ಕರಾವಳಿ

ಎಂ.ವಿ.ಕಾಮತ್ ನಿಧನ- ದ.ಕ ಬಿಜೆಪಿ ಸಂತಾಪ

Pinterest LinkedIn Tumblr

journalist_1

ಮಂಗಳೂರು,ಅ.೦9: ದೇಶದ ಪತ್ರಿಕೋದ್ಯಮದಲ್ಲಿ ತನ್ನದೇ ಆದ ವೈಶಿಷ್ಠತೆಯಿಂದ ಗಮನಾರ್ಹ ಸಾಧನೆಗೈದ ಲೇಖಕ, ಚಿಂತಕ, ಅಂಕಣಕಾರ ಎಂ.ವಿ.ಕಾಮತ್ ನಿಧನಕ್ಕೆ ಬಿಜೆಪಿ ದ.ಕ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ರಾಷ್ಟ್ರೀಯ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿ ಪ್ರಜಾಪ್ರಭುತ್ವದ ಆಧಾರಸ್ಥಂಭಗಳಲ್ಲಿ ಒಂದಾದ ಪತ್ರಿಕೋದ್ಯಮಕ್ಕೆ ಘನತೆಯನ್ನು ತಂದುಕೊಟ್ಟಿದ್ದ ಸಾಧಕರಾದ ಕಾಮತ್‌ರು ತಮ್ಮ ವಿಚಾರಪೂರ್ಣ, ಅರ್ಥಗರ್ಭಿತ ಲೇಖನಗಳಿಂದ ಪ್ರಬುದ್ಧ ಓದುಗರ ಜನಮಾನಸದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದರು. ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯ ಮತ್ತು ರಾಷ್ಟ್ರೀಯ ದೃಷ್ಟಿಕೋನಗಳಿಂದ ಗೌರವದ ಸ್ಥಾನವನ್ನು ಅವರು ಹೊಂದಿದ್ದರು.

ಅವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕ್ಯಾ| ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ರುಕ್ಮಯ್ಯ ಪೂಜಾರಿ, ಕೃಷ್ಣ ಜೆ.ಪಾಲೆಮಾರ್, ಕೆ.ಮೋನಪ್ಪ ಭಂಡಾರಿ, ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ಪ್ರಮುಖರಾದ ಶ್ರೀಮತಿ ಸುಲೋಚನಾ ಜಿ.ಕೆ ಭಟ್, ಬಿ. ದೇವದಾಸ್ ಶೆಟ್ಟಿ, ಪುಷ್ಪಲತಾ ಗಟ್ಟಿ, ಸಂಜೀವ ಮಠಂದೂರು, ಜ್ಯೇಷ್ಠ ಪಡಿವಾಳ್, ಸತೀಶ್ ಪ್ರಭು, ಶಾಂತಾ.ಆರ್, ಅಶೋಕ್, ಸಂಜಯ್ ಪ್ರಭು ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Write A Comment