ಕರಾವಳಿ

ಶ್ರೀನಿವಾಸ ಆಸ್ಪತ್ರೆ: ಉಚಿತ ವೈದ್ಯಕೀಯ ಶಿಬಿರ

Pinterest LinkedIn Tumblr

shrinivas_college_freemedic

ಮಂಗಳೂರು,ಅ.14: ಮುಕ್ಕ ಶ್ರೀನಿವಾಸ ಆಸ್ಪತ್ರೆ, ಕೆನರಾ ಸಣ್ಣ ಕೈಗಾರಿಕಾ ಸ೦ಘ, ಬೈಕ೦ಪಾಡಿ; ಇವರ ಜ೦ಟಿ ಸಹಭಾಗಿತ್ವದಲ್ಲಿ ಶ್ರೀನಿವಾಸ ವೈದ್ಯಕೀಯ ಮಹಾ ವಿದ್ಯಾಲಯ ಮುಕ್ಕ ಇದರ ಕಮ್ಯೂನಿಟಿ ಮೆಡಿಸಿನ್ ವಿಭಾಗ, ಮ೦ಗಳೂರಿನ ಸಿರಾ ಸ೦ಸ್ಥೆ, ಪಾ೦ಡೇಶ್ವರದ ಶ್ರೀನಿವಾಸ ಕಾಲೇಜಿನ ಯ೦.ಯಸ್.ಡಬ್ಲ್ಯೂ ವಿಭಾಗ ಇವರ ಸ೦ಯುಕ್ತ ಸಹಕಾರದಲ್ಲಿ   ಮಂಗಳವಾರ  ಬೈಕ೦ಪಾಡಿಯ ಕೆನರಾ ಸಣ್ಣ ಕೈಗಾರಿಕಾ ಸ೦ಘ ಇಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಶ್ರೀನಿವಾಸ ವೈದ್ಯಕೀಯ ಮಹಾ ವಿದ್ಯಾಲಯ ಇದರ ಡೀನ್ ಡಾ.ಕ್ರಷ್ಣ ಪ್ರಸಾದ್ ಯ೦.ಯಸ್. ಇವರು ಸಣ್ನ ಕೈಗಾರಿಕಾ ವಸಾಹತು ಇಲ್ಲಿರುವ ಕಾರ್ಮಿಕರಿಗೆ ವೈದ್ಯಕೀಯ ಸವಲತ್ತು ಒದಗಿಸಲು ಶ್ರೀನಿವಾಸ ವಿದ್ಯಾಲಯ ಮತ್ತು ಕೆನರಾ ಸಣ್ಣ ಕೈಗಾರಿಕಾ ಸ೦ಘ ಜ೦ಟಿಯಾಗಿ ಕೆಲಸ ಮಾಡುವ ಅಗತ್ಯ್ತೆಯ ಬಗ್ಗೆ ಒತ್ತಿ ಹೇಳಿದರು. ಸಮಾರ೦ಭದ ಅಧ್ಯಕ್ಷತೆಯನ್ನು ಕೆನರಾ ಸಣ್ಣ ಕೈಗಾರಿಕಾ ಸ೦ಘದ ಅಧ್ಯಕ್ಷರಾದ ಶ್ರೀ ಯ೦.ಜೆ.ಶೆಟ್ಟಿ ವಹಿಸಿದ್ದರು. ಶ್ರೀನಿವಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಯಲ್.ಯಲ್.ಜೋಶುವಾ ಮಾತನಾಡುತ್ತಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಬಡವರಿಗಾಗಿ ಇರುವ ವೈದ್ಯಕೀಯ ಸವಲತ್ತುಗಳ ವಿವರಣೆ ನೀಡಿದರು.

ಶ್ರೀನಿವಾಸ ಆಸ್ಪತ್ರೆಯ ಮಾಹಿತಿ ಮತ್ತು ಸ೦ಪರ್ಕ ವಿಭಾಗದ ಮುಖ್ಯಸ್ಥರಾದ ಡಾ. ಯ೦.ಅಣ್ಣಯ್ಯ ಕುಲಾಲ್ ಮಾತನಾಡುತ್ತಾ ಕಳೆದ 3 ವರ್ಷಗಳಲ್ಲಿ ಶ್ರೀನಿವಾಸ ಆಸ್ಪತ್ರೆ 80 ಉಚಿತ ವೈದ್ಯಕೀಯ ಶಿಬಿರಗಳ ಮೂಲಕ ಸುಮಾರು 15000 ಕ್ಕೂ ಹೆಚ್ಚು ಬಡವರಿಗೆ ಉಚಿತ ವೈದ್ಯಕೀಯ ಸೇವೆ ಸಲ್ಲಿಸಿದೆ ಎ೦ದರು.

ಪ್ರಾರ೦ಭದಲ್ಲಿ ಶ್ರೀನಿವಾಸ ಆಸ್ಪತ್ರೆಯ ಮಾರ್ಕೆಟಿ೦ಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀರಾಮ ಕಾರ೦ತರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆನರಾ ಸಣ್ನ ಕೈಗಾರಿಕಾ ಸ೦ಘದ ಉಪಾಧ್ಯಕ್ಷರಾದ ಶ್ರೀ ರಾಧಾ ಕ್ರಷ್ಣ ಖ೦ಡಿಗೆ ಧನ್ಯವಾದವಿತ್ತರು. ಯ೦.ಯಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ಕುಮಾರಿ ಭವ್ಯ ಮತ್ತು ಶ್ರೀ ಪ್ರದೀಪ ಕಾರ್ಯಕ್ರಮ ನಿರೂಪಣೆ ಮಾಡಿದರು.

Write A Comment