ನರ್ಸ್ ಒಬ್ಬರು ಆಸ್ಪತ್ರೆಯ ಶೌಚಾಲಯದಲ್ಲಿ ತನ್ನ ಪಿಪಿಇ ಕಿಟ್ ಕಳಚಿ, ಅದೇ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ ಸೋಂಕಿತ ರೋಗಿಯೊಂದಿಗೆ ಸೆಕ್ಸ್ ಮಾಡಿರುವುದು ರುಜುವಾತಾಗಿದ್ದು, ತಪ್ಪಿತಸ್ಥ ನರ್ಸ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಇಂಡೋನೇಷ್ಯಾದ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ. ಕೃತ್ಯದಲ್ಲಿ ಭಾಗಿಯಾದ ನರ್ಸ್ ಮತ್ತು ರೋಗಿ ಇಬ್ಬರನ್ನು ಅಲ್ಲಿನ ಅಶ್ಲೀಲ ವಿರೋಧಿ ಕಾನೂನಿನ ಅಡಿ ವಿಚಾರಣೆಗೆ ಒಳಪಡಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಹಿರಂಗವಾದ ನಂತರ ಘಟನೆ ಬೆಳಕಿಗೆ ಬಂದಿದೆ. ಬಳಿಕ ಇಬ್ಬರನ್ನೂ ವಿಚಾರಣೆಗ ಒಳಪಡಿಸಿದಾಗ, ಪಿಪಿಇ ಕಿಟ್ ಕಳಚಿ, ಕೊರೋನಾ ಸೋಂಕಿತನೊಂದಿಗೆ ಸೆಕ್ಸ್ ಮಾಡಿದ್ದು ಸತ್ಯ ಎಂದು ನರ್ಸ್ ತಪ್ಪೊಪ್ಪಿಕೊಂಡಿದ್ದಾಳೆ.