ಮಂಗಳೂರು : ಬಟ್ಟೆ ಅಂಗಡಿಗೆ ಬಂದಿದ್ದ ಮಗುವಿನ ಚಿನ್ನದ ಸರ ಅಪಹರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಮಹಿಳಾ ಕಳ್ಳರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ರವಿವಾರ ಮಿಲಾಗ್ರಿಸ್, ಹಂಪನಕಟ್ಟೆ ಬಳಿ ಬಟ್ಟೆ ಮಳಿಗೆಯಲ್ಲಿ ನಡೆದಿದೆ.
ರವಿವಾರ ಬಟ್ಟೆ ಖರೀದಿಗೆ ಬಂದಿದ್ದ ಮಹಿಳೆಯೋರ್ವರ ಮಗು ಅಲ್ಲೆ ಪಕ್ಕದಲ್ಲಿ ನಿಂತಿದ ಸಂದರ್ಭದಲ್ಲಿ ಬಟ್ಟೆಯಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು ಈ ಮಗುವಿಗೆ ತಿಂಡಿಯ ಅಮೀಷವೊಡ್ಡಿ ಮಗುವನ್ನು ಹೊರಗೆ ಕರೆದೊಯ್ದು ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾರೆ. ಈ ಸಂದರ್ಭದಲ್ಲಿ ಮಗು ಜೋರಾಗಿ ಆಳಲು ಪ್ರಾರಂಭಿಸಿದೆ. ಈ ಸಮಯದಲ್ಲಿ ಈ ಇಬ್ಬರು ಮಹಿಳೆಯರು ಮಗುವನ್ನು ಬಿಟ್ಟು ಓಡಾಲು ಪ್ರಯತ್ನಿಸಿದಾಗ ಸ್ಥಳೀಯರು ಹಿಡಿದು, ಅಲ್ಲೆ ಪಕ್ಕದಲ್ಲಿ ಕರ್ತವ್ಯದಲ್ಲಿದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ವಿಚಾರಣೆ ಸಂದರ್ಭ ಮಗುವಿನ ಕುತ್ತಿಗೆಯಲ್ಲಿ ಚಿನ್ನದ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮಗುವನ್ನು ವಿಚಾರಿಸಿದಾಗ ಮಗು ಅ ಕಳ್ಳ ಮಹಿಳೆಯರನ್ನು ಗುರುತಿಸಿದ್ದು, ತನ್ನ ಚಿನ್ನದ ಸರವನ್ನು ಇವರೇ ಕದ್ದಿರುವುದಾಗಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ವಿಚಾರಣೆಗೊಳಪಡಿಸಲು ಈ ಕಳ್ಳಿಯರನ್ನು ಬಂದರು ಠಾಣೆಗೆ ಹಸ್ತಾಂತರಿಸಲಾಯಿತು. ತನಿಖೆಯ ನಂತರ ಈ ಇಬ್ಬರು ಈಗಾಗಲೇ ಹಲವಾರು ಕಡೆಗಳಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ, ಚಿನ್ನಾಭರಣಗಳನ್ನು ಲೂಟಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
