ಕರಾವಳಿ

ಹಾರ್ದಳ್ಳಿ-ಮಂಡಳ್ಳಿ: ಮಹಿಳೆಯ ಅನುಮಾನಾಸ್ಪದ ಸಾವು: ಹಣಕ್ಕಾಗಿ ಕೊಲೆ ಶಂಕೆ (Updated)

Pinterest LinkedIn Tumblr

ಕುಂದಾಪುರ: ಇಲ್ಲಿನ ಬಿದ್ಕಲಕಟ್ಟೆ ಸಮೀಪದ ಹಾರ್ದಳ್ಳಿ-ಮಂಡಳ್ಳಿ ವ್ಯಾಪ್ತಿಯ ಹಾಡಿಯೊಂದರಲ್ಲಿ ಮಂಗಂವಾರ ಮಧ್ಯಾಹ್ನದ ಸುಮಾರಿಗೆ ಮಹಿಳೆಯೋರ್ವರ ಶವವೊಂದು ಪತ್ತೆಯಾಗಿದ್ದು ಮುಖ ಜಜ್ಜಿದ ಸ್ಥಿತಿಯಲ್ಲಿದ್ದು ಇದೊಂದು ಕೊಲೆಯೆಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಯಡಾಡಿ ಮತ್ಯಾಡಿ ಗ್ರಾಮದ ನಾಲ್ತೂರು ನಿವಾಸಿ ಸೀತಾ ಕುಲಾಲ್ (58) ಎನ್ನುವವರೇ ಸಾವಿಗೀಡಾದವರು.

hardalli_women_death (1)

ಘಟನೆ ವಿವರ: ನಾಲ್ತೂರು ನಿವಾಸಿಯಾದ ಇವರು ಈ ಪ್ರದೇಶದಲ್ಲಿ ಸ್ವಸಹಾಯ ಸಂಘವೊಂದರಲ್ಲಿ ಸದಸ್ಯೆಯಾಗಿದ್ದರು. ಮಂಗಳವಾರ ಬೆಳಿಗ್ಗೆ ಗುಂಪಿನ ಸದಸ್ಯರ ಹಣವನ್ನು ಬ್ಯಾಂಕ್ ಗೆ ಜಮಾ ಮಾಡಲು ಹೋದ ಅವರು ವಾಪಾಸ್ಸು ಮನೆಗೆ ಬಂದಿರಲಿಲ್ಲ. ಮನೆಯವರೂ ಕೂಡ ಕೆಲಸದ ನಿಮಿತ್ತ ಹೊರಗೆ ಹೋದ ಕಾರಣದಿಂದಾಗಿ ಈ ಬಗ್ಗೆ ಯಾರು ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಆದರೇ ಮಂಗಳವಾರ ಮಧ್ಯಾನದ ವೇಳೆಗೆ ಅದೊಂದು ಆಘಾತಕಾರಿ ಸುದ್ದಿ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿತ್ತು. ಹಾರದಳ್ಳಿ ಕಾಲೇಜು ಎದುರಿನ ರಸ್ತೆ ಸಮೀಪದ ಹಾಡಿಯೊಂದರಲ್ಲಿ ಮುಖ ಜಜ್ಜಿದ, ಕೈಗಳು ತಿರುಚಿದಂತಿರುವ ಸ್ಥಿಯಲ್ಲಿರುವ ಮಹಿಳೆಯೋರ್ವರ ಶವವನ್ನು ಕಂದ ಸ್ಥಳೀಯ ಸೊಪ್ಪು ಕಡಿಯಲು ಹೋದವರು ಭಯಬೀತರಾಗಿದ್ದರು. ಕೂಡಲೇ ಊರೆಲ್ಲಾ ಪುಕಾರೆದ್ದಿದ್ದು ಕೋಟ ಪೊಲಿಸರಿಗೆ ಮಾಹಿತಿ ರವಾನೆಯಾಗಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಕೋಟ ಪೊಲೀಸರು ವಿಚಾರಣೆ ನಡೆಸುವಾಗ ಇದು ಸ್ಥಳೀಯ ಯಡಾಡಿ-ಮತ್ಯಾಡಿ ಗ್ರಾಮದ ನಾಲ್ತೂರು ನಿವಾಸಿ ಸೀತಾ ಕುಲಾಲ್ ಎನ್ನುವವರ ಶವವೆಂದು ಖಾತ್ರಿಯಾಗಿದೆ. ಈ ಬಗ್ಗೆ ಆಕೆಯ ಮನೆಯವರನ್ನು ಸ್ಥಳಕ್ಕೆ ಕರೆಯಿಸಿ ಖಚಿತಪಡಿಸಿಕೊಳ್ಳಲಾಯಿತು. ಆದರೇ ನಡೆದಿದ್ದೇನು ಎನ್ನೋದು ಮಾತ್ರ ನಿಗೂಡವಾಗಿತ್ತು.

hardalli_women_death hardalli_women_death (2)

m m m m m m m

ಬೆಳಿಗ್ಗೆ ಸ್ವಸಹಾಯ ಸಂಘದ ಹಣ ಕಟ್ತಲು ಹೋದ ಮಹಿಳೆ ವಾಪಸ್ಸು ಬಾರದೇ ಇದ್ದುದು ಗಮನಿಸಿದರೇ ಇಲ್ಲೊಂದು ಹಣಕ್ಕಾಗಿ ಕೊಲೆ ನಡೆದಿರಬಹುದೆಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಮಟ್ಟ್ದ ಹಣವನ್ನು ಸಂದಾಯ ಮಾಡಲು ಈಕೆ ಬ್ಯಾಂಕಿಗೆ ತೆರಳಿದ್ದರು ಎನ್ನುವುದು ಒಂದು ಮೂಲದ ಮಾಹಿತಿಯಾಗಿದ್ದು, ಇದನ್ನು ತಿಳಿದ ಈಕೆಯ ಪರಿಚಿತರಾದವರೇ ಕ್ರತ್ಯ ನಡೆಸಿರಬಹುದೇ ಎಂಬ ಗುಮಾನಿಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದು ವದಂತಿ ಪ್ರಕಾರ ಸ್ಥಳದಲ್ಲಿ ಸೊಪ್ಪು ಕಡಿಯುತ್ತಿದ್ದ ಕೆಲವು ಜನರಿಗೆ ಬೆಳಿಗ್ಗೆನ ಸಮಯದಲ್ಲಿ ಕೂಗಿನ ಶಬ್ದ ಕೇಳುತ್ತಿದ್ದು, ಯಡಾಡಿ, ಹಾರ್ದಳಿ ಭಾಗದಲ್ಲಿ ಚಿರತೆ ಓಡಾಟ ಇರುವ ಬಗ್ಗೆ ವದಂತಿಯಿರುವ ಕಾರಣ ಇದು ಚಿರತೆಯ ಕೂಗಾಟವೆಂದು ಭ್ರಮಿಸಿ ಸೊಪ್ಪನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಇನ್ಸಪೆಕ್ಟರ್ ಅರುಣ ನಾಯಕ್ ಹಾಗೂ ಕೋಟ ಪೊಲೀಸರು ಹೇಟಿ ನೀಡಿದ್ದು ಅನುಮಾನಾಸ್ಪದ ಸಾವಿನ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಶ್ವಾನದಳವೂ ಕೂಡ ಸ್ಥಳಕ್ಕೆ ಆಗಮಿಸಿದೆ. ತನಿಖೆಯ ಬಳಿಕವಷ್ಟೇ ಈ ಪ್ರಕರಣ ಮಾಹಿತಿ ಸಿಗಲಿದೆ.

Write A Comment