ಕರಾವಳಿ

ಭಯೋತ್ಪಾದನೆ ಹೆಸರಿನಲ್ಲಿ ಅಮಾಯಕರ ವಿರುದ್ಧ ಸುಳ್ಳು ಮೊಕದ್ದಮೆ : ರಾಜಕೀಯ ಪಿತೂರಿ ವಿರುದ್ಧ ಪ್ರಬಲ ಹೋರಾಟ ಅಗತ್ಯ : ಅಜಿತ್ ಸಾಹಿ

Pinterest LinkedIn Tumblr

jamta_islam_shanthinilya_2

ಮಂಗಳೂರು, ಸೆ.19: ದೇಶಾದ್ಯಂತ ಭಯೋತ್ಪಾದನೆಯ ಹೆಸರಿನಲ್ಲಿ ನಡೆಯುತ್ತಿರುವ ಅಮಾಯಕರ ಬಂಧನದ ವಿರುದ್ಧ ಪ್ರಬಲ ರಾಜಕೀಯ ಚಳವಳಿ ಮೂಡಿ ಬರಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ, ತೆಹಲ್ಕಾ ಪತ್ರಿಕೆಯ ರಾಜಕೀಯ ವಿಶ್ಲೇಷಕ ಅಜಿತ್ ಸಾಹಿ ಅಭಿಪ್ರಾಯಿಸಿದ್ದಾರೆ. ಅವರು ನಗರದ ಬಲ್ಮಠದಲ್ಲಿರುವ ಶಾಂತಿ ನಿಲಯ ಸಭಾಂಗಣದಲ್ಲಿ ದ.ಕ. ಜಿಲ್ಲಾ ಜಮಾ‌ಅತೆ ಇಸ್ಲಾಮೀ ಹಿಂದ್‌ನ ಯೂತ್ ವಿಂಗ್ ಆಯೋಜಿಸಿದ್ದ ‘ಭಯೋತ್ಪಾದನಾ ರಾಜಕೀಯ: ಸುಳ್ಳು ಮತ್ತು ವಾಸ್ತವ’ ಎಂಬ ವಿಷಯದ ಕುರಿತು ಸಂವಾದ ಹಾಗೂ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

jamta_islam_shanthinilya_1

ಕಳೆದ ಹಲವು ವರ್ಷಗಳಲ್ಲಿ ದೇಶದ ಕೇರಳ, ತಮಿಳು ನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಝಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ನೂರಾರು ಮಂದಿ ಅಮಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಜೈಲಿಗೆ ತಳ್ಳಲಾಗಿದೆ. ದೇಶಾ ದ್ಯಂತ ಭಯೋತ್ಪಾದನೆಯ ಹೆಸರಿನಲ್ಲಿ ರಾಜಕೀಯ ನಡೆ ಸಲಾಗುತ್ತಿದೆ. ಭಯೋತ್ಪಾದನೆ ಹೆಸರಿನಲ್ಲಿ ಪೂರ್ವಾ ಗ್ರಹಪೀಡಿತ ಪೊಲೀಸ್ ಅಧಿಕಾರಿಗಳು ಹಾಗೂ ರಾಜ ಕಾರಣಿಗಳಿಂದಾಗಿ ಮುಸ್ಲಿಮರು, ದಲಿತರು, ಆದಿವಾಸಿಗಳು ಬಂಧನಕ್ಕೊಳಗಾಗುತ್ತಿದ್ದಾರೆ. ಅದರಲ್ಲೂ ಮುಸ್ಲಿಮರನ್ನು ಪ್ರಮುಖವಾಗಿ ಗುರಿಮಾಡಲಾಗಿದೆ. ಇದರ ಹಿಂದೆ ರಾಜ ಕೀಯ ಹಿತಾಸಕ್ತಿಯೂ ಇದೆ. ಹೆಚ್ಚಿನ ಮಾಧ್ಯಮಗಳು ಉದ್ಯಮಶಾಹಿಗಳ ಹಿಡಿತದಲ್ಲಿವೆ. ಅವು ಸರಕಾರ, ಪೊಲೀಸರ ಮಾತುಗಳಿಗೆ ಹೆಚ್ಚು ಒತ್ತು ನೀಡುತ್ತಿವೆ ಎಂದು ಅಜಿತ್ ಸಾಹಿ ತಿಳಿಸಿದರು.

jamta_islam_shanthinilya_3

ದೇಶದಲ್ಲಿ ಭಯೋತ್ಪಾದನೆಯ ವಿಷಯ ವಾಸ್ತವಕ್ಕಿಂತ ಹೆಚ್ಚಾಗಿ ವೈಭವೀಕರಿಸಲ್ಪಡುತ್ತಿದೆ. ಇದರ ಹಿಂದೆ ಪೂರ್ವಾ ಗ್ರಹಪೀಡಿತ ಅಧಿಕಾರಿವರ್ಗ, ಮೇಲ್ವರ್ಗದ ಜನರ ರಾಜಕೀಯ ನೀತಿ ಹಾಗೂ ಸ್ವಹಿತಾಸಕ್ತಿಯ ರಾಜಕೀಯ ಅಡಗಿದೆ. ಆಡಳಿತ ನಡೆಸುವ ಅಧಿಕಾರಿಗಳ ಈ ರೀತಿಯ ಮನೋಭಾವದಿಂದ ದೇಶದಲ್ಲಿ ಪೊಲೀಸರೇ ಅತ್ಯಂತ ದೊಡ್ಡ ಭಯೋತ್ಪಾದಕರಾಗಿದ್ದಾರೆ ಎಂದವರು ವಿಷಾದ ವ್ಯಕ್ತಪಡಿಸಿದರು.ದೇಶದ ಆಂತರಿಕ ಭದ್ರತೆಯ ಹೆಸರಿನಲ್ಲಿ ಬೃಹತ್ ಪ್ರಮಾಣದ ಆಯುಧಗಳನ್ನು ಖರೀದಿಸಲು, ಬಂದೂಕು, ಟ್ಯಾಂಕರ್‌ಗಳನ್ನು ಖರೀದಿಸಲು, ಹೊಸ ಶಾಸನ ಜಾರಿ ಮಾಡಲು, ಹಿಂದೂ-ಮುಸ್ಲಿಮ್ ಭಯೋತ್ಪಾದನೆಯೆಂಬ ರಾಜಕಾರಣವನ್ನು ಬಳಸಲಾಗುತ್ತಿದೆ ಎಂದು ಸಾಹಿ ತಿಳಿಸಿದರು. ದೇಶದಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ಪಿತೂರಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಅಲ್ಲಲ್ಲಿ ನಕಲಿ ಎನ್‌ಕೌಂಟರ್, ಅಮಾಯಕರ ಬಂಧನ, ಸಿಮಿ ಸಂಘಟನೆಯನ್ನು ಪದೇಪದೇ ನಿಷೇಧಿಸುವಂತಹ ರಾಜಕೀಯ ಪ್ರಹಸನಗಳು ನಡೆಯುತ್ತಿವೆ. ಕೇರಳದ ಅಬ್ದುನ್ನಾಸರ್ ಮ‌ಅದನಿ ಹಿಂದಿನ ಪ್ರಕರಣಗಳಲ್ಲಿ ಖುಲಾಸೆಗೊಂಡ ಮತ್ತೆ ಅವರ ಮೇಲೆ ಬೆಂಗಳೂರಿನ ಬಾಂಬ್ ಸ್ಫೋಟದ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ. ಈ ರೀತಿಯ ಪಿತೂರಿಯ ವಿರುದ್ಧ ದೇಶದ ಸಂವಿಧಾನದ ಆಧಾರದಲ್ಲಿ ಪ್ರಜಾಪ್ರಭುತ್ವ ಮಾದರಿಯ ರಾಜಕೀಯ ಜಾಗೃತಿ, ಹೋರಾಟ ನಡೆಯಬೇ ಕಾಗಿದೆ ಎಂದವರು ಅಭಿಪ್ರಾಯಿಸಿದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಎಸ್‌ಐ‌ಒ ರಾಜ್ಯಾಧ್ಯಕ್ಷ ತೌಸಿಫ್ ಅಹ್ಮದ್ ಮಡಿಕೇರಿ, ಎಪಿಸಿ‌ಆರ್‌ನ ರಾಜ್ಯ ಸಂಚಾಲಕ ಇರ್ಶಾದ್ ಅಹ್ಮ್ಮದ್ ದೇಸಾಯಿ, ಎಸ್‌ಐ‌ಒ ರಾಜ್ಯಾಧ್ಯಕ್ಷ ತೌಸಿಫ್ ಅಹ್ಮದ್ ಮಡಿಕೇರಿ, ಜಮಾ‌ಅತೆ ಇಸ್ಲಾಮೀ ಹಿಂದ್‌ನ ವಲಯ ಸಂಚಾಲಕ ಅಬ್ದುಸ್ಸಲಾಮ್ ಯು., ಜಿಲ್ಲಾ ಸಂಚಾಲಕ ಇಲ್ಯಾಸ್ ಇಸ್ಮಾಯೀಲ್, ಯೂತ್‌ವಿಂಗ್ ಜಿಲ್ಲಾ ಸಂಚಾಲಕ ಮುಹಮ್ಮದ್ ಮುಹ್ಸಿನ್, ಎಸ್‌ಐ‌ಒ ಜಿಲ್ಲಾ ಸಂಚಾಲಕ ಅಸ್ಕಾನ್ ಶೇಕ್ ಉಪಸ್ಥಿತರಿದ್ದರು.
ಆಸಿಫ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ಲತೀಫ್ ಆಲಿಯಾ ಕಿರಾ‌ಅತ್ ಪಠಿಸಿದರು. ಇಬ್ರಾಹೀಂ ಸಯಿದ್ ಪಕ್ಕಲಡ್ಕ ಸ್ವಾಗತಿಸಿದರು.

Write A Comment