ಕರಾವಳಿ

ಹೇರಿಕುದ್ರು: ಪಕ್ಕದ ಮನೆ ಸಾಕು ನಾಯಿ ದಾಳಿಗೆ ನಲುಗಿದ ಬಾಲಕ

Pinterest LinkedIn Tumblr

Dog_Bite_School Boy (1)

ಕುಂದಾಪುರ: ಏಳನೆಯ ತರಗತಿ ಓದುತ್ತಿರುವ ಬಾಲಕನೋರ್ವನಿಗೆ ತನ್ನ ಮನೆ ಸಮೀಪದ ಸಾಕುನಾಯಿಯೊಂದು ಕಚ್ಚಿ ಗಾಯಗೊಳಿಸಿದ ಘಟನೆ ಹೇರಿಕುದ್ರು ಎಂಬಲ್ಲಿ ನಡೆದಿದೆ.

ಮೂಲತಃ ಆಜ್ರಿಯ ಈ ಬಾಲಕ ತನ್ನ ದೊಡ್ಡಮ್ಮನ ಮನೆಯಲ್ಲಿ ವ್ಯಾಸಂಗದ ನಿಮಿತ್ತ ಉಳಿದುಕೊಂಡಿದ್ದು, ನಿತ್ಯದಂತೇ ಮನೆ ಸಮೀಪದ ಹೇರಿಕುದ್ರು ಮಹಾಕಾಳಿ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಆತನ ಮನೆ ಸಮೀಪದ ಮನೆಯೊಂದರ ಸಾಕು ನಾಯಿ ಬಾಲಕನ ಮೇಲೆರಗಿದೆ. ಈತನ ಬೊಬ್ಬೆ ಕೇಳಿದ ಸ್ಥಳದಲ್ಲಿದ್ದ ಯುವಕನೋರ್ವ ನಾಯಿಯನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Dog_Bite_School Boy (3)Dog_Bite_School Boy (2)Dog_Bite_School Boy Dog_Bite_School Boy (4)

 ಈ ಹಿಂದೆಯೂ ಕೂಡ ನಾಯಿ ಇತರ ನಾಲ್ಕೈದು ಮಂದಿ ಮೇಲೆ ದಾಳಿ ನಡೆಸಿದೆ ಎಂದು ನೊಂದ ಬಾಲಕನ ಫೋಷಕರು ದೂರಿದ್ದು ಈ ಬಗ್ಗೆ ಮನೆಯವರಲ್ಲಿ ಕೇಳಿದರೇ ಅವರು ನಮಗೆ ಅವ್ಯಾಚವಾಗಿ ಬೈದು ಹಲ್ಲೆ ಮಾಡಲು ಮುಂದಾಗುತ್ತಾರೆ ಎಂದು ನೊಂದ ಬಾಲಕನ ಪೋಷಕರು ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಯಾವುದೇ ಪ್ರಕರಣ ಸದ್ಯ ದಾಖಲಾಗಿಲ್ಲ.

Write A Comment