ಕರಾವಳಿ

ಕಾಂಗ್ರೆಸ್ ಬಡವರ ಹಾಗೂ ಶೋಷಿತರ ಪರವಾದ ಸರಕಾರ: ಬೆಣ್ಣೆಕುದ್ರು ಗುರುಪೀಠ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ

Pinterest LinkedIn Tumblr

C.M. Siddaramayya_ inaugurates_ Gurupeeta (13)

ಉಡುಪಿ: ಮೊಗವೀರ ಸಮಾಜದವರು ಶ್ರಮಜೀವಿಗಳಾಗಿದ್ದು ಮೀನುಗಾರಿಕೆ ವ್ರತ್ತಿ ಮೂಲಕ ಜೀವನ ನಡೆಸುವವರಾಗಿದ್ದಾರೆ, ಇಂದು ಅವರ ಕುಲಕಸುಬಗಳಿಗೆ ಇತರರೂ ಬರುತ್ತಿದ್ದು , ಮೊಗವೀರರು ಕೇವಲ ಮೀನುಗಾರಿಕೆಯನು ಮಾತ್ರವೇ ಸರ್ವಕಾಲಕ್ಕೂ ನಂಬಿಕೊಳ್ಳುವುದು ಸೂಕ್ತವಲ್ಲ ಬದಲಾಗಿ ಮಕ್ಕಳನ್ನು ಉತ್ತಮ ಶಿಕ್ಷವಂತರನ್ನಾಗಿಸಿ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುವ ಮಾರ್ಗ ಕಲ್ಪಿಸಬೇಕು, ಮಕ್ಕಳು ವಿದ್ಯಾವಂತರಾಗಿ ಸಮಾಜ ಆರ್ಥಿಕವಾಗಿ ಮುಂದುವರಿದಾಗ ಮಾತ್ರವೇ ಜಾತ್ಯಾತೀತತೆ ನಿರ್ಮೂಲನೆ ಸಾಧ್ಯ. ಕಾಂಗ್ರೆಸ್ ಸರಕಾರ ಬಡವರ ಹಾಗೂ ಶೋಷಿತರ ಪರವಾಗಿದ್ದು ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

C.M. Siddaramayya_ inaugurates_ Gurupeeta (39)

C.M. Siddaramayya_ inaugurates_ Gurupeeta (43)

C.M. Siddaramayya_ inaugurates_ Gurupeeta (36)

C.M. Siddaramayya_ inaugurates_ Gurupeeta (34)

C.M. Siddaramayya_ inaugurates_ Gurupeeta (35) C.M. Siddaramayya_ inaugurates_ Gurupeeta (29)

C.M. Siddaramayya_ inaugurates_ Gurupeeta (30) C.M. Siddaramayya_ inaugurates_ Gurupeeta (28)

ಅವರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ದ.ಕ. ಮೊಗವೀರ ಮಹಾಜನ ಸಂಘ(ರಿ.) ಉಚ್ಚಿಲ, ಮೊಗವೀರ ಸಂಯುಕ್ತ ಸಭಾ ಬೆಣ್ಣೆಕುದ್ರು ಬಾರ್ಕೂರು, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾಸಂಘ ಕುಂದಾಪುರ-ಮುಂಬೈ, ಮೊಗವೀರ ಯುವಸಂಘಟನೆ (ರಿ.) ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಮೊಗವೀರರ ಕುಲದೇವರು ಬೆಣ್ಣೆಕುದ್ರು ಕುಲಮಹಾಸ್ತ್ರಿ ಅಮ್ಮನವರ ದೇವಸ್ಥಾನದಲ್ಲಿ ನೂತನವಾಗಿ ಆರಂಭಗೊಂಡ `ಗುರುಪೀಠ’ ಉದ್ಘಾಟನಾ ಸಮಾರಂಭದ ಬಳಿಕ ಬ್ರಹ್ಮಾವರ ಗಾಂಧೀ ಮೈದಾನದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವಸಂಘಟನೆ ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎಲ್ಲಾ ಸಮಾಜದವರಿಗೆ ನೀಡಲಾದ ಆರೋಗ್ಯ ಸುರಕ್ಷಾ ಕಾರ್ಡುಗಳಾ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮಲ್ಲಿ ಜಾತ್ಯಾತೀತತೆ ಜಾಸ್ಥಿಯಾಗಿದ್ದು ಶತಮಾನಗಳಿಂದಲೂ ಅದನ್ನು ನಿವಾರಿಸುವ ಕುರಿತು ಹಲವು ದಾರ್ಶನಿಕರು, ಸರ್ವಜ್ನರು, ಸಂತರು ಪ್ರಯತ್ನಿಸಿದ್ದಾರೆ ಆದರೇ ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ, ಇಅದರ ನಿವಾರಣೆಗೆ ಜಾತಿ ಜಾತಿಗಳ ನಡುವೆ ಸಾಮಾಜಿಕ ಆರ್ಥಿಕ ಸಮಾನತೆ ಅಗತ್ಯವಾಗಿದೆ. ನಮ್ಮಲ್ಲಿ ಜಾತ್ಯಾತೀತ ವ್ಯವಸ್ಥೆಗೆ ನೀರುಣಿಸಿ ಪೋಷಿಸುವ ಹಲವು ಪಟ್ಟಬದ್ರ ಹಿತಾಸಕ್ತಿಗಳಿದ್ದು ಶಿಕ್ಷಣದ ಮೂಲಕ ಇದರ ಕಡಿವಾಣ ಸಾಧ್ಯವಿದೆ ಎಂದರು.

C.M. Siddaramayya_ inaugurates_ Gurupeeta (40) C.M. Siddaramayya_ inaugurates_ Gurupeeta (41) C.M. Siddaramayya_ inaugurates_ Gurupeeta (42) C.M. Siddaramayya_ inaugurates_ Gurupeeta (26) C.M. Siddaramayya_ inaugurates_ Gurupeeta (25) C.M. Siddaramayya_ inaugurates_ Gurupeeta (24) C.M. Siddaramayya_ inaugurates_ Gurupeeta (23) C.M. Siddaramayya_ inaugurates_ Gurupeeta (22) C.M. Siddaramayya_ inaugurates_ Gurupeeta (21) C.M. Siddaramayya_ inaugurates_ Gurupeeta (20) C.M. Siddaramayya_ inaugurates_ Gurupeeta (18) C.M. Siddaramayya_ inaugurates_ Gurupeeta (19) C.M. Siddaramayya_ inaugurates_ Gurupeeta (10) C.M. Siddaramayya_ inaugurates_ Gurupeeta (17) C.M. Siddaramayya_ inaugurates_ Gurupeeta (14) C.M. Siddaramayya_ inaugurates_ Gurupeeta (15) C.M. Siddaramayya_ inaugurates_ Gurupeeta (16)

ಮೂಡನಂಬಿಕೆ, ಕಂದಾಚಾರವನ್ನು ಪ್ರೋತ್ಸಾಹಿಸಿದರೇ ಗುರುಪೀಠಕ್ಕೆ ಬೆಲೆಯಿಲ್ಲ ಬದಲಾಗಿ ಶಿಕ್ಷಣ ಮತ್ತು ಸಮಾನತೆಯನ್ನು ಪ್ರತಿಪಾದಿಸಿದಲ್ಲಿ ಗುರುಪೀಠ ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಸಾಮಾಜಿಗ ಜಾಗ್ರತಿ ಮೂಲಕ ಸಂಘಟಿತರಾಗಬೇಕು ಎಂದರು.
ದೇಶದ ಸಂಪತ್ತು ಎಲ್ಲರಿಗೂ ಹಂಚ್ಕೆಯಾಗಬೇಕು, ಗಳಿಸಿದ ಸಂಪತ್ತನ್ನು ಸಮಾಜದ ಒಳ್ಳೆಯ ಕಾರ್ಯಕ್ಕಾಗಿ ವಿನಿಯೋಗಿಸುವ ಭಾವನೆಗಳು ಬೇಕು ಎಂದ ಅವರು ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಮೂಲಕ ಪರಿಹಾರ ಕಂದುಕೊಳ್ಳಲು ಸಾಧ್ಯವಿದೆ ಎಂದರು.

