ಕರಾವಳಿ

ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಕಾರ್ಯಾಗಾರ

Pinterest LinkedIn Tumblr

untiltd_news_photo_1

ಮಂಗಳೂರು,ಅ.15: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್, ಮಂಗಳೂರು ಇವರ ಆಶ್ರಯದಲ್ಲಿ ಪುತ್ತೂರು ಉಪ ವಿಭಾಗದಲ್ಲಿ 2014-15  ನೇ ಸಾಲಿಗೆ ಆಡಳಿತಾವಧಿ ಕೊನೆಗೊಳ್ಳುವ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಕಾರ್ಯಾಗಾರವನ್ನು ಪುತ್ತೂರು ಟೌನ್ ಕೋಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ   ಜರುಗಿತು.

ಕಾರ್ಯಾಗಾರವನ್ನು ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಬಿ. ಕೆ. ಸಲೀಂ ರವರು ಉದ್ಘಾಟಿಸಿ, ಮಾತನಾಡುತ್ತಾ ಸಹಕಾರ ಚುನಾವಣಾ ಪ್ರಾಧಿಕಾರದ ಮುಖಾಂತರ ಚುನಾವಣೆ ನಡೆಯುತ್ತಿದ್ದು ಮತದಾರರ ಪಟ್ಟಿಯ ತಯಾರಿಯು ಮುಖ್ಯವಾಗಿದ್ದು ಇದಕ್ಕೆ ಪ್ರಥಮ ಆದ್ಯತೆಯನ್ನು ನೀಡಬೇಕು. ಮತದಾರರ ಪಟ್ಟಿಯನ್ನು ಲೋಪ ದೋಷ ರಹಿತವಾಗಿ ಅತ್ಯಂತ ಎಚ್ಚರಿಕೆಯಿಂದ ತಯಾರಿಸುವ ಗುರುತರ ಜವಾಬ್ದಾರಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಿಗೆ ಇದೆ ಎಂದು ನುಡಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ರವರು ಮಾತನಾಡುತ್ತಾ ಸಹಕಾರಿ ಚುನಾವಣೆಯನ್ನು ಈ ಹಿಂದೆ ಸಹಕಾರ ಇಲಾಖೆಯೇ ನಡೆಸುತ್ತಿದ್ದು, ಇದೀಗ ಸಹಕಾರ ಚುನಾವಣಾ ಪ್ರಾಧಿಕಾರ ನಡೆಸಲಿದ್ದು, ಈ ವಿಚಾರದ ಕುರಿತು ಹಾಗೂ ಇತ್ತೀಚಿಗೆ ಆಯ್ದ ಕಾಯ್ದೆ ತಿದ್ದುಪಡಿ ಬಗ್ಗೆ ತಿಳಿದು ಕೊಳ್ಳಬೇಕಾದ ಎಲ್ಲಾ ಸಹಕಾರಿ ಸಂಘಗಳ ಕಾರ್ಯ ನಿರ್ವಹಣಾಧಿಕಾರಿಗಳು ಅಗತ್ಯ ಮಾಹಿತಿ ಯನ್ನು ಪಡೆದು ಕೊಳ್ಳಲು ಅಗತ್ಯತೆ ಇದೆ ಎಂದರು.

ದ. ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕರಾದ ಶ್ರೀ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ಬಿ. ಎಲ್. ನರಸಿಂಹ ಸ್ವಾಮಿ, ಪುತ್ತೂರು ಟೌನ್ ಕೋಪರೇಟಿವ್ ಬ್ಯಾಂಕಿನ ಜನರಲ್ ಮೆನೇಜರ್ ಶ್ರೀ ನಹುಷ, ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರಿ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಾವಿತ್ರಿ ರೈ ಕೆ., ಕಾರ್ಯಕ್ರಮ ನಿರೂಪಿಸಿದರು

Write A Comment