ಅಂತರಾಷ್ಟ್ರೀಯ

11 ದಿನ ನಗುವ ಹಾಗಿಲ್ಲ, ಮದ್ಯ ಸೇವನೆ, ಶಾಪಿಂಗ್ ಎಲ್ಲಾ‌ ಇಲ್ಲಿ ನಿಷಿದ್ಧ..!

Pinterest LinkedIn Tumblr

ಸಿಯೋಲ್: ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಸ್ತುತ ಆಳ್ವಿಕೆ ನಡೆಸುತ್ತಿರುವ ಕಿಮ್ ಜಾಂಗ್ ಉನ್ ಸರ್ಕಾರವು 11 ದಿನಗಳ ಶೋಕಾಚರಣೆಗೆ ಆದೇಶ ನೀಡಿದೆ.

ಕಿಮ್ ಜಾಂಗ್ ಇಲ್ 1994 ರಿಂದ 2011ರ ಡಿಸೆಂಬರ್ 17ರವೆಗೆ ಆಳ್ವಿಕೆ ನಡೆಸಿದ್ದರು. ನಂತರ ಅವರ ಪುತ್ರ ಕಿಮ್ ಜಾಂಗ್ ಉನ್ ಆಳ್ವಿಕೆ ಮುಂದುವರೆಸುತ್ತಿದ್ದು, ತಮ್ಮ ತಂದೆಗೆ ಸ್ಮರಣಾರ್ಥ 11 ದಿನಗಳವರೆಗೆ ಯಾವುದೇ ಸಂತೋಷ ವ್ಯಕ್ತಪಡಿಸದಂತೆ ಸಾರ್ವಜನಿಕರಿಗೆ ಆದೇಶ ನೀಡಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.

ಈ ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿ ಉತ್ತರ ಕೊರಿಯಾದ ಪ್ರಜೆಗಳು ಮದ್ಯಪಾನ ಮಾಡುವುದಕ್ಕೆ, ಶಾಪಿಂಗ್ ಮಾಡೋದಕ್ಕೆ ಅವಕಾಶವಿಲ್ಲ. ಮಾತ್ರವಲ್ಲ ಯಾವ ಕಾರಣಕ್ಕೂ ಕೂಡ ನಗುವುದಕ್ಕೂ ಅವಕಾಶವಿಲ್ಲ ಎಂದು ಖಡಕ್ ಆದೇಶ ನೀಡಲಾಗಿದೆ.

ರೇಡಿಯೊ ಫ್ರೀ ಏಷ್ಯಾದೊಂದಿಗೆ ಮಾತನಾಡಿದ ನಾಗರಿಕರೊಬ್ಬರು ‘‘ಹಿಂದೆ ಶೋಕಾಚರಣೆಯ ಸಮಯದಲ್ಲಿ ಮದ್ಯಪಾನ ಅಥವಾ ಅಮಲಿನಲ್ಲಿ ಸಿಕ್ಕಿಬಿದ್ದ ಅನೇಕ ಜನರನ್ನು ಬಂಧಿಸಲಾಗಿತ್ತು. ಅವರನ್ನು ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಿ ಕರೆದೊಯ್ಯಲಾಗಿತ್ತು. ಮತ್ತೆಂದೂ ಅವರು ಕಾಣಸಿಗಲಿಲ್ಲ’’ ಎಂದು ಮಾಹಿತಿ ನೀಡಿದ್ದಾರೆ.

Comments are closed.