ವಿಶೇಷ ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್
ಮಂಗಳೂರು : ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆ.ಎಂ.ಸಿ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯ.ಇದೀಗ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ ಕೆ.ಎಂ.ಸಿ ಅತ್ಯಂತ ಬೃಹತ್ ಪ್ರಮಾಣದಲ್ಲಿ ಹ್ಯೂಮೆನ್ ಹಾರ್ಟ್ ಬೀಟ್ ಸಿಮ್ಯುಲೇಷನ್‌ನ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಈ ಮೂಲಕ ‘ಹೃದಯ ದಿನದ ಓಟ” ಕಾರ್ಯಕ್ರಮ ವಿಶ್ವ ದಾಖಲೆ ಮೂಲಕ ವಿಶ್ವದ ಗಮನ ಸೇಳೆದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಕೆ.ಎಂ.ಸಿ. ವತಿಯಿಂದ ನಡೆದ ‘ಹೃದಯ ದಿನದ ಓಟ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಉನ್ನತ ಕಾಲೇಜಿನ ವಿದ್ಯಾರ್ಥಿಗಳು ಅತೀ ಹೆಚ್ಚು ಮಾದಕ ವ್ಯಸನಿಗಳಗುತ್ತಿದ್ದಾರೆ. ಅವರಿಗೆ ಇದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೆ.ಎಂ.ಸಿಯಂತಹ ಸಂಸ್ಥೆಗಳು ಮಾಡಬೇಕು ಎಂದು ನಳಿನ್ ಕುಮಾರ್ ಸಲಹೆ ನೀಡಿದರು.
ದಕ್ಷಿಣ ಭಾರತದಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಕ್ಲಿಫೋರ್ಡ್ ಜೋಶುವ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆಎಂಸಿ ಹಾಸ್ಪಿಟಲ್ಸ್‌ನ ವೈದ್ಯಕೀಯ ಅಧೀಕ್ಷಕರು ಮಾತನಾಡಿ, ಪ್ರಸಕ್ತ ವರ್ಷ ನಾವು ಅತ್ಯಂತ ಬೃಹತ್ ಪ್ರಮಾಣದಲ್ಲಿ ಹ್ಯೂಮೆನ್ ಹಾರ್ಟ್ ಬೀಟ್ ಸಿಮ್ಯುಲೇಷನ್‌ನ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ ಎಂದರು. ವಿಶ್ವಹೃದಯ ದಿನದ ಹಿನ್ನೆಲೆಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳನ್ನು ಆರಂಭಿಸಲಾಗಿದ್ದು, ಈ ವಿಶೇಷ ಹೃದಯ ತಪಾಸಣೆ ಪ್ಯಾಕೇಜ್ ಮತ್ತು ಪ್ಯಾಕೇಜ್‌ನಲ್ಲಿನ ಪ್ರತಿ ಪರೀಕ್ಷೆಗಳ ಪ್ರಾಮುಖ್ಯತೆ ಕುರಿತು ಅವರು ವಿವರಿಸಿದರು. ರಿಯಾಯಿತಿಯದರ 1800 ರೂ.ಗಳಲ್ಲಿ (2800 ರೂ. ಸಾಮಾನ್ಯದರ) ನೀಡಲಾಗುತ್ತಿದೆ.
ಅಲ್ಲದೆ ಹಿರಿಯ ನಾಗರಿಕರಿಗೆ ವಿಶೇಷ ದರ 1500 ರೂ.ಗಳಲ್ಲಿ ನೀಡಲಾಗುತ್ತಿರುವ ಪ್ಯಾಕೇಜ್ 31,ಅಕ್ಟೋಬರ್ 2014ರವರೆಗೆ ಲಭ್ಯವಿರುತ್ತದೆ. ಹೆಚ್ಚಿನ ಚಿಕಿತ್ಸೆ ಗಳಾದ ಏಂಜಿಯೋಗ್ರಾಮ್, ಏಂಜಿಯೋಪ್ಲಾಸ್ಟಿ ಮತ್ತು ಸಿಎಬಿಜಿ ಕ್ರಮಗಳ ಅಗತ್ಯವಿರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಓಟದಲ್ಲಿ ಪಾಲ್ಗೊಂಡವರಿಗೆ, ಅತ್ಯುತ್ತಮ ಕಾರ್ಪೊರೆಟ್ ಭಾಗವಹಿಸುವಿಕೆ, ಅತ್ಯುತ್ತಮ ಸಾಂಸ್ಥಿಕ ಭಾಗವಹಿಸುವಿಕೆ, ಅತ್ಯುತ್ತಮ ಮಾಹಿತಿ ಫಲಕ, ಅತ್ಯುತ್ತಮ ಘೋಷಣೆ ಕೂಗುವುದು, ಅತ್ಯಂತ ಚಿಕ್ಕ ವಯಸ್ಸಿನ ಹಾಗೂ ಹಿರಿಯ ವಯಸ್ಸಿನ ಓಟಗಾರರಿಗೆ ಅತಿಥಿಗಳು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.
ಅಲ್ಲದೇ ವಿಶ್ವ ಹೃದಯ ದಿನದ ಅಂಗವಾಗಿ ಸೆಪ್ಟೆಂಬರ್ 20, 2014ರಂದು ಶಾಲಾ ಮಕ್ಕಳಿಗಾಗಿ ಕೆಎಂಸಿ ಹಾಸ್ಪಿಟಲ್ಸ್ ಅತ್ತಾವರದಲ್ಲಿ ನಡೆಸಲಾದ ಚಿತ್ರರಚನಾ ಸ್ಪರ್ಧೆಯ ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಈ ಸ್ಫರ್ಧೆಯಲ್ಲಿ ನಗರದ 363ವಿದ್ಯಾರ್ಥಿಗಳು ಭಾಗವಹಿಸಿದ್ದು ಇವರಲ್ಲಿ ಆಸ್ಪತ್ರೆಗೆ ದಾಖಲಾಗಿರುವ 35 ಮಕ್ಕಳು ಸಹ ಸೇರಿದ್ದರು.
ಸಮಾರಂಭದಲ್ಲಿ ಕೆ.ಎಂ.ಸಿ. ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ| ಆನಂದ್ ವೇಣುಗೋಪಾಲ್, ಕೆಎಂಸಿ ಹಾಸ್ಪಿಟಲ್‌ನ ಹೃದಯರೋಗ ಶಸ್ತ್ರಚಿಕಿತ್ಸಾತಜ್ಞರಾದ ಡಾ|| ನರಸಿಂಹ ಪೈ, ಕೆಎಂಸಿ ಹಾಸ್ಪಿಟಲ್ಸ್‌ನ ಘಟಕದ ಮುಖ್ಯಸ್ಥ ಸಗೀರ್ ಸಿದ್ಧಿಕಿ, ಕೆಎಂಸಿ ಹಾಸ್ಪಿಟಲ್ಸ್‌ನ ಹಿರಿಯ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ|| ಪದ್ಮನಾಭ ಕಾಮತ್, ಡಾ| ನರಸಿಂಹ ಪೈ, ಡಾ| ಆರ್.ಎಲ್. ಕಾಮತ್, ಡಾ| ಸುಜಿತ್ ಸುವರ್ಣ, ಡಾ| ಮನೀಶ್ ರೈ, ಎಂ.ಆರ್.ಪಿ.ಎಲ್. ಸಂಸ್ಥೆಯ ಅಧಿಕಾರಿಗಳು ಹಾಗೂ ಮಣಿಪಾಲ್ ಸಮೂಹದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಶೇಷ ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್














