ಮೀನುಗಾರ ಸತ್ತರೇ ಸದ್ಯ 1 ಲಕ್ಷ ಪರಿಹಾರ ನೀಡುತ್ತಿದ್ದು ಅದನ್ನು ಹೆಚ್ಚುಗೊಳಿಸುವ ಭರವಸೆ ನೀಡಿದ ಮುಖ್ಯಮಂತ್ರಿಗಳು ಮೀನುಗಾರರು, ಜನಪ್ರತಿನಿಧಿಗಳು ಹಾಗೂ ಈ ಭಾಗದ ಮುಖಂಡರ ಸಭೆಯನ್ನು ಶೀಘ್ರವೇ ಕರೆದು ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಈ ಸಂದರ್ಭ ಹೇಳಿದರು. ಅಲ್ಲದೇ ಸುದ್ದಿಗಾರರಿಗೆ ರೆಅತಿಕ್ರಿಇಸಿದ ಅವರು ಜಯಲಲಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಗಮನವಹಿಸುವುದಾಗಿ ತಿಳಿಸಿದರು.

C.M. Siddaramayya_ inaugurates_ Gurupeeta (8) C.M. Siddaramayya_ inaugurates_ Gurupeeta (7) C.M. Siddaramayya_ inaugurates_ Gurupeeta (9) C.M. Siddaramayya_ inaugurates_ Gurupeeta (6) C.M. Siddaramayya_ inaugurates_ Gurupeeta (5) C.M. Siddaramayya_ inaugurates_ Gurupeeta (4) C.M. Siddaramayya_ inaugurates_ Gurupeeta (2) C.M. Siddaramayya_ inaugurates_ Gurupeeta (3) C.M. Siddaramayya_ inaugurates_ Gurupeeta (1) C.M. Siddaramayya_ inaugurates_ Gurupeeta (27) C.M. Siddaramayya_ inaugurates_ Gurupeeta (31) C.M. Siddaramayya_ inaugurates_ Gurupeeta (32) C.M. Siddaramayya_ inaugurates_ Gurupeeta (33) C.M. Siddaramayya_ inaugurates_ Gurupeeta (37) C.M. Siddaramayya_ inaugurates_ Gurupeeta (38)

ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆರೋಗ್ಯ ಸುರಕ್ಷಾ ಕರ್ಡುಗಳನ್ನು ಸಚಿವ ವಿನಯಕುಮಾರ್ ಸೊರಕೆ ವಿತರಿಸಿ, ವಿಮಾ ಚೆಕ್ ವಿತರಣೆಯನ್ನು ಸಂಸದೆ ಶೋಭಾ ಕರಂದ್ಲಾಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿ ಡಾ| ರಾಮದಾಸ್ ಪೈ, ಸಹಕುಲಾಧಿಪತಿ ಎಚ್.ಎಸ್. ಬಲ್ಲಾಳ್, ಮೀನುಗಾರಿಕ ಸಚಿವ ಅಭಯಚಂದ್ರ ಜೈನ್, ಮುಖ್ಯಮಂತ್ರಿ ಕಾರ್ಯದರ್ಶಿ ಶ್ರೀನಿವಾಸ್, ಶಾಸಕರಾದ ಮೊಯುದ್ದೀನ್ ಬಾವಾ, ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ವಿಧಾನಪರಿಷತ್ ಸದಸ್ಯರಾದ ಕೋಟ ಶ್ರ್‍ಈನಿವಾಸ ಪೂಜಾರಿ, ಐವನ್ ಡಿಸೋಜಾ, ಉಡುಪಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಯು.ಆರ್. ಸಭಾಪತಿ ಜಿ.ಪಂ. ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ಉಪಾಧ್ಯಕ್ಷ ಪ್ರಕಾಶ ಮೆಂಡನ್, ಯಶಪಾಲ್ ಸುವರ್ಣ ಮೊದಲಾದವರಿದ್ದರು.

Write A Comment