ಕರಾವಳಿ

ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಇದರ ಜಂಟಿ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರ.

Pinterest LinkedIn Tumblr

bntwl_low_workshop_1

ಬಂಟ್ವಾಳ : ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ಸಂವಿಧಾನ ಮೂಲಕ ಹಿಂದುಳಿದ ಸಮಾಜವನ್ನು ಮೇಲೆತ್ತುವ ಅವಕಾಶವನ್ನು ಮಾಡಿಕೊಡಲಾಗಿದೆ. . ಇಂತಹ ಕಾರ್ಯಕ್ರಮಗಳ ಮೂಲಕ ನೀಡಲಾದ ಕಾನೂನು ಮಾಹಿತಿಯನ್ನು ಸಮುದಾಯದ ಎಲ್ಲಾ ಜನರಿಗೂ ತಿಳಿಸಿದರೆ ಕಾರ್ಯಕ್ರಮಗಳು ಸಾರ್ಥಕತೆ ಪಡೆಯುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶ ಜಯಪ್ರಕಾಶ್ ಡಿ.ಆರ್ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಇದರ ಜಂಟಿ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಲ್ಲಾ ಸಂಘಟನೆಗಳ ಸಹಭಾಗಿತ್ವದಲ್ಲಿ ಶುಕ್ರವಾರ ಬಿ.ಸಿ.ರೋಡಿನ ಎಸ್‌ಜೆ‌ಎಸ್‌ಆರ್‌ವೈ ಸಭಾಂಗಣದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಪುರಸಭಾಧ್ಯಕ್ಷೆ ವಸಂತಿ ಸಿ.ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶೀ ಯಂ.ಚಂದ್ರಶೇಖರ ರಾವ್, ಸಹಾಯಕ ಸರ್ಕಾರಿ ಅಭಿಯೋಜಕಿ ಅರ್ಚನಾ ಪ್ರಸಾದ್, ತಹಸೀಲ್ದಾರ್ ಮಲ್ಲೇಸ್ವಾಮೀ, ಪೊಲೀಸ್ ವೃತ್ತ ನಿರೀಕ್ಷಕ ಬೆಳಿಯಪ್ಪ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ರಮೇಶ್ ಉಪಾಧ್ಯಾಯ, ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ;ಇನ ದೌರ್ಜನ್ಯ ತಡೆ ಕಾಯ್ದೆ ಮತ್ತು ಕೆಲವು ಭೂಮಿಗಳ ಆಸ್ತಿ ಪರಾಭಾರೆ ನಿಷೇದ ಕಾಯ್ದೆಯ ಬಗ್ಗೆ ವಕೀಲ ಪ್ರಕಾಶ್ ನಾರಾಯಣ ಮಾಹಿತಿ ನೀಡಿದರು. ಸಂಜೀವ ಚೆಂಡ್ತಿಮಾರ್ ಸ್ವಾಗತಿಸಿದರು.ಚಂದ್ರಶೇಖರ ಪುಂಚಮೆ ಪ್ರಸ್ತಾವಿಸಿದರು.ಕೇಶವಿ ಗಿರೀಶ್ ವಂದಿಸಿದರು. ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

Write A Comment