ಕರಾವಳಿ

ಪ್ರಧಾನಿಯವರ ಕನಸಿನ ಯೋಜನೆ “ಸ್ವಚ್ಛತಾ ಕಾರ್ಯ”ಕ್ಕೆ ಮಂಗಳೂರಿನಾದ್ಯಂತ ಚಾಲನೆ

Pinterest LinkedIn Tumblr

raiway_stand_photo_M

ಮಂಗಳೂರು : ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಪ್ರಧಾನಮಂತ್ರಿ ಮತ್ತು ಕೇಂದ್ರ ರೈಲ್ವೇ ಸಚಿವರ ಸೂಚನೆಯನ್ವಯ ಭಾರತೀಯ ರೈಲ್ವೇಯು ಸ್ಚಚ್ಛತಾ ಕಾರ್ಯಕ್ರಮಗಳನ್ನು ಹಮಿಕೊಂಡಿದ್ದು, ಈ ಪ್ರಯುಕ್ತ ಇಂದು ಬೆಳಿಗ್ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

raiway_stand_photo_1 raiway_stand_photo_2 raiway_stand_photo_3 raiway_stand_photo_4

ಇದೇ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ ಅವರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ನಿಲ್ದಾಣಗಳ ಸ್ಟೇಷನ್ ಮಾಸ್ಟರ್ ಅವರ ನೇತ್ರತ್ವದಲ್ಲಿ ಈ ಸ್ವಚ್ಛತಾ ಕಾರ್ಯ ನೆರವೇರಿತು

mayor_kankandy_ralway_1 mayor_kankandy_ralway_2 mayor_kankandy_ralway_3 mayor_kankandy_ralway_4mayor_kankandy_ralway_5

ನಗರದೆಲ್ಲೆಡೆ ಸ್ವಚ್ಚತಾ ಕಾರ್ಯ :

barathiya_seva_dal_12 bjp_clean_city_3 city_corpration_photo_8

city_corpration_photo_3a city_corpration_photo_4a city_corpration_photo_5a city_corpration_photo_6a city_corpration_photo_7a city_corpration_photo_9a

ಮಂಗಳೂರು : ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಪ್ರಧಾನಮಂತ್ರಿಯವರ ಸೂಚನೆಯಂತೆ ನಗರದೆಲ್ಲೆಡೆಯಲ್ಲಿ ಸ್ವಚ್ಚತಾ ಕಾರ್ಯ ಆರಂಭಗೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೇಯರ್ ಮಹಾಬಲ ಮಾರ್ಲ ಅವರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಮನಪಾ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲಿಕೆ ಕಚೇರಿ ಅವರಣ ಹಾಗೂ ಸುತ್ತ ಮುತ್ತಲಿನ ಸ್ಥಳಗಳನ್ನು ಶುಚಿತ್ವಗೊಳಿಸಿದರು.

ಬಿಜೈ ಬಂಟ್ಸ್ ಸಂಘದಿಂದ ಸ್ವಚ್ಚತಾ ಕಾರ್ಯ:

city_corpration_photo_11a city_corpration_photo_12a

city_corpration_photo_10

ಮಂಗಳೂರು : ಬಿಜೈ ಬಂಟ್ಸ್ ಸಂಘದ ಅಶ್ರಯದಲ್ಲಿ ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.

ರೋಟರಿ ಕ್ಲಬ್‌ನಿಂದ ಸ್ವಚ್ಛತಾ ಅಭಿಯಾನ :

ಮಂಗಳೂರು ಮಹಾನಗರ ಪಾಲಿಕೆ, ರೋಟರಿ ಕ್ಲಬ್ ಆಪ್ ಮಂಗಳೂರು ಸೆಂಟ್ರಲ್, ರೋಟರಿ ಕ್ಲಬ್ ಆಪ್ ಮಂಗಳೂರು ಸಿಟಿ ಇವರ ಜಂಟಿ ಅಶ್ರಯದಲ್ಲಿ ಪೊಪೈ ಫ್ರೌಢಶಾಲೆ ಉರ್ವಾ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.

city_corpration_photo_2a kadri_clean_city_5a

kadri_clean_city_1 kadri_clean_city_2 kadri_clean_city_3 kadri_clean_city_4

ರೋಟರಿ ಕ್ಲಬ್ ಮಂಗಳೂರು ಪೂರ್ವ, ಇನ್ನರ್‌ವೀಲ್ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ, ಸೋಮೇಶ್ವರ ಇವರ ಅಶ್ರಯದಲ್ಲಿ ಸ್ವಚ್ಛತಾ ಅಂದೋಲನ ನಡೆಯಿತು.

ದ.ಕ.ಬಿಜೆಪಿಯಿಂದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ :

ಮಂಗಳೂರು ; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅ.2ರ ಗಾಂಧಿ ಜಯಂತಿಯಿಂದ ಅ.11 ರ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದವರೆಗೆ ಮೊದಲ ಹಂತದ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ದ.ಕ.ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಕೇಂದ್ರ ಹಾಗೂ ಎಲ್ಲ ವಾರ್ಡ್‌ಗಳಲ್ಲಿ ಸ್ಚಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

bjp_clean_city_4 bjp_clean_city_5 bjp_clean_city_6 bjp_clean_city_7 bjp_clean_city_8 bjp_clean_city_9 bjp_clean_city_10 bjp_clean_city_11

bjp_clean_city_2a

Bjp_Rotary_Clincity_20 Bjp_Rotary_Clincity_21 Bjp_Rotary_Clincity_22 Bjp_Rotary_Clincity_23 Bjp_Rotary_Clincity_24 Bjp_Rotary_Clincity_25 Bjp_Rotary_Clincity_26 Bjp_Rotary_Clincity_27 Bjp_Rotary_Clincity_28 Bjp_Rotary_Clincity_29

ಮಂಗಳೂರಿನಲ್ಲಿ ನಗರದ ವೆನ್‌ಲಾಕ್ ಆಸ್ಪತ್ರೆ ಆವರಣದಲ್ಲಿ ನಡೆದ ಸ್ಚಚ್ಛತಾ ಕಾರ್ಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ, ಸುಧೀರ್ ಕಣ್ಣೂರ್, ಮಹಿಳಾ ಘಟಕದ ಸದಸ್ಯರು ಹಾಗೂ ಮತ್ತಿತರರು ಭಾಗವಹಿಸಿದ್ದರು. ವಾರ್ಡ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಈ ಸ್ವಚ್ಚತಾ ಕಾರ್ಯಕ್ಕೆ ಸಹಕರಿಸಿದರು.

Write A Comment