ಅಂತರಾಷ್ಟ್ರೀಯ

ವೇಗವಾಗಿ ಹರಡುತ್ತಿರುವ ಕೊರೊನಾ ಹೊಸ ಸ್ವರೂಪ: ಗಡಿ ಬಂದ್‌ ಮಾಡಿದ ದೇಶಗಳು

Pinterest LinkedIn Tumblr


ಲಂಡನ್‌: ಇಂಗ್ಲೆಂಡ್ ನಲ್ಲಿ ಹೊಸ ಸ್ವರೂಪದಲ್ಲಿ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಹಲವು ರಾಷ್ಟ್ರಗಳು ತಮ್ಮ ದೇಶದ ಗಡಿಭಾಗಗಳನ್ನು ಬಂದ್ ಮಾಡಿವೆ.

ಬ್ರಿಟನ್‌ ಸರ್ಕಾರ, ಈ ಹೊಸ ಸ್ವರೂಪದ ಕೊರೊನಾವೈರಸ್ ಕಾಣಿಸಿಕೊಂಡಿದ್ದನ್ನು ಅಧಿಕೃತವಾಗಿ ಘೋಷಿಸುತ್ತಿದ್ದಂತೆ ಜರ್ಮನಿ, ಇಟಲಿ, ಬೆಲ್ಜಿಯಂ, ಡೆನ್ಮಾರ್ಕ್, ಬಲ್ಗೇರಿಯಾ, ದಿ ಐರಿಷ್ ಗಣರಾಜ್ಯ, ಟರ್ಕಿ ಮತ್ತು ಕೆನಡಾ, ಫ್ರಾನ್ಸ್‌ ರಾಷ್ಟ್ರಗಳು ಎಲ್ಲ ಗಡಿಭಾಗಗಳನ್ನು ಬಂದ್‌ ಮಾಡಿವೆ.

ಐಸೋಲೇಷನ್, ಸೋಂಕು ಪರೀಕ್ಷಾ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿರುವ ಭಾರತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಬ್ರಿಟನ್‌ನಲ್ಲಿ ಕಟ್ಟು ನಿಟ್ಟಾಗಿ ನಾಲ್ಕನೇ ಹಂತದ ಲಾಕ್‌ಡೌನ್‌ ಘೋಷಿಸಲಾಗಿದೆ. ಅನಿವಾರ್ಯವಲ್ಲದ ಎಲ್ಲ ಸಾರಿಗೆ ಸಂಚಾರವನ್ನು ಬಂದ್‌ ಮಾಡಲಾಗಿದೆ.

ಇದರ ಜತೆಗೆ ಹಾಂಗ್‌ಕಾಂಗ್‌, ಇಸ್ರೇಲ್, ಇರಾನ್, ಕ್ರೊವೇಶಿಯಾ, ಅರ್ಜೆಂಟೀನಾ, ಚಿಲಿ, ಮೊರಾಕ್ಕೊ ಮತ್ತು ಕುವೈತ್ ರಾಷ್ಟ್ರಗಳಲ್ಲಿ ಬ್ರಿಟನ್‌ಗೆ ಪ್ರಯಾಣಕ್ಕೆ ನಿರ್ಬಂಧ ವಿಧಿಸಿವೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅಧ್ಯಕ್ಷತೆಯಲ್ಲಿ ಸರ್ಕಾರದ ತುರ್ತು ಸಮಿತಿ ಸಭೆ ನಡೆಸಿದ್ದು, ಫ್ರಾನ್ಸ್‌ ಸೇರಿದಂತೆ ದೇಶದ ಗಡಿ ಭಾಗಗಳಿಂದ ಲಾರಿ, ಫೆರ‍್ರಿ‌ ಸೇರಿದಂತೆ ಎಲ್ಲ ಸಾರಿಗೆ ಸಂಚಾರವನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.

Comments are closed.