ಕರಾವಳಿ

ಶಾಸಕ ಜೆ.ಆರ್.ಲೋಬೊ ಲೇಡಿಗೋಶನ್ ಆಸ್ಪತ್ರೆಗೆ ಭೇಟಿ ಹಾಗೂ ಕಟ್ಟಡ ಕಾಮಗಾರಿಯ ಪರಿಶೀಲನೆ.

Pinterest LinkedIn Tumblr

bhat_141014_ladygoshen1a

ಮಂಗಳೂರು, ಅ.14: ನಗರದ ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಶಾಸಕ ಜೆ.ಆರ್.ಲೋಬೊ ಮಂಗಳವಾರ ಭೇಟಿ ನೀಡಿ, ಹೆರಿಗೆ ವಿಭಾಗ, ನೂತನ ಕಟ್ಟಡ ಕಾಮಗಾರಿಗಳನ್ನು ವೀಕ್ಷಿಸಿದರು.ಬಳಿಕ ಸುದ್ದಿಗಾರ ಜತೆ ಮಾತ ನಾಡಿದ ಅವರು, ಸರಕಾರಿ ವ್ಯವಸ್ಥೆ ಯಲ್ಲಿ ಲೇಡಿಗೋಶನ್ ಆಸ್ಪತ್ರೆಯು ಇರುವ ಸೌಲಭ್ಯಗಳನ್ನು ಬಳಸಿಕೊಂಡು ಅತ್ಯುತ್ತಮವಾಗಿದ್ದು, ಇತರ ಆಸ್ಪತ್ರೆ ಗಳಿಗೆ ಮಾದರಿಯಾಗಿದೆ ಎಂದರು.

bhat_141014_ladygoshen2a bhat_141014_ladygoshen3-(1)a bhat_141014_ladygoshen5a

ಒಟ್ಟು 260 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಹೆಚ್ಚಿನ ದಿನಗಳಲ್ಲಿ 200 ಹಾಸಿಗೆಗಳು ತುಂಬಿರುತ್ತವೆ. ಪ್ರತಿ ತಿಂಗಳು 500ರಷ್ಟು ಹೆರಿಗೆಗಳು ನಡೆಯುತ್ತಿದ್ದು, ಒಂದು ದಿನ 70 ಹೆರಿಗೆಗಳು ನಡೆದಿವೆ. ತಾಯಿ ಮತ್ತು ಶಿಶುಗಳ ಸಾವು ಪ್ರಮಾಣ ಕೂಡಾ ಬಹಳ ಕಡಿಮೆ ಎಂದು ಹೇಳಿದರು. ಆಸ್ಪತ್ರೆಯಲ್ಲಿ ಗ್ರೂಪ್ ಡಿ ಸೇರಿದಂತೆ ಸಿಬ್ಬಂದಿ ಕೊರತೆ ಇದೆ. ರಕ್ತ ನಿಧಿ ಕಾರ್ಯಾಚರಿಸುತ್ತಿದೆ, ರಕ್ತ ವರ್ಗೀ ಕರಣ ಘಟಕದ ವ್ಯವಸ್ಥೆಯೂ ಇದೆ. ಮುಂದಿನ ವಾರ ಸಂಸದ ವೀರಪ್ಪ ಮೊಯ್ಲಿ ಅದರ ಉದ್ಘಾಟನೆ ನೆರವೇರಿ ಸಲಿದ್ದಾರೆ. ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ನಡೆಸುತ್ತಿದ್ದು, ಮೊನ್ನೆ ಒಂದೇ ದಿನ 600 ಬಾಟಲ್ ರಕ್ತ ಸಂಗ್ರಹ ನಡೆದಿದೆ ಎಂದು ಅವರು ಹೇಳಿದರು.

bhat_141014_ladygoshen6a bhat_141014_ladygoshen7a bhat_141014_ladygoshen8a

ಆಸ್ಪತ್ರೆ ಆವರಣದಲ್ಲಿ 200 ಮಂದಿ ಪುರುಷರಿಗೆೆ ರಾತ್ರಿ ವೇಳೆ ಉಳಿಯಲು ಮತ್ತು ಹಗಲು ವೇಳೆ ಮಹಿಳೆಯರು ಉಳಿಯಲು ಅವಕಾಶವಿದೆ. ಕೆ‌ಎಂಸಿ ಆಸ್ಪತ್ರೆ ಸಹಯೋಗದಲ್ಲಿ ಅತ್ಯುತ್ತಮ ಚಿಕಿತ್ಸೆ, ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆ ಅಲ್ಲದೆ, ರಾಜ್ಯದ ನಾನಾ ಮೂಲೆಗಳಿಂದ ರೋಗಿಗಳು ಬರುತ್ತಿದ್ದಾರೆ ಎಂದರು.

bhat_141014_ladygoshen9a bhat_141014_ladygoshen10a bhat_141014_ladygoshen4a bhat_141014_ladygoshen11a-

ಎಂಆರ್‌ಪಿ‌ಎಲ್‌ನಿಂದ ನಿರ್ಮಿಸುತ್ತಿ ರುವ ಲೇಡಿಗೋಶನ್ ಆಸ್ಪತ್ರೆ ವಿಭಾಗ ಡಿಸೆಂಬರ್‌ಗೆ ಸಿದ್ಧಗೊಳ್ಳಬೇಕಿತ್ತು. ಆದರೆ, ಜೂನ್ ವೇಳೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು.
ಕಾರ್ಪೊರೇಟರ್ ಪೂರ್ಣಿಮಾ, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಶಕುಂತಳಾ, ಡಾ.ಶಾಂತಾರಾಮ ಬಾಳಿಗಾ ಮತ್ತಿತರರು ಶಾಸಕರೊಂದಿಗೆ ಇದ್ದರು.

Write A Comment