ಕರಾವಳಿ

ವೀರಪ್ಪ ಮೊಯ್ಲಿ ಅವರಿಂದ ಲೇಡಿಗೋಶನ್ ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ, ಬ್ಲಡ್ ಬ್ಯಾಂಕ್ ರಕ್ತ ವರ್ಗೀಕರಣ ಘಟಕಕ್ಕೆ ಚಾಲನೆ

Pinterest LinkedIn Tumblr

ladygoshan_utkadr_photo_1

ಮಂಗಳೂರು, ಅ.19: ಆರೋಗ್ಯ ಕ್ಷೇತ್ರ ದಲ್ಲಿ ಖಾಸಗಿ ಹಾಗೂ ಸಾರ್ವ ಜನಿಕ ರಂಗದ ಹೆಚ್ಚಿನ ಸಹಭಾಗಿತ್ವ ನೀಡ ಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಅವರು ಇಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ ಸಾರ್ವಜನಿಕ ಕಲ್ಯಾಣ ನಿಧಿಯಿಂದ ನೀಡಲಾದ ಒಂದು ಕೋಟಿ ರೂ.ಗಳಿಂದ ಭಾರತೀಯ ರೆಡ್‌ಕ್ರಾಸ್‌ನ ಜಿಲ್ಲಾ ಘಟಕಕ್ಕೆ ರಕ್ತ ಘಟಕ ವರ್ಗೀಕರಣ ಸಾಮಗ್ರಿ ಹಾಗೂ ಬ್ಲಡ್ ಬ್ಯಾಂಕ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ladygoshan_utkadr_photo_4 ladygoshan_utkadr_photo_2 ladygoshan_utkadr_photo_3

ವೈದ್ಯಕೀಯ ರಂಗವನ್ನು ರಾಷ್ಟ್ರದ ಹಿತದೃಷ್ಟಿಯಿಂದ ಉದ್ಯಮಶಾಹಿ ವಲಯ ಗಂಭೀರವಾಗಿ ಪರಿಗಣಿಸಿ ತಮ್ಮ ಕೊಡುಗೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ತಾನು ಈ ಹಿಂದೆ ಸಚಿವನಾ ಗಿದ್ದಾಗ ಕಾರ್ಪೊರೇಟ್ ವಲಯದ ಸಂಸ್ಥೆಗಳು ತಮ್ಮ ಆದಾಯದ ಶೇ.2ರಷ್ಟು ಪಾಲನ್ನು ಕಡ್ಡಾಯವಾಗಿ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ವಿನಿಯೋಗಿಸ ಬೇಕೆಂಬ ನೀತಿಯನ್ನು ಮಾಡಿದ್ದೇನೆ. ಪ್ರಸಕ್ತ ದೇಶದಲ್ಲಿ ಈ ನೀತಿ ಸಮರ್ಪಕ ವಾಗಿ ಜಾರಿಯಾದರೆ ವೈದ್ಯಕೀಯ ರಂಗ ಒಂದು ಉದ್ಯಮವಾಗಿ ಬೆಳೆದು ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗ ಬಹುದು.

ladygoshan_utkadr_photo_9 ladygoshan_utkadr_photo_5 ladygoshan_utkadr_photo_8

ಈ ನಿಟ್ಟಿನಲ್ಲಿ ಲೇಡಿಗೋಶನ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಘಟಕಕ್ಕೆ ಬಿಪಿಸಿಎಲ್ ಸಂಸ್ಥೆ ನೀಡಿರುವ ಕೊಡುಗೆ ಯನ್ನು ಶ್ಲಾಘಿಸಿದ ಅವರು, ಎಂಆರ್ ಪಿಎಲ್ ಸಂಸ್ಥೆಯ ವತಿಯಿಂದ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡ ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದರು. ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಹೆಚ್ಚುವರಿ 60 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಆರೋಗ್ಯ ವಂತ ಜನರಿಂದ ಕೂಡಿದ ಕರ್ನಾಟಕ ವನ್ನು ನಿರ್ಮಿಸುವ ಗುರಿ ರಾಜ್ಯ ಸರಕಾರದ ಮುಂದಿದೆ. ರಾಜ್ಯದಲ್ಲಿ ಎಲ್ಲಾ ಬ್ಲಡ್ ಬ್ಯಾಂಕ್‌ಗಳಿಗೆ ಅಂತರ್ ಸಂಪರ್ಕ ಕಲ್ಪಿಸುವ ಮೂಲಕ ರಕ್ತದ ತುರ್ತು ಅಗತ್ಯವಿರುವ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ladygoshan_utkadr_photo_12 ladygoshan_utkadr_photo_10 ladygoshan_utkadr_photo_11

ಎಪಿಲ್-ಬಿಪಿಎಲ್ ಎರಡು ವರ್ಗದವರಿಗೆ ಸಂಬಂಧಿಸಿದ ಆರೋಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸು ತ್ತಿರುವ ದೇಶದ ಪ್ರಥಮ ರಾಜ್ಯ ಕರ್ನಾಟಕ ಎಂಬ ಹಿರಿಮೆ ರಾಜ್ಯಕ್ಕಿದೆ. ಈ ನಿಟ್ಟಿನಲ್ಲಿ ಹೆಲ್ತ್ತಿಝನ್, ಮುಖ್ಯಮಂತ್ರಿ ಸಾಂತ್ವನ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ಬರು ವವರಿಗೂ, ರೋಗಿಗಳಿಗೂ ಉತ್ತಮ ಊಟ ದೊರೆಯುವಂತಾಗಲು ಕ್ಯಾಂಟೀನ್‌ಗಳಲ್ಲಿ ಉತ್ತಮ ಆಹಾರ ನೀಡುವಂತೆ ಆದೇಶ ನೀಡಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಸಮಾರಂಭದಲ್ಲಿ ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ರಾಜ್ಯ ಡ್ರಗ್ ಕಂಟ್ರೋಲರ್ ರಘುರಾಮ ಭಂಡಾರಿ, ಕೆಎಸ್‌ಎಪಿಎಸ್ ರವೀಂದ್ರ ಜಿ.ಎಸ್, ಮಾಜಿ ಮೂಡಾ ಅಧ್ಯಕ್ಷ ತೇಜೋಮಯ, ಭಾರತೀಯ ರೆಡ್‌ಕ್ರಾಸ್ ದ.ಕ ಘಟಕದ ಅಧ್ಯಕ್ಷ ಬಿ.ಪ್ರಭಾಕರ ಶ್ರೀಯಾನ್, ಭಾರತೀಯ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ಜಿಲ್ಲಾ ಘಟಕದ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡೀಸ್, ಬಿಪಿಸಿಎಲ್ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಅಯ್ಯಂಗಾರ್, ಎಂಆರ್‌ಪಿಎಲ್ ಅಧಿಕಾರಿ ಕಿಶೋರ್ ಚಂದ್ರ, ರೆಡ್ ಕ್ರಾಸ್ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು

Write A Comment