಬಳಕೆ  ಪರಂಪರಾಗತ ಪದ್ದತಿಯಲ್ಲಿದೆ.

ಮುಂದಿನ ಯೋಜನೆ

ಯೋಜನೆಯಲ್ಲಿ ಸ್ಥಳೀಯ ರೈತರಿಗೆ ಮತ್ತು ನೀರಾ ಇಳಿಸುವವರಿಗೆ (ಮೂರ್ತೆದಾರಿಗೆ) ತರಬೇತಿ. ಇಂತಹ ಘಟಕಗಳ ವಿಸ್ತರಣೆ, ನೀರಾ ಇಳಿಸುವ ಕಾಯಕದ ಮೂಲಕ ತೆಂಗು ಕೃಷಿಕರಿಗೆ ಹೆಚ್ಚಿನ ಲಾಭ ದೊರೆಯುವಂತೆ ಮಾಡುವ ಉದ್ದೇಶ ಹೊಂದಿದೆ.ಈಗಾಗಲೇ ಸ್ಥಳೀಯರಿಗೆ ಒಂದು ಹಂತದ ತರಬೇತಿಯನ್ನು ನೀಡಲಾಗಿದ್ದು ಅವರನ್ನು ಮುಂದಿನ ಹಂತದಲ್ಲಿ ಕರ್ತವ್ಯ ತೊಡಗಿಸುವ ಚಿಂತನೆ ನಡೆದಿದೆ.

. . ಮತ್ತು ಉಡುಪಿ ಜಿಲ್ಲೆಯಲ್ಲಿ ನೀರಾ ಇಳಿಸುವುದನ್ನು ಅಬಕಾರಿ ಕಾಯ್ದೆಯಿಂದ ಮುಕ್ತಪಡಿಸಿದ್ದು ಅಮಲು ಪದಾರ್ಥ ವಿಭಾಗದಿಂದ ಹೊರತು ಪಡಿಸಿದೆ.ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಬಕಾರಿ ಕಾಯ್ದೆ ನಿರ್ಬಂದವಿದೆ.

ತುಂಬೆ ಘಟಕವನ್ನು ಮುಂದಿನ ಮೂರು ವರ್ಷದ ವರೆಗೆ ಪಾಲಕ್ಕಾಡ್ ತೆಂಗು ಬೆಳೆಗಾರರ ಕಂಪೆನಿಯು ನಿರ್ವಹಣೆ ಮಾಡುವಂತೆ ಒಪ್ಪಂದವಾಗಿದೆ

ಮೂರು ವರ್ಷದಲ್ಲಿ ಸ್ಥಳೀಯರಿಗೆ ತರಬೇತಿ, ಗುಣಮಟ್ಟದ ಹೆಚ್ಚಳ, ಸಂಸ್ಕಾರ ಪರಿಪೂರ್ಣತೆ,ಲಾಭಕ್ಕೆ ತಂದು ನಿಲ್ಲಿಸುವುದು ಸಹಿತ ಮುಂದಿನ ಹಂತದಲ್ಲಿ ಸ್ಥಳೀಯ ತೆಂಗು ಬೆಳೆಗಾರರ ಫೆಡರೇಷನ್ಗೆ ಹಸ್ತಾಂತರಿಸುವ ಹೊಣೆಗಾರಿಕೆ ಹೊಂದಿದೆ.

 

Write A Comment