ಕರಾವಳಿ

ಇನ್ನು ಮುಂದೆ ಮ್ಯಾಂಗಲೋರ್ ಆಯಿತು ಮಂಗಳೂರು…

Pinterest LinkedIn Tumblr

manglore_news_photo_2

ಮಂಗಳೂರು,ಅ.18: ಮ್ಯಾಂಗಲೋರ್ ಇನ್ನು ಮುಂದೆ ಅಚ್ಚ ಕನ್ನಡ ಶಬ್ದವಾಗಿ ಮಂಗಳೂರು ಎಂದು ಬರೆಯಲ್ಪಡಲಿದೆ.ಮಂಗಳೂರು ಸೇರಿದಂತೆ ಆಂಗ್ಲಮಯವಾಗಿರುವ ಕರ್ನಾಟಕದ 12 ನಗರಗಳ ಹೆಸರನ್ನು ಬದಲಾಯಿಸುವ ರಾಜ್ಯ ಸರಕಾರದ 8 ವರ್ಷಗಳ ಹಿಂದಿನ ಪ್ರಸ್ತಾವಕ್ಕೆ ಕೇಂದ್ರ ಸರಕಾರ ತನ್ನ ಅನುಮೋದನೆ ನೀಡಿದೆ.

ಕನ್ನಡ ಭಾಷೆಯ ಉಚ್ಚಾರಕ್ಕೆ ಹೊಂದಿಕೊಳ್ಳುವಂತೆಯೇ ನಗರ ಗಳ ಹೆಸರನ್ನು ಬದಲಾಯಿಸುವ ಬಗ್ಗೆ ಕರ್ನಾಟಕ ಸರಕಾರ, ರಾಜ್ಯದ ಸುವರ್ಣ ಮಹೋತ್ಸವ ವರ್ಷಾಚರಣೆ ವೇಳೆ 2006ರ ಅ.27ರಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ವಿವಿಧ ಕಾರಣಗಳಿಂದಾಗಿ 8 ವರ್ಷಗಳಾದರೂ ಈ ಪ್ರಸ್ತಾವಕ್ಕೆ ಅನುಮತಿ ಸಿಕ್ಕಿರಲಿಲ್ಲ.

manglore_news_photo_1

ಈ ಊರುಗಳ ಹೆಸರು ಬದಲಾವಣೆಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಿ ದಾಖಲೆಗಳಲ್ಲಿ ಇವುಗಳ `ಇಂಗ್ಲಿಷ್ ಸ್ಪೆಲ್ಲಿಂಗ್’ಗಳು ಬದಲಾಗಲಿವೆ. ಅಲ್ಲದೆ, ಕನ್ನಡದಲ್ಲಿ ಈ ಊರುಗಳ ಹೆಸರು ಬಳಸುವಾಗಲೂ ಬದಲಾದ ಹೆಸರುಗಳನ್ನೇ ದಾಖಲೆಗಳಲ್ಲಿ ನಮೂದಿಸಬೇಕಾಗುತ್ತದೆ. ಇದರಿಂದ ಹೆಸರುಗಳಲ್ಲಿ ಕನ್ನಡತನದ ಸೊಗಡು ಕಂಡುಬರಲಿದೆ. ಈಗಾಗಲೇ ಹೆಸರು ಬದಲಾವಣೆಗೆ ರೈಲು ನಿಲ್ದಾಣಗಳು ಮತ್ತು ಅಂಚೆ ಕಚೇರಿ ಸೇರಿದಂತೆ ಹೆಸರು ಬದಲಾವಣೆ ಕುರಿತು ಕೇಂದ್ರ ಗೃಹ ಸಚಿವಾಲಯವು, ತನ್ನ ಎಲ್ಲ ಸಚಿವಾಲಯಗಳಿಗೆ ಸುತ್ತೋಲೆ ರವಾನಿಸಿದೆ.

Write A Comment