ಮಂಗಳೂರು,ಸೆ.18: ಮಂಗಳೂರು ಆಕಾಶವಾಣಿಯ ಮಾಲತಿ ಆರ್ ಭಟ್ ಅವರು ಹಿಂದಿ ರೇಡಿಯೋ ನಾಟಕ ವಿಷಯದ ಕುರಿತು ಉಡುಪಿಯ ಶ್ರೀ ಪೂರ್ಣಪ್ರಜ್ನ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಾಧವಿ ಎಸ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ ಮಹಾಪ್ರಬಂಧಕ್ಕೆ ಮದ್ರಾಸಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವು ಪಿ ಎಚ್ ಡಿ ಪದವಿ ನೀಡಿ ಗೌರವಿಸಿದೆ.
ಕಳೆದ 25 ವರ್ಷಗಳಿಂದ ಮಂಗಳೂರು ಆಕಾಶವಾಣಿಯ ಹಿಂದಿ ವಿಭಾಗದಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೇದಮೂರ್ತಿ ಪಾಂಡೇಲು ಶಂಕರನಾರಾಯಣ ಭಟ್ಟರ ಮಗಳು ಹಾಗೂ ಶಾಂತಿಮೂಲೆ ನಾರಾಯಣ ಭಟ್ಟರ ಸೊಸೆಯಾಗಿರುತ್ತಾರೆ.
