ಕರಾವಳಿ

ಅಕ್ರಮ ಚಿನ್ನ ಸಾಗಾಟ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರು ಲಕ್ಷ ರೂ. ಮೌಲ್ಯದ 224 ಗ್ರಾಂ ಚಿನ್ನ ವಶ

Pinterest LinkedIn Tumblr

Airport_gold_bag_1a

ಮಂಗಳೂರು ; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ದುಬಾಯಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮತ್ತೊಂದು ಪ್ರಕರಣವನ್ನು ಪತ್ತೆ ಹಚ್ಚಿ ಸುಮಾರು 6.13,568 ರೂ.ಮೌಲ್ಯದ 224.750 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 7.30ಕ್ಕೆ ದುಬಾಯಿಯಿಂದ ಆಗಮಿಸಿದ ಜೆಟ್ ಏರ್‌ವೇಸ್ ವಿಮಾನದಲ್ಲಿ ಬಂದಿಳಿದ ಕಾಸರಗೋಡು ಮೊಗ್ರಲ್‍ ಪುತ್ತೂರು ನಿವಾಸಿ ಶಫೀಕ್ ಚಕ್ಲಿ ( 25 ) ಎಂಬ ಪ್ರಯಾಣಿಕನಿಂದ ಈ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಅಧಿಕಾರಿಗಳು ಶಫೀಕ್ ಚಕ್ಲಿ ಬಳಿಯಿದ್ದ ಕಪ್ಪು ಬಣ್ಣದ ಲ್ಯಾಪ್‌ಟಾಪ್ ಬ್ಯಾಗ್‌ನ ಸುತ್ತ ಅಳವಡಿಸಲಾದ ಸಿಲ್‌ವರ್ ಕಲರ್ ಬಣ್ಣದ ಬೀಡ್‌ ಅನ್ನು ಪರಿಶೀಲನೆ ನಡೆಸಿದಾಗ ಅದು ಚಿನ್ನದಾಗಿದ್ದು, ಅದರ ಬಣ್ಣವನ್ನು ಮರೆಮಾಚಿ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಶಫೀಕ್ ಚಕ್ಲಿಯನ್ನು ಬಂಧಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಶಫೀಕ್ ಚಕ್ಲಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.

Write A Comment