ಕರಾವಳಿ

ಭೂಮಿ ಹಕ್ಕಿಗಾಗಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಧರಣಿ  ಸತ್ಯಾಗ್ರಹ

Pinterest LinkedIn Tumblr

kprs_protest_photo_1

ಮಂಗಳೂರು, ಅ. 15: ಕೇಂದ್ರದ ಮೋದಿ ಸರಕಾರದ ‘ಮೇಕ್ ಇನ್ ಇಂಡಿಯಾ’ ಹಾಗೂ ಕರ್ನಾಟಕದ ಸಿದ್ದರಾಮಯ್ಯ ಸರಕಾರದ ‘ಮೇಕ್ ಇನ್ ಕರ್ನಾಟಕ’ ಬಂಡವಾಳಗಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶ ವನ್ನು ಹೊಂದಿದೆಯೇ ಹೊರತು ಬಡ ಜನರ ಕಾಳಜಿಯನ್ನು ಈ ಯೋಜನೆಗಳು ಹೊಂದಿಲ್ಲ ಎಂದು ಸಿಪಿ‌ಎಂ ನಾಯಕ ವಸಂತ ಆಚಾರಿ ಆರೋಪಿಸಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘದ ದ.ಕ. ಜಿಲ್ಲಾ ಘಟಕದ ವತಿಯಿಂದ ಜನರ ಭೂಮಿಯ ಹಕ್ಕಿನ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಮಂಗಳವಾರ ಆಯೋಜಿಸಲಾದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

kprs_protest_photo_2 kprs_protest_photo_3 kprs_protest_photo_4

‘ಉಳುವವನೇ ಭೂಮಿಯ ಒಡೆಯ’ ಎಂಬ ಮಾತಿದ್ದರೂ ರಾಜ್ಯ ಸರಕಾರವು ಹೈಕೋರ್ಟ್ ಗೆ ಅಫಿದಾವಿತ್ ನೀಡಿ ಬಗರ್ ಹುಕುಂ ಸಾಗುವಳಿದಾರರನ್ನು ಮತ್ತು ಅರಣ್ಯ ಭೂಮಿ ಸಾಗುವಳಿ ದಾರರನ್ನು ಒಕ್ಕಲೆಬ್ಬಿಸಲು ತೀರ್ಮಾನಿ ಸಿರುವುದಲ್ಲದೆ ಈ ಬಗ್ಗೆ ಪಂಚಾಯತ್‌ಗಳ ಮೂಲಕ ನೋಟಿಸ್ ನೀಡುವ ಕಾರ್ಯ ನಡೆಯುತ್ತಿರುವುದು ಆತಂಕ ಕಾರಿ ಬೆಳವಣಿಗೆ. ದ.ಕ. ಜಿಲ್ಲೆಯ ಐದು ತಾಲೂಕುಗಳಲ್ಲಿ ಹಲವಾರು ವರ್ಷಗಳಿಂದ 5 ಸೆಂಟ್ಸ್‌ನಿಂದ 10 ಎಕ್ರೆ ಜಮೀನುವರೆಗಿನ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಅದರಲ್ಲಿ ಉತ್ಪಾದನೆ ಯಾದ ವಸ್ತುಗಳನ್ನು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುವ ಸಾವಿರಾರು ಕುಟುಂಬಗಳಿವೆ. ಆದರೆ ಇದೀಗ ರಾಜ್ಯ ಸರಕಾರ ಅವರನ್ನೆಲ್ಲಾ ಭೂಗಳ್ಳರ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಮುಂದಾಗಿದೆ ಎಂದು ವಸಂತ ಆಚಾರಿ ದೂರಿದರು. ಸಮಾಜವಾದ ಎಂದರೆ ಸಾಮರ್ಥ್ಯ ಇಲ್ಲದವರಿಗೆ ಶಕ್ತಿ ತುಂಬುವುದು. ಆದರೆ ಭೂಮಿಯ ಹಕ್ಕಿನ ವಿಚಾರದಲ್ಲಿ ಸಮಾಜವಾದಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಯನ್ನು ಅನುಮಾನಿಸುವಂತಾಗಿದೆ.

kprs_protest_photo_8 kprs_protest_photo_7

ಸಾಗುವಳಿದಾರರನ್ನು ರಕ್ಷಿಸಬೇಕಾದರೆ ಉಚ್ಚ ನ್ಯಾಯಾಲಯಕ್ಕೆ ನೀಡಿದ ಮುಚ್ಚಳಿಕೆ ಪತ್ರ ಹಾಗೂ ಬಲವಂತ ವಾಗಿ ಒಕ್ಕಲೆಬ್ಬಿಸುವ ಆದೇಶ ಹಿಂಪಡೆ ಯಬೇಕು. ಭೂಕಂದಾಯ ಹಾಗೂ ಅರಣ್ಯ ಕಾಯ್ದೆಗೆ ಸೂಕ್ತ ತಿದ್ದು ಪಡಿ ಮಾಡಿ ಬಡಜನರಿಗೆ ಹಕ್ಕು ಪತ್ರ ನೀಡಬೇಕು ಎಂದವರು ಒತ್ತಾಯಿ ಸಿದರು. ಧರಣಿ ಸತ್ಯಾಗ್ರಹವನ್ನು ಉದ್ಘಾ ಟಿಸಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಆರ್.ಶ್ರೀಯಾನ್, ಒಂದೆಡೆ ಮುಖ್ಯಮಂತ್ರಿ ನೇತೃತ್ವ ದಲ್ಲಿ ಒತ್ತುವರಿದಾರರನ್ನು ತೆರವು ಗೊಳಿಸುವುದಾಗಿ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಿದ್ದರೆ, ಮತ್ತೊಂ ದೆಡೆ ಕಂದಾಯ ಮತ್ತು ಅರಣ್ಯ ಸಚಿವರು ಸಾಗುವಳಿದಾರರ ಹಿತ ಕಾಪಾಡುವುದಾಗಿ ಹೇಳುವ ಮೂಲಕ ಸರಕಾರ ದ್ವಂದ್ವ ನಿಲು ವನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿ ಸಿದರು.

kprs_protest_photo_6 kprs_protest_photo_5

ಹಲವಾರು ಸರಕಾರಗಳು ಕೇಂದ್ರ ದಲ್ಲಿ ಹಾಗೂರಾಜ್ಯದಲ್ಲಿ ಆಡಳಿತ ನಡೆಸಿದರೂ ಬಡವರ ಭೂಮಿ ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಲ್ಲ. ಭೂಮಿ ಹಕ್ಕಿನ ಸಮಸ್ಯೆಗಳು ಜೀವಂತ ಸಮಸ್ಯೆಗಳಾಗಿ ಬಡವರನ್ನು ಕಾಡುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಬಾಲಕೃಷ್ಣ ಶೆಟ್ಟಿ, ಲೋಕಯ್ಯ, ಬಿ.ಎಂ.ಭಟ್, ಕೃಷ್ಣಪ್ಪ ಸಾಲ್ಯಾನ್, ಸುನಿಲ್‌ಕುಮಾರ್ ಬಜಾಲ್, ರಾಮಣ್ಣ ವಿಟ್ಲ, ನೋಣಯ್ಯ ಗೌಡ, ನಾರಾಯಣ, ವಾಸುದೇವ ಉಚ್ಚಿಲ್ ಭಾಗವಹಿಸಿದ್ದರು. ಧರಣಿ ಸತ್ಯಾಗ್ರಹಕ್ಕೆ ಮೊದಲು ಸಂಘದ ನೇತ್ವದಲ್ಲಿ ಪ್ರತಿಭಟನಕಾರರು ಭೂಮಿಯ ಹಕ್ಕಿನ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಘೋಷಣೆ ಗಳನ್ನು ಕೂಗುತ್ತಾ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ವೆುರ ವಣಿಗೆ ನಡೆಸಿದರು.

Write A Comment