ಅಂತರಾಷ್ಟ್ರೀಯ

ಸಂಶೋಧನೆಯ ಜೊತೆ ಪರಿಹಾರ ಸೂಚಿಸಿ: ಸಚಿವ ಖಾದರ್

Pinterest LinkedIn Tumblr

khada

ಕೇಪ್‌ಟೌನ್, ಅ.2: ಸಮಸ್ಯೆಯ ಬಗ್ಗೆ ಸಂಶೋಧನೆ ನಡೆಸುವ ಸಂಶೋಧಕರು ಅದಕ್ಕೆ ಪರಿಹಾರವನ್ನೂ ಸೂಚಿಸಿದರೆ ಸಮಸ್ಯೆಯನ್ನು ಅತ್ಯಂತ ಸಮರ್ಪಕವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಆಯೋ ಜಿಸಿದ್ದ ಗ್ರಾಮೀಣ ಆರೋಗ್ಯ ಜಾಗೃತಿ ಗಾಗಿ ವೈದ್ಯಕೀಯ ಪರಿಹಾರ ಎಂಬ ಕಾರ್ಯಕ್ರಮದಲ್ಲಿ ದೇಶದ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸಚಿವ ಖಾದರ್ ‘ಆರೋಗ್ಯ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಯೆಗಳು’ ಎಂಬ ವಿಷಯದಲ್ಲಿ ಮಾತನಾಡುತ್ತಾ, ಸಂಶೋ ಧಕರಿಗೆ ಈ ಸಲಹೆ ನೀಡಿದ್ದಾರೆ.

ಸಂಶೋಧನೆಗಳು ಜನರಿಗೆ ಉಪ ಯೋಗವಾಗಬೇಕು. ಅದು ಪರಿಣಾಮ ಬೀರುವಂತಾಗಬೇಕು. ಯಾವುದೇ ಆರೋಗ್ಯ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಗಾರರು, ಸಂಶೋ ಧಕರು, ಅನುಷ್ಠಾನ ಮಾಡುವವರು ಹಾಗೂ ಮೇಲ್ವಿಚಾರಕರ ನಡುವೆ ನಿಕಟ ಸಂಪರ್ಕವಿರುವುದು ಅತ್ಯಗತ್ಯ ಎಂದವರು ಅಭಿಪ್ರಾಯಿಸಿದರು. ಆರೋಗ್ಯ ವಿಮೆ ಯೋಜನೆಯ ಸಂಶೋಧನೆ ಉತ್ತಮವಾದುದು. ಆದರೆ ಅದರ ಸಂಪೂರ್ಣ ಲಾಭ ವಿಮಾ ಸಂಸ್ಥೆಗಳ ಪಾಲಾಗುತ್ತಿವೆ. ಇದರಿಂದ ರೋಗಿಗಳಿಗೆ ಅಗತ್ಯವಾದ ಪ್ರಯೋಜನ ಸಿಗುತ್ತಿಲ್ಲ. ಬಡವರ ಸ್ನೇಹಿ, ರೋಗಿಗಳ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವಲ್ಲಿ ವಿಮಾ ಸಂಸ್ಥೆ ಎಡವಿವೆ. ವಿಮಾ ಸಂಸ್ಥೆಗಳು ಹೊರ ತರುವ ಯೋಜನೆ ಗಳನ್ನು ಸ್ಥಳೀಯವಾಗಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಅಲ್ಲಿನ ಪರಿಸ್ಥಿತಿಗೆ ಅನು ಗುಣವಾಗಿ ಬದಲಾವಣೆ ತರುವ ಅಧಿ ಕಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಬೇಕು. ಸರಕಾರವೇ ಅದಕ್ಕೊಂದು ಪರಿಹಾರ ಹುಡುಕುವುದು ಅಗತ್ಯವಾ ಗಿದೆ ಎಂದು ಸಚಿವ ಖಾದರ್ ಹೇಳಿದರು.

ಕೇಪ್‌ಟೌನ್‌ನಲ್ಲಿ ಕನ್ನಡದ ಕಂಪು!
‘ಗುಡ್‌ಮಾರ್ನಿಂಗ್, ಅಸ್ಸಲಾಮು ಅಲೈಕುಂ, ನಮಸ್ತೆ’ ಎಂಬ ನುಡಿಗಳೊಂದಿಗೆ ಮಾತು ಆರಂಭಿಸಿದ ಸಚಿವ ಖಾದರ್, ಕೇಪ್‌ಟೌನ್‌ನ ಭವ್ಯ ಸಭಾಂಗಣದಲ್ಲಿ ಕನ್ನಡದ ಕಂಪನ್ನೂ ಬೀರಿದರು. ಸಚಿವ ಖಾದರ್ ಮಾತುಗಳಿಗೆ ಕರತಾಡನದ ಸ್ವಾಗತವೂ ಸಭಿಕರಿಂದ ವ್ಯಕ್ತವಾಯಿತು.

ಶಾಂತಿ ಹಾಗೂ ಐಕ್ಯತೆಯನ್ನು ಸಾರಿದ ನೆಲ್ಸನ್ ಮಂಡೇಲಾರು ಹುಟ್ಟಿದ ಮಣ್ಣಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸತವಾಗು ತ್ತಿರುವುದಾಗಿ ಹೇಳಿದ ಸಚಿವ ಖಾದರ್, ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದ ಈ ಮಣ್ಣಿನಲ್ಲಿ ನಿಂತು ಭಾರತದ ಶಾಂತಿ, ಸೌಹಾರ್ದತೆಗಾಗಿ ಕರೆ ನೀಡಿದ್ದನ್ನು ನೆನಪಿಸಬೇಕಾಗಿದೆ ಎಂದು ಹೇಳಿದರು.

Write A Comment