ಕರಾವಳಿ

ಹರೀಶ್ ರೆಫ್ರೆಶ್ ಮೆಂಟ್ ನ ಜನಾಕರ್ಶಣೀಯ ’ಸೀ ಪುಡ್ ಫೆಸ್ಟಿವೆಲ್’ 

Pinterest LinkedIn Tumblr

ವರದಿ -ಈಶ್ವರ ಎಂ. ಐಲ್

HAR_SEA_FOOD_5

ಸುಮಾರು 40 ವರ್ಷಗಳ ಹಿಂದೆ ಹೊಟೇಲು ಉದ್ಯಮಿ ಬಂಟ್ವಾಳ ಬಾಬು ಸಾಲ್ಯಾನ್ ಅವರು ಮುಂಬಯಿ ಪೋರ್ಟ್ ನ ಬಲ್ಲರ್ಡ್ ಎಸ್ಟೇಟ್ ನಲ್ಲಿ ಸ್ಥಾಪಿಸಿದ ಹರೀಶ್ ಲಂಚ್ ಹೋಮ್ ಸಮೂಹದ ಹರೀಶ್ ರೆಫ್ರೆಶ್ ಮೆಂಟ್ ನಲ್ಲಿ ನಡೆದ ’ಸೀ ಪುಡ್ ಫೆಸ್ಟಿವೆಲ್’  ನಗರದ ಮಾಂಸಹಾರಿ ಗ್ರಾಹಕರ ಮನ ತಣಿಸಿತು.

HAR_SEA_FOOD_4

ಪೋರ್ಟ್ ಪರಿಸರಕ್ಕೆ ಬಂದಾಗ ತುಳು-ಕನ್ನಡಿರಗಾರಲಿ ಅಥವಾ ಇತರರಾಗಲೀ ಈ ಹೋಟೇಲಿನ ರುಚಿಯನ್ನು ಸವಿಯದವರು ವಿರಳ. 1973ರಲ್ಲಿ ಹರೀಶ್ ಲಂಚ್ ಹೋಮ್ ಸ್ಥಾಪನೆಯಾಗಿದ್ದು ಪ್ರಾಮಾಣಿಕತೆ, ರುಚಿ ಹಾಗೂ ಸ್ವಚ್ಚತೆಯಿಂದ ಹಂತ ಹಂತವಾಗಿ ಪ್ರಸಿದ್ದಿಯನ್ನು ಪಡೆದು ಹರೀಶ್ ಲಂಚ್ ಹೋಮ್ ಸಮೂಹದ ಹರೀಶ್ ರೆಫ್ರೆಶ್ ಮೆಂಟ್1977ರಲ್ಲಿ ಪ್ರಾರಂಭಿಸಿದರು. ಇಲ್ಲಿನ ಮೀನು ಮಾಂಸದ ಪದಾರ್ಥಗಳು ಮೇಲ್ ವರ್ಗ ಹಾಗೂ ಮಧ್ಯಮ ವರ್ಗದ ಜನರ ಗಮನ ಸೆಳೆಯಿತು. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಹಾಗೂ ಹೋಟೇಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಉತ್ತಮ ತಳಿಯ ಮೀನು ಪದಾರ್ಥಗಳಿಗೆ ಆದ್ಯತೆ ನೀಡಲಾಯಿತು.

HAR_SEA_FOOD_3

ಕ್ರಮೇಣ ಬಾಬು ಸಾಲ್ಯನ್ ರ ಪುತ್ರ ಗಿರೀಶ್ ಬಿ. ಸಾಲ್ಯಾನ್ ಹರೀಶ್ ಲಂಚ್ ಹೋಮ್ ಸಮೂಹದ ಮೇಲ್ವಿಚಾರಣೆಯನ್ನು ವಹಿಸಿಕೊಂಡ ನಂತರ ಹರೀಶ್ ಸಮೂಹ ಹೋಟೇಲುಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿತು. ಗ್ರಾಹಕರಿಗೆ ನಾವೀನ್ಯತೆ ಹಾಗೂ ವಿಶೇಷ ರುಚಿಯನ್ನು ಒದಗಿಸುವ  ನಿಟ್ಟಿನಲ್ಲಿ ಇದೀಗ ಪ್ರಥಮ ಬಾರಿ ಹರೀಶ್ ರೆಫ್ರೆಶ್ ಮೆಂಟ್ ನಲ್ಲಿ  ಇತ್ತೀಚೆಗೆ ’ಸೀ ಪುಡ್ ಫೆಸ್ಟಿವೆಲ್’ ನ್ನು ಆಯೋಜಿಸಿ ಪ್ರಥಮ ದಿನದಲ್ಲೇ ಗ್ರಾಹಕರ ಮನ ಗೆದ್ದಿದ್ದಾರೆ. ’ಸೀ ಪುಡ್ ಫೆಸ್ಟಿವೆಲ್’ ನಲ್ಲಿ ನೆಕೆಟ್ ಮಸಾಲ, ತವಾ ಮಸಾಲ ಫ್ರೈ, ಮಂಗಳೂರಿಯನ್ ಟಿಕ್ಕ, ಫಿಶ್ ಬಿರಿಯಾಣಿ, ಫಿಶ್ ಗಸಿ, ಬಟರ್ ಲೆಮೆನ್ ಗಾರ್ಲಿಕ್ ಚಿಲ್ಲಿ, ಫಿಶ್ ಹಾಟ್ ಗಾರ್ಲಿಕ್ ಸಾಸ್, ಲೇಪ್ ಪುಲಿಮುಂಚಿ, ಲೇಪ್ ಹೈದ್ರಾಬಾದಿ ತವಾ ಫ್ರೈ, ಕ್ರ್ಯಾಬ್ ತಂದೂರಿ, ಕ್ರ್ಯಾಬ್ ಮಾಲ್ವಾಣಿ, ಸ್ಟಪ್ ಬೋಂಬಿಲ್, ಗ್ರೀನ್ ಮಸಾಲ ಮತ್ತಿತರ ಖಾದ್ಯಗಳು ಗ್ರಾಹಕರ ಗಮನ ಸೆಳೆದವು.

ಇಲ್ಲಿ ವಿಶೇಷವಾಗಿ ವೆಜ್ ತಾಲಿ, ಚೈನೀಸ್, ಪಂಜಾಬಿ, ಸೌತ್ ಇಂಡಿಯನ್, ಚಿಕನ್ ಕ್ರಿಸ್ಪಿ, ಸುರ್ಮಯಿ ಪ್ರೈ, ಸುರ್ಮಯಿ ಪುಲಿಮುಂಚಿ, ಪ್ರಾವ್ ನ್ಸ್ ಗಸಿ ಮತ್ತಿತರ ಖಾದ್ಯಗಳು ಮೆಚ್ಚುಗೆ ಪಡೆದಿದೆ.

HAR_SEA_FOOD_2

ದಿ. ಬಾಬು ಸಾಲ್ಯಾನ್ ಅವರ ಇಬ್ಬರು ಪುತ್ರರಲ್ಲಿ ಹಿರಿಯರಾದ ಗಿರೀಶ್ ಸಾಲ್ಯಾನ್ ಅವರು ಹರೀಶ್ ಲಂಚ್ ಹೋಮ್, ಹರೀಶ್ ರೆಫ್ರೆಶ್ ಮೆಂಟ್, ಹರೀಶ್ ಫಾಸ್ಟ್ ಫುಡ್ ಹಾಗೂ ತಲೋಜಾದಲ್ಲಿ ತನೀಶ್ ರೆಸಿಡೆನ್ಸಿ ನಡೆಸುತ್ತಿದ್ದು ಅವರ ಪುತ್ರ ಬಿನೀತ್ ಬೆಂಗಾವಲಾಗಿ ನಿಂತಿರುವರು. ಪ್ರಚಾರದಿಂದ ದೂರವಿರುವ ಗಿರೀಶ್ ಸಾಲ್ಯಾನ್ ಅವರು ತನ್ನನ್ನು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾಗಿದ್ದು ’ಆಹಾರ್’ ನ ಮಾಜಿ ಕೋಶಾಧಿಕಾರಿಯೂ ಆಗಿದ್ದಾರೆ.

HAR_SEA_FOOD_1

ಇದೇ ಡಿ. 26ರಿಂದ 31ರ ತನಕ ಹರೀಶ್ ರೆಫ್ರೆಶ್ ಮೆಂಟ್ ನಲ್ಲಿ ’ಮುರ್ಗಾ ಧಮಾಕ’ ಎಂಬ ವಿಶೇಷ ಆಹಾರೋತ್ಸವವನ್ನು ಆಯೋಜಿಸಲು ಗಿರೀಶ್ ಸಾಲ್ಯನ್ ನಿರ್ಧರಿಸಿದ್ದು ಈ ಉತ್ಸವದಲ್ಲಿ ಊರಿನ ’ಅಂಕದ ಕೋಳಿಗಳ’ ಪ್ರದರ್ಶನವಿದ್ದು ’ಅಂಕದ ಕೋಳಿ’ ಪದಾರ್ಥದ ವಿಶೇಷ ರುಚಿಯನ್ನು ಸವಿಯುವ ಅವಕಾಶವಾಗಿರುತ್ತದೆ ಎಂದಿದ್ದಾರೆ.

Write A Comment