ಅಂತರಾಷ್ಟ್ರೀಯ

57ರಲ್ಲಿ ಮದುವೆಯಾದವನಿಗೆ ತೆರೆದ ಭಾಗ್ಯದ ಬಾಗಿಲು!

Pinterest LinkedIn Tumblr


ಇಂಗ್ಲೆಂಡ್​​: ಮದುವೆಗೆ ಒಂದು ವಯಸ್ಸಿನ ಮಿತಿಯನ್ನು ನಾವು ಕೊಟ್ಟುಕೊಂಡಿದ್ದೇವೆ. ಆದರೆ ವಯಸ್ಸು ಮೀರಿ, ವೃದ್ಧನೆನಿಸಿಕೊಳ್ಳುವ ವಯಸ್ಸಿನಲ್ಲಿ ಮದುವೆಯಾದ ವ್ಯಕ್ತಿಯೊಬ್ಬನಿಗೆ ಮದುವೆಯ ದಿನವೇ ಭಾಗ್ಯದ ಬಾಗಿಲು ತೆರೆದಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ.

ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!

ಇಂಗ್ಲೆಂಡ್​ನ ವಿಡ್ನೆಸ್‌ ನಗರ ನಿವಾಸಿ, 57 ವರ್ಷದ ರಿಚರ್ಡ್ ಪರ್ಸೆಲ್ ಇತ್ತೀಚೆಗೆ ತಮ್ಮ ಸ್ನೇಹೊತೆ ವಿಕ್ಟೋರಿಯಾರೊಂದಿಗೆ ದಾಂಪತ್ಯ ಜೀವನವನ್ನು ಆರಂಭಿಸಿದರು. ಮದುವೆಯ ಸಿದ್ಧತೆಯಲ್ಲಿ ನಿರತವಾಗಿದ್ದ ರಿಚರ್ಡ್​ಗೆ ತಮ್ಮ ಮೊಬೈಲ್​ ನೋಡಲು ಸಮಯವೇ ಸಿಕ್ಕಿರಲಿಲ್ಲವಂತೆ. ಮದುವೆಯೆಲ್ಲ ಮುಗಿದು, ಸಂಭ್ರಮ ಕೊನೆಯಾದ ಮೇಲೆ ಅವರು ಮೊಬೈಲ್​ ನೋಡಿದ್ದಾರೆ. ಆಗ ಅವರಿಗೆ ದೊಡ್ಡದೊಂದು ಸಂತೋಷದ ಸಂಗತಿ ಕಾಣಿಸಿಕೊಂಡಿದೆ.

ಮದುವೆಗೆ ಎರಡು ವಾರಗಳ ಹಿಂದೆ ರಿಚರ್ಡ್​ ಫುಟ್ಬಾಲ್​ ಆಟಕ್ಕೆ ಬೆಟ್​ ಕಟ್ಟಿದ್ದರು. ಅದರ ಆಟ ಅವರ ಮದುವೆಯ ದಿನದಂದೇ ಇತ್ತು. ರಿಚರ್ಡ್​ ಬೆಟ್​ ಕಟ್ಟಿದಂತೆಯೇ ಪಂದ್ಯ ಅಂತ್ಯವಾಗಿದ್ದು, ಅವರಿಗೆ 9.89 ಲಕ್ಷ ರೂಪಾಯಿ ಹಣ ಬಂದಿದೆ. ಆ ಹಣ ನೇರವಾಗಿ ರಿಚರ್ಡ್​ನ ಖಾತೆಗೆ ಜಮಾವಾಗಿದೆ. ಬಾಳಿಗೆ ಪತ್ನಿ ಬಂದ ಬೆನ್ನಲ್ಲೇ ರಿಚರ್ಡ್​ ಅವರ ಬ್ಯಾಂಕ್​ ಖಾತೆಗೂ ಹಣ ಬಂದಿದೆ.

ತಾನು ಬೆಟ್ಟಿಂಗ್​ನಲ್ಲಿ ಗೆದ್ದಿರುವ ವಿಚಾರ ತಿಳಿದು ಖುಷಿ ಪಟ್ಟ ರಿಚರ್ಡ್​, ತನ್ನ ಪತ್ನಿ ವಿಕ್ಟೋರಿಯಾಗೂ ಈ ವಿಚಾರವನ್ನು ತಿಳಿಸಿದ್ದಾರೆ. ಈ ವರ್ಷದ ಕ್ರಿಸ್​ಮಸ್​ನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರಂತೆ.

Comments are closed.